ETV Bharat / state

ಬೋಳಿಯಾರು ಚೂರಿ ಇರಿತ: 6 ಮಂದಿ ಅರೆಸ್ಟ್, ಪ್ರಚೋದನಕಾರಿ ಘೋಷಣೆ ಘಟನೆಗೆ ಕಾರಣ-ಪೊಲೀಸ್ ಕಮೀಷನರ್ - Boliyar Stabbing Case

author img

By ETV Bharat Karnataka Team

Published : Jun 11, 2024, 9:19 PM IST

ಬೋಳಿಯಾರು ಚೂರಿ ಇರಿತ ಪ್ರಕರಣದ ಕುರಿತು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್​ವಾಲ್ ಮಾಹಿತಿ ನೀಡಿದರು.

city-police-commissioner-anupam-agarwal
ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್​ವಾಲ್ (ETV Bharat)

ಮಂಗಳೂರು(ದಕ್ಷಿಣ ಕನ್ನಡ): ನಗರದ ಬೋಳಿಯಾರುವಿನಲ್ಲಿ ಬಿಜೆಪಿ ಕಾರ್ಯಕರ್ತರಿಬ್ಬರ ಮೇಲೆ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್​ವಾಲ್ ತಿಳಿಸಿದ್ದಾರೆ.

ಶಕೀರ್(28), ಅಬ್ದುಲ್ ರಜಾಕ್‌(40), ಅಬೂಬಕ್ಕರ್ ಸಿದ್ದಿಕ್‌(35), ಸವಾದ್‌(18), ಅಬೂಬಕರ್ ಮತ್ತು ಮೋನು ಅಲಿಯಾಸ್ ಹಫೀಜ್‌(24) ಬಂಧಿತರು ಎಂದು ಅವರು ಮಾಹಿತಿ ನೀಡಿದರು.

ಆರೋಪಿಗಳು ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕಿತ್ತು. ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದರು.

ಘಟನೆಯ ಪೂರ್ಣ ಹಿನ್ನೆಲೆ: ''ರವಿವಾರ ಪ್ರಧಾನಿ ಮೋದಿಯವರ ಪದಗ್ರಹಣದ ಹಿನ್ನೆಲೆಯಲ್ಲಿ ಬೋಳಿಯಾರ್​ನಲ್ಲಿ ಮೆರವಣಿಗೆ ನಡೆಯುತ್ತಿತ್ತು. ಸುಮಾರು 30ರಿಂದ 40 ಜನರಿದ್ದರು. ಮೆರವಣಿಗೆ ಮಾಡುವಾಗ ಒಂದೆರೆಡು ಕಡೆ ಪ್ರಚೋದನಕಾರಿ ಸ್ಲೋಗನ್ ಕೂಗಿದ್ದಾರೆ. ರಾತ್ರಿ 8:45ರ ಸುಮಾರಿಗೆ ಈ ಮೆರವಣಿಗೆ ಮುಕ್ತಾಯವಾಗಿತ್ತು.''

''ನಂತರ ಒಂದು ಬೈಕ್​ನಲ್ಲಿ ಬಂದ ಮೂವರು ಬೋಳಿಯಾರು ಮಸೀದಿ ಬಳಿ ಮತ್ತೆ ಪ್ರಚೋದನಕಾರಿ ಸ್ಲೋಗನ್ ಕೂಗಿ ಮುಂದೆ ಹೋಗಿದ್ದಾರೆ. ಆಗ ಕೆಲವು ಮುಸ್ಲಿಂ ಯುವಕರು ಅವರನ್ನು ಹಿಂಬಾಲಿಸಿದ್ದಾರೆ. ಕಿಲೋ ಮೀಟರ್ ಮುಂದಿದ್ದ ಬಾರ್​ನಲ್ಲಿ ಮಾತಿನ ಚಕಮಕಿ ನಡೆದಿದೆ. ಸುಮಾರು 20 ಮುಸ್ಲಿಂ ಯುವಕರು ಸೇರಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರಿಗೆ ಚೂರಿಯಿಂದ ಇರಿದಿದ್ದಾರೆ. ಒಬ್ಬನಿಗೆ ಹೊಟ್ಟೆ, ಇನ್ನೊಬ್ಬನಿಗೆ ಬೆನ್ನಿಗೆ ಚುಚ್ಚಿದ್ದಾರೆ.''

''ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದೆವು. ವೈದ್ಯರು ಚಿಕಿತ್ಸೆ ನೀಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 20 ಜನರನ್ನು ಸಿಸಿಟಿವಿ ಫೂಟೇಜ್ ಮೂಲಕ ಪತ್ತೆ ಮಾಡಿದ್ದೇವೆ. ಅರೆಸ್ಟ್​ ಪ್ರೊಸೀಜರ್ ಪ್ರಾರಂಭಿಸಿದ್ದೇವೆ. ಇಲ್ಲಿಯವರೆಗೆ ಸುಮಾರು 6 ಜನರನ್ನು ಬಂಧಿಸಲಾಗಿದೆ. ಇನ್ನುಳಿದವರ ಬಂಧನ ಪ್ರಕ್ರಿಯೆ ನಡೆಯುತ್ತಿದೆ. ಮೂರು ತಂಡದ ಮೂಲಕ ತನಿಖೆ ನಡೆಯುತ್ತಿದೆ.''

"ಇದರ ಜೊತೆಗೆ ಬೋಳಿಯಾರು ಜುಮ್ಮಾ ಮಸೀದಿ ಕಮಿಟಿಯ ಅಧ್ಯಕ್ಷ ಪಿ.ಕೆ.ಅಬ್ದುಲ್ಲಾ ನೀಡಿರುವ ದೂರಿನಂತೆ ಕೊಣಾಜೆ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದ ಬಳಿಕ ಕೆಲವು ಕಾರ್ಯಕರ್ತರು ಮಸೀದಿ ಮುಂಭಾಗದಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿದ್ದರು. ಆ ಮೂಲಕ ಅಲ್ಲಿದ್ದ ಮುಸ್ಲಿಂ ಕಾರ್ಯಕರ್ತರನ್ನು ಪ್ರಚೋದಿಸಿದ್ದಾರೆಂದು ತಿಳಿಸಿದ್ದಾರೆ" ಎಂದು ಕಮೀಷನರ್ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಪದಗ್ರಹಣ: ವಿಜಯೋತ್ಸವದ ಬಳಿಕ ಇಬ್ಬರಿಗೆ ಚೂರಿ ಇರಿತ, ಐವರ ಬಂಧನ - Two people stabbed

ETV Bharat Logo

Copyright © 2024 Ushodaya Enterprises Pvt. Ltd., All Rights Reserved.