ETV Bharat / state

ಸಿಎಂ ಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ್ದು: ಕುಮಾರಸ್ವಾಮಿ - HD Kumaraswamy

author img

By ETV Bharat Karnataka Team

Published : Jul 13, 2024, 6:11 PM IST

ಜಾಗದ ಬದಲಿಗೆ ಮುಡಾದಿಂದ ತಮಗೆ 62 ಕೋಟಿ ರೂ. ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಯಾರಪ್ಪನ ಆಸ್ತಿ ಎಂದು 62 ಕೋಟಿ ಕೊಡಬೇಕು?. ಇದು ಪಿತ್ರಾರ್ಜಿತ ಆಸ್ತಿನಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮುಡಾ ಜಮೀನು ಸಂಬಂಧ ದಾಖಲೆ ಬಿಡುಗಡೆ ಮಾಡಿದ ಹೆಚ್​.ಡಿ.ಕುಮಾರಸ್ವಾಮಿ
ಮುಡಾ ಜಮೀನು ಸಂಬಂಧ ದಾಖಲೆ ಬಿಡುಗಡೆ ಮಾಡಿದ ಹೆಚ್​.ಡಿ.ಕುಮಾರಸ್ವಾಮಿ (ETV Bharat)
ಹೆಚ್.ಡಿ.ಕುಮಾರಸ್ವಾಮಿ (ETV Bharat)

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮುಖ್ಯಮಂತ್ರಿಗಳ ಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ ಸ್ವತ್ತು. ಡಿನೋಟಿಫಿಕೇಷನ್ ಬಳಿಕ ನಾಲ್ಕು ವರ್ಷ ಏನೂ ಬೆಳವಣಿಗೆ ಆಗಿಲ್ಲ. ಸತ್ತವರ ಹೆಸರಿನಲ್ಲಿ ಜಮೀನು ಡಿನೋಟಿಫಿಕೇಷನ್ ಆಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಜೆಡಿಎಸ್​ ಪಕ್ಷದ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಮೈದ ಖರೀದಿ ಮಾಡಿರುವ ಮೈಸೂರಿನ ಕೆಸರೆ ಜಮೀನಿಗೆ ಮುಡಾ ಭೂಸ್ವಾಧೀನ ಮಾಡಿ ಪರಿಹಾರ ನೀಡಲಾಗಿದೆ. ಹೀಗಿರುವಾಗ ಇದು ಮುಡಾಗೆ ಸೇರಿದ ಜಮೀನು ಆಗುತ್ತದೆ. ಈ ಜಮೀನನ್ನು ಡಿ-ನೋಟಿಫಿಕೇಷನ್ ಮಾಡಿ ಖರೀದಿಸಲಾಗಿದೆ. ಇದು ಕಾನೂನುಬಾಹಿರ'' ಎಂದು ಕೆಲ ದಾಖಲೆಗಳನ್ನೂ ಬಿಡುಗಡೆ ಮಾಡಿದರು.

''ಸಿಎಂ ಸಿದ್ದರಾಮಯ್ಯ ಪತ್ನಿಗೆ ದಾನ ಮಾಡಿದಾಗ ಕೃಷಿ ಭೂಮಿ ಎಂದು ತೋರಿಸುತ್ತಾರೆ. ಆದರೆ, ಆ ಜಾಗ ಭೂಪರಿವರ್ತನೆ ಆಗಿತ್ತು. ಜಮೀನಿನ ಹಿನ್ನಲೆಯನ್ನು ಯಾರೂ ಪರಿಶೀಲಿಸಲಿಲ್ಲವೆ?, ಭೂಮಿ ಬದಲಾವಣೆಯಾದಾಗ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದರು?. ಈ ಜಮೀನಿನ ಮೂಲದಾರರು ಲಿಂಗ ಆಲಿಯಾಸ್ ಜವರ ಎಂದಿದೆ. ಈ ಜಮೀನನ್ನು 1992ರಲ್ಲಿ ಮುಡಾ ವಶಕ್ಕೆ ಪಡೆಯುವ ನೋಟಿಫಿಕೇಷನ್ ಹೊರಡಿಸಿತ್ತು. 1995ರಲ್ಲಿ ಜಮೀನಿನ ಅಂತಿಮ ಭೂಸ್ವಾದೀನ ನೋಟಿಫಿಕೇಷನ್ ಆಗಿದೆ. 3 ಎಕರೆ 16 ಗುಂಟೆ ಜಮೀನಿಗೆ 1992ರಲ್ಲೇ ಮುಡಾದಿಂದ ಕೋರ್ಟ್‌ಗೆ ಹಣ ಸಂದಾಯ ಆಗಿದೆ. ಜಮೀನಿನ ಪೋತಿಯೂ ಆಗಿದೆ. ಆದರೂ 1998ರಲ್ಲಿ ಲಿಂಗನ ಹೆಸರು ಬರುತ್ತದೆ. ಡಿ-ನೋಟಿಫಿಕೇಷನ್ ಆಗುತ್ತದೆ. ಈ ಜಮೀನು ಡಿನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದರು'' ಎಂದು ವಿವರಿಸಿದರು.

1988ರಲ್ಲಿ ಲಿಂಗ ಅಲಿಯಾಸ್ ಜವರ ಹೆಸರಿನಲ್ಲಿ ಡಿನೋಟಿಫಿಕೇಷನ್ ಆಗಿದೆ. 2004ರಲ್ಲಿ ಮಲ್ಲಿಕಾರ್ಜುನಸ್ವಾಮಿ ಜಮೀನು ಖರೀದಿ ಮಾಡುತ್ತಾರೆ. 2005ರಲ್ಲಿ ಮಲ್ಲಿಕಾರ್ಜುನಸ್ವಾಮಿ ಭೂಮಿ ಬದಲಾವಣೆಗೆ ಅರ್ಜಿ ಸಲ್ಲಿಸುತ್ತಾರೆ. ಆಗ ಸಿದ್ದರಾಮಯ್ಯನವರೇ ಉಪಮುಖ್ಯಮಂತ್ರಿ ಆಗಿದ್ದರು. ಭೂಮಿ ಬದಲಾವಣೆಗೆ ಅರ್ಜಿ ಹಾಕಿದಾಗ ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು?. ಜಮೀನಿನ ಹಿನ್ನಲೆ ಪರಿಶೀಲಿಸಲಿಲ್ಲವೆ'' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

''ಜಾಗದ ಬದಲಿಗೆ ಮುಡಾದಿಂದ ತಮಗೆ 62 ಕೋಟಿ ರೂ. ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಯಾರಪ್ಪನ ಆಸ್ತಿ ಎಂದು 62 ಕೋಟಿ ರೂ. ಕೊಡಬೇಕು?. ಇದು ಪಿತ್ರಾರ್ಜಿತ ಆಸ್ತಿನಾ?, ಯಾರ ಬಳಿ ಖರೀದಿ ಮಾಡಿದ್ದಾರೆ ಎಲ್ಲವೂ ಗೊತ್ತಿದೆ ಎಲ್ಲ ದಾಖಲೆ ಇದೆ'' ಎಂದು ದಾಖಲೆಗಳನ್ನು ಪ್ರದರ್ಶಿಸಿದ ಅವರು, 'ಇದು ಹಿಟ್ ಅಂಡ್ ರನ್ ಅಲ್ಲ' ಎಂದು ತಿರುಗೇಟು ನೀಡಿದರು.

ಚಂದ್ರಶೇಖರ್ ಆತ್ಮಹತ್ಯೆ ಅಲ್ಲ, ಹತ್ಯೆ ಎಂದು ಪರಿಗಣನೆ - ಕುಮಾರಸ್ವಾಮಿ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣದ ಸಂಬಂಧವೂ ವಾಗ್ದಾಳಿ ನಡೆಸಿದ ಹೆಚ್​ಡಿಕೆ, ''ಆಡಳಿತದಲ್ಲಿ ಬಿಗಿ ಇದ್ದಿದ್ದರೆ ಇದು ಆಗುತ್ತಿರಲಿಲ್ಲ. ನಿಗಮದಲ್ಲಿ 187 ಕೋಟಿ ಹಣದಲ್ಲಿ 94 ಕೋಟಿ ರೂ. 10-15 ಬೇನಾಮಿ ಖಾತೆಗಳಿಗೆ ಐದರಿಂದ ಮೂರು ಕೋಟಿ ಹೋಗಿದೆ. ಲೋಕಸಭಾ ಚುನಾವಣೆ ನೀತಿ ಜಾರಿಯಾದ ಸಂದರ್ಭದಲ್ಲಿ ಹೋಗಿದೆ. ಯಾವ ಯಾವ ಅಕೌಂಟ್​ಗೆ ಹಾಕಿಕೊಂಡಿದ್ದಾರೆ. ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡರು. ಡೆತ್ ನೋಟ್ ಇಲ್ಲದಿದ್ದರೆ ಏನು ಮಾಡುತ್ತಿದ್ದೀರಿ ಸಿದ್ದರಾಮಯ್ಯ ಅವರೇ?'' ಎಂದು ಪ್ರಶ್ನಿಸಿದರು.

''ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಒಂದು ತಿಂಗಳಿಂದ ತೋರಿಸ್ತಾ ಇದ್ದೀರಾ?. ಚಂದ್ರಶೇಖರ್ ಆತ್ಮಹತ್ಯೆ ಅಂತಾ ಹೇಳ್ತೀರಾ. ಈ ಪ್ರಕರಣವನ್ನು ಆತ್ಮಹತ್ಯೆ ಅಂತ ಹೇಳ್ತೀರಾ? ಅಥವಾ ಸರ್ಕಾರದಿಂದ ಕೊಲೆ ಅಂತಾ ಹೇಳ್ತೀರಾ?. ಇವತ್ತು ಹಿಂದುಳಿದ ವರ್ಗಗಳ ರಕ್ಷಣೆ ಪಡೆಯೋಕೆ ಹೋಗಿದ್ದೀರಾ?. ನಾನು 2ನೇ ಬಾರಿ ಮುಖ್ಯಮಂತ್ರಿಯಾಗಿದ್ದಕ್ಕೆ ಸಹಿಸಿಕೊಳ್ತಿಲ್ಲವೆಂದು ಸಿಎಂ, ಸಿಎಂ ಪುತ್ರ ಹೇಳಿದ್ದಾರೆ. ಆ ಸಮಾಜದ ಅಭಿವೃದ್ಧಿಗೆ ಇಟ್ಟ ಹಣವನ್ನು ದರೋಡೆ ಮಾಡಿದ್ದೀರಾ'' ಎಂದು ವಾಗ್ದಾಳಿ ನಡೆಸಿದರು.

ನಿಮ್ಮ ಹಿಂದಿನ ಸರ್ಕಾರದಲ್ಲಿ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡರು. ರಕ್ಷಣೆ ಕೊಟ್ಟಿದ್ದೀರಾ ಮುಖ್ಯಮಂತ್ರಿಗಳೇ?. ಇವತ್ತು ಹಿಂದುಳಿದ ವರ್ಗಗಳ ರಕ್ಷಣೆ ಪಡೆದುಕೊಂಡಿದ್ದೀರಾ?. ನಾನು ಆ ಕುರುಬ ಸಮುದಾಯ ಯುವಕನ ಪರ ಧ್ವನಿ ಎತ್ತಿದೆ. ಚಂದ್ರಶೇಖರ್ ಆತ್ಮಹತ್ಯೆ ಅಂತ ಹೇಳಲ್ಲ. ಸರ್ಕಾರದಲ್ಲಿ ನಡೆದ ಹಗರಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌ ಇಲ್ಲಿ ನಿಮ್ಮ ಎಸ್ಐಟಿ ಯಾವ ರೀತಿ ನಡೆದುಕೊಂಡಿದೆ. ಡೆತ್​ನೋಟ್​​ನಲ್ಲಿ ಮಂತ್ರಿ ಸೂಚನೆ ಮೇರೆಗೆ ಅಂತಾ ಬರೆದಿದ್ದಾರೆ. ಯಾರಪ್ಪ ಇಲ್ಲಿ ಡಿಜಿಪಿಗೆ ನೇರವಾಗಿ ದೂರು ನೀಡಬಹುದು. ನೇರವಾಗಿ ದೂರು ಪಡೆದು ನೇರವಾಗಿ ಪೊಲೀಸ್ ಠಾಣೆಗೆ ಡಿಜಿಪಿ ಕಳಿಸುತ್ತೀರಾ?. ಯಾರನ್ನು ಬಂಧಿಸಿದ್ದೀರಿ?. ಇಡಿಯವರು ಯಾಕೆ ಬಂದಿದ್ದಾರೆ?. ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಅವರಿಗೆ ತನಿಖೆ ಮಾಡೋಕೆ ಅಧಿಕಾರ ಇದೆ'' ಎಂದು ಹೇಳಿದರು.

ಕಾನ್ಸ್​ಟೇಬಲ್ ರೀತಿ ಡಿಜಿಪಿ ಕೆಲಸ: ಮುಂದುವರೆದು, ''ರಾಮನಗರದಲ್ಲಿ ನಡೆದ ಪ್ರತಿಭಟನೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕೇಸ್ ದಾಖಲಿಸುವ ಬಗ್ಗೆ ಡಿಜಿಪಿ ಕಚೇರಿಯಲ್ಲಿ ರಾತ್ರಿ 11 ಗಂಟೆವರೆಗೂ ಚರ್ಚೆ ಮಾಡಿದ್ದಾರೆ. ಹೆಚ್.ಡಿ.ದೇವೇಗೌಡರ ಕುಟುಂಬದಲ್ಲಿ ಎಲ್ಲರನ್ನೂ ಮುಗಿಸಿದ್ದೀವಿ.‌ ನಿಖಿಲ್ ಒಬ್ಬ ಉಳಿದಿದ್ದಾನೆ. ಅವನನ್ನೂ ಎ1 ಆರೋಪಿ ಮಾಡುಲು ಹೊರಟ್ಟಿದಿರಾ?. ಸಚಿವರು ಹೇಳಿದ್ರು ಅಂತಾ ಡಿಜಿಪಿ ಏನು ಮಾಡಲು ಹೊರಟಿದ್ರು. ಡಿಜಿಪಿ ಕಾನ್ಸ್​ಟೇಬಲ್ ರೀತಿ ಕೆಲಸ ಮಾಡುತ್ತಿದ್ದಾರೆ'' ಎಂದು ಡಿಜಿಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ: ಅಕ್ರಮದ ಸಮರ್ಥನೆಯನ್ನು ಸಿದ್ದರಾಮಯ್ಯನ ಅಂತರಾತ್ಮವೂ ಒಪ್ಪಲ್ಲ - ಸಿ.ಟಿ.ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.