ETV Bharat / state

ಮೈಸೂರಿನಲ್ಲಿ ಕಳೆಗಟ್ಟಿದ ಶ್ರೀರಾಮ ಸಂಭ್ರಮ - ram mandir inauguration

ಮೈಸೂರಿನಲ್ಲಿ ರಾಮಸಂಭ್ರಮ ಜೋರಾಗಿದೆ. ಎಲ್ಲೆಡೆ ಸೆಲ್ಫಿ ಪಾಯಿಂಟ್, ರಾಮನ ಫ್ಲೆಕ್ಸ್​ಗಳು ರಾರಾಜಿಸುತ್ತಿವೆ.

mysuru
ಮೈಸೂರಲ್ಲಿ ರಾಮಜಪ
author img

By ETV Bharat Karnataka Team

Published : Jan 22, 2024, 10:30 AM IST

ಮೈಸೂರು: ಧಾರ್ಮಿಕ, ಐತಿಹಾಸಿಕವಾಗಿ ಮಹತ್ವ ಪಡೆದಿರುವ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯನ್ನು ಸಾಕ್ಷೀಕರಿಸಲು ಸಾಂಸ್ಕೃತಿಕ ನಗರಿ ಮೈಸೂರಿನ ಜನತೆ ಸನ್ನದ್ಧರಾಗಿದ್ದಾರೆ. ನಗರದಲ್ಲಿ ರಾಮಜಪ ಅನವರತವಾಗಿ ನಡೆಯುತ್ತಿದೆ. ಹಿಂದೂಪರ ಸಂಘಟನೆಗಳು, ಸಂಘ, ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿವೆ. ದೇಗುಲಗಳಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಏರ್ಪಡಿಸಲಾಗಿದೆ.

ನಗರದ ಪ್ರಮುಖ ವೃತ್ತಗಳು, ಮುಖ್ಯ ರಸ್ತೆಗಳಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಯನ್ನು ಸ್ವಾಗತಿಸುವ ಫ್ಲೆಕ್ಸ್​ಗಳು ರಾರಾಜಿಸುತ್ತಿವೆ. ಹೀಗಾಗಿ, ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ವಿವಿಧೆಡೆ ವಿಶೇಷ ಪೂಜೆ: ಶಿವರಾಮ ಪೇಟೆಯ ಶ್ರೀರಾಮನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ತೆಲುಗು ರೆಡ್ಡಿ ಸಂಘದಿಂದ ತಿಲಕ್‌ನಗರದ ಮಂದಿರದಲ್ಲಿ ನೂತನ ವಿಗ್ರಹ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಕಾಂಗ್ರೆಸ್​ ಸೇವಾದಳದಿಂದ ಸೀತಾರಾಮಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಮತ್ತು ಸರ್ವ ಧರ್ಮೀಯ ರಾಮ ಭಕ್ತರಿಂದ ರಕ್ತ ತಿಲಕ ಧ್ವಜವನ್ನು ಅಯೋಧ್ಯೆ ರಾಮ ಟ್ರಸ್ಟ್‌ಗೆ ರವಾನಿಸುವ ಕಾರ್ಯ ಜರುಗಲಿದೆ.

ಸೆಲ್ಫಿ ಪಾಯಿಂಟ್: ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯ ಆವರಣದಲ್ಲಿ ಬಿಲ್ಲುಹಿಡಿದ ಮಂದಸ್ಮಿತ ರಾಮನ ಕಟೌಟ್ ನಿರ್ಮಿಸಲಾಗಿದೆ. ಶ್ರೀರಾಮ ಮೂರ್ತಿಯೊಂದಿಗೆ ಫೋಟೋ ತೆಗೆದುಕೊಳ್ಳುವ ಸಲುವಾಗಿ ಸೆಲ್ಫಿ ಪಾಯಿಂಟ್ ಮಾಡಲಾಗಿದೆ.

ಈಗಾಗಲೇ ಆಟೋ, ದ್ವಿಚಕ್ರ ವಾಹನಗಳ ಮೇಲೆಲ್ಲ ರಾಮ ಚಿತ್ರವಿರುವ ಕೇಸರಿ ಧ್ವಜಗಳು ರಾಜಾಜಿಸುತ್ತಿವೆ. ಭಗವಾಧ್ವಜಗಳು ಹಾರಾಡುತ್ತಿವೆ. ಬಿಜೆಪಿ ಕೆಲವು ಮುಖಂಡರು ಕೇಸರಿ ಧ್ವಜಗಳನ್ನು ವಿತರಣೆ ಮಾಡುವ ಮೂಲಕ ಮಂದಿರ ಉದ್ಘಾಟನೆಯನ್ನು ಸಂಭ್ರಮಿಸಲು ಜನತೆಗೆ ಕರೆ ನೀಡುತ್ತಿದ್ದಾರೆ.

ಭರ್ಜರಿ ವ್ಯಾಪಾರ: ಮಾರುಕಟ್ಟೆಗಳಲ್ಲಿ ರಾಮನ ಚಿತ್ರವುಳ್ಳ ಕೇಸರಿ ಧ್ವಜ, ಮಾಲೆ, ಭಾವಚಿತ್ರಗಳ ಚಿಕ್ಕಗಡಿಯಾರಗಳ ಖರೀದಿ ಜೋರಾಗಿದೆ. ಹೂ-ಹಣ್ಣುಗಳ ಖರೀದಿ ಭರಾಟೆಯೂ ನಡೆಯುತ್ತಿದೆ.

ಹಣತೆ ಖರೀದಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಭಕ್ತರು ಮನೆಗಳಲ್ಲಿ ದೀಪ ಹಚ್ಚಲು ಕರೆ ನೀಡಿರುವ ಕಾರಣ ತಮ್ಮ ಮನೆ ಮನೆಗಳಲ್ಲಿ ಇಂದು ಸಂಜೆ ದೀಪ ಬೆಳಗಲು ದೀಪಗಳ ಖರೀದಿ ನಡೆಯುತ್ತಿದೆ. ಕುವೆಂಪುನಗರದ ಸೌಗಂಕಾ ಉದ್ಯಾನದಲ್ಲಿ 100x80 ಅಡಿಯಲ್ಲಿ ಬಣ್ಣ ಬಣ್ಣದ ರಂಗೋಲಿಯಲ್ಲಿ ಶ್ರೀರಾಮನ ಕಲಾಕೃತಿ ಮೂಡಲಿದೆ.

ಅರಮನೆಯಲ್ಲಿ ವಿಶೇಷ ಪೂಜೆ: ಅರಮನೆ ಮಂಡಳಿ ಮತ್ತು ಮುಜರಾಯಿ ಇಲಾಖೆ ಜಂಟಿ ಆಶ್ರಯದಲ್ಲಿ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸಂದರ್ಭದಲ್ಲಿ ಮೈಸೂರು ಅರಮನೆ ಮುಂಭಾಗ ಪೂರ್ಣಾಹುತಿ ಮಹಾಮಂಗಳಾರತಿ, ರಾಮ ತಾರಕ ಹೋಮ ನೆರವೇರಲಿದೆ.

ಇದನ್ನೂ ಓದಿ: ಅಂದು ಕರ ಸೇವೆಗೆ ತೆರಳಿದ್ದಾಗ ಪೊಲೀಸರ ಏಟು; ಇಂದು ಅಯೋಧ್ಯಾ ವೈಭವ ಕಂಡು ಭಾವುಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.