ETV Bharat / state

ಮುಂಗಾರು ಆರಂಭದಲ್ಲೇ ಕಾವೇರಿ ಸಂಘರ್ಷ: ತಮಿಳುನಾಡಿಗೆ ನೀರು ಬಿಡದಿರಲು ಕರ್ನಾಟಕ ನೀಡಿದ ಸಕಾರಣಗಳಿವು - Cauvery Conflict - CAUVERY CONFLICT

ಮುಂಗಾರು ಆರಂಭದಲ್ಲೇ ಕಾವೇರಿ ಸಂಘರ್ಷ ಶುರುವಾಗಿದೆ. ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ 19 ಟಿಎಂಸಿ ಕೊರತೆಯಿರುವುದರಿಂದ ಕರ್ನಾಟಕವು ತಮಿಳುನಾಡಿಗೆ ನೀರು ಬಿಡದಿರಲು ನಿರ್ಧರಿಸಿದೆ.

Monsoon  Cauvery Conflict  Cauvery  Bengaluru
ಕಾವೇರಿ ನದಿ (IANS)
author img

By ETV Bharat Karnataka Team

Published : Jul 14, 2024, 7:51 AM IST

ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷಿಸಿದಷ್ಟು ಅಲ್ಲವಾದರೂ ಕಳೆದ ಬಾರಿಗೆ ಹೋಲಿಸಿದರೆ ಉತ್ತಮ‌ ಮಳೆಯಾಗುತ್ತಿದೆ. ಬರಿದಾಗಿದ್ದ ಪ್ರಮುಖ ಜಲಾಶಯಗಳು ಭರ್ತಿಯಾಗುತ್ತಿವೆ. ಆದರೆ, ಇತ್ತ ತಮಿಳುನಾಡು ಜೊತೆಗಿನ ಕಾವೇರಿ ಸಂಘರ್ಷ ಮುಂಗಾರು ಆರಂಭದಲ್ಲೇ ಶುರುವಾಗಿದೆ. ರಾಜ್ಯದ ಕಾವೇರಿ ಅಚ್ಚುಕಟ್ಟು ಪ್ರದೇಶಗಳ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದರೂ, ತಮಿಳುನಾಡಿಗೆ ಕರ್ನಾಟಕ ನೀರು ಬಿಡದಿರಲು ಕಾರಣ ಏನು ಎಂಬ ವರದಿ ಇಲ್ಲಿದೆ.

ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ಸಂಘರ್ಷ ಮುಂಗಾರು ಆರಂಭದಲ್ಲೇ ಶುರುವಾಗಿದೆ.‌ ಮುಂಗಾರು ತಡವಾಗಿ ಆರಂಭವಾಗಿದ್ದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಬಹುತೇಕ ಬರಿದಾಗಿದ್ದ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹಂತ-ಹಂತವಾಗಿ ಭರ್ತಿಯಾಗುತ್ತಿವೆ.‌ ಈ ಸನ್ನಿವೇಶದಲ್ಲಿ ಕಾವೇರಿ ನೀರು ಬಿಡುವಂತೆ ತಮಿಳುನಾಡು ಪಟ್ಟು ಹಿಡಿದಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್​ಸಿ) ಸಭೆಯಲ್ಲಿ ತಮಿಳುನಾಡಿಗೆ ನಿತ್ಯ ಜುಲೈ 12ರಿಂದ ಜುಲೈ 31ರವರೆಗೆ ನಿತ್ಯ 1 ಟಿಎಂಸಿ ಸರಾಸರಿ (11,500 ಕ್ಯೂಸೆಕ್‌) ಕಾವೇರಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯಕ್ಕೆ ಶಿಫಾರಸು ಮಾಡಲಾಗಿದೆ. ಆದರೆ, ಮುಂಗಾರು ನಿರೀಕ್ಷಿಸಿದಷ್ಟು ಆಗದೇ ಹೋದರೂ, ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ನಾಲ್ಕು ಜಲಾಶಯಗಳು ತಕ್ಕಮಟ್ಟಿಗೆ ಭರ್ತಿಯಾಗುತ್ತಿರುವ ವೇಳೆ ಈ ಶಿಫಾರಸು ರಾಜ್ಯಕ್ಕೆ ಆಘಾತ ನೀಡಿದೆ. ಜುಲೈ ಅಂತ್ಯದವರೆಗೆ ಮಳೆ, ನೀರಿನ ಸಂಗ್ರಹದ ಸ್ಥಿತಿಗತಿ ನೋಡಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಬಗ್ಗೆ ತೀರ್ಮಾನಿಸಬೇಕು ಎಂಬುದು ರಾಜ್ಯದ ವಾದವಾಗಿತ್ತು. ಆದರೆ, ಸಿಡಬ್ಲ್ಯೂಆರ್​ಸಿ ನೀರು ಬಿಡಲು ಶಿಫಾರಸು ಮಾಡಿದೆ.

ನಾಲ್ಕು ಜಲಾಶಯಗಳ ನೀರಿನ‌ ಮಟ್ಟ ಹೇಗಿದೆ?:

  • ಜುಲೈ 13ಕ್ಕೆ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ನೀರಿನ‌ ಮಟ್ಟ ನಿಧಾನವಾಗಿ ಏರಿಕೆ ಕಾಣುತ್ತಿದೆ. ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಳೆದ ಬಾರಿಗಿಂತ ಆಶಾದಾಯಕವಾಗಿದೆ. ಆದರೆ, ಸಂಪೂರ್ಣ ಬರಿದಾಗಿದ್ದ ಕೆಆರ್​ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳು ಇನ್ನೂ ಸಂಪೂರ್ಣ ಭರ್ತಿಯಾಗಲು ಜುಲೈ ತಿಂಗಳಾಂತ್ಯದವರೆಗೂ ಸಮಯಬೇಕಾಗಬಹುದು.‌
  • ಕೆಆರ್​ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಶನಿವಾರದವರೆಗೆ 104.60 ಅಡಿ ಭರ್ತಿಯಾಗಿದೆ. ಅಂದರೆ ಶೇ.54ರಷ್ಟು ನೀರು ಸಂಗ್ರಹವಾಗಿದೆ. ನಿತ್ಯ ಒಳಹರಿವು 3,406 ಕ್ಯೂಸೆಕ್ ಇದ್ದು, ನಿತ್ಯ ಹೊರ ಹರಿವು 2,257 ಕ್ಯೂಸೆಕ್ ಇದೆ.
  • ಕಬಿನಿ ಜಲಾಶಯದ ಗರಿಷ್ಟ ಮಟ್ಟ 2,284 ಅಡಿ ಇದೆ. ಜುಲೈ 13ವರೆಗೆ 2,283 ಅಡಿಯಷ್ಟು ಭರ್ತಿಯಾಗಿದೆ. ಅಂದರೆ ಶೇ. 96ರಷ್ಟು ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ನಿತ್ಯ ಒಳಹರಿವು 6424 ಕ್ಯೂಸೆಕ್ ಇದ್ದರೆ, ಹೊರಹರಿವು ನಿತ್ಯ 5,000 ಕ್ಯೂಸೆಕ್ ಇದೆ.
  • ಹೇಮಾವತಿ ಜಲಾಶಯದ ಗರಿಷ್ಟ ಮಟ್ಟ 2,922 ಅಡಿ ಇದೆ. ಶನಿವಾರದವರೆಗೆ 2,901 ಅಡಿಯಷ್ಟು ಭರ್ತಿಯಾಗಿದೆ. ಅಂದರೆ ಶೇ. 56ರಷ್ಟು ನೀರು ಸಂಗ್ರಹವಾಗಿದೆ. ಒಳಹರಿವು ನಿತ್ಯ 4,538 ಕ್ಯೂಸೆಕ್ ಇದ್ದರೆ, ಹೊರ ಹರಿವು 250 ಕ್ಯೂಸೆಕ್​ ಇದೆ.
  • ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿ ಇದೆ. ಶನಿವಾರದವರೆಗೆ 2,852 ಅಡಿ ಭರ್ತಿಯಾಗಿದೆ‌. ಶೇ. 76ರಷ್ಟು ನೀರು ಸಂಗ್ರಹವಾಗಿದೆ. ಒಳಹರಿವು ನಿತ್ಯ 3038 ಕ್ಯೂಸೆಕ್ ಇದ್ದರೆ, ಹೊರಹರಿವು ನಿತ್ಯ 200 ಕ್ಯೂಸೆಕ್ ಇದೆ.

ಕರ್ನಾಟಕ ನೀರು ಬಿಡಲು ಒಲ್ಲೆ ಎನ್ನಲು ಕಾರಣವೇನು?:

  • ಕರ್ನಾಟಕ ಸಿಡಬ್ಲ್ಯೂಆರ್​ಸಿ ಶಿಫಾರಸಿನಂತೆ ತಮಿಳುನಾಡಿಗೆ ನೀರು ಬಿಡಲು ಒಲ್ಲೆ ಎಂದಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಲು ಕರ್ನಾಟಕ ನಿರ್ಧರಿಸಿದ್ದು, ಸರ್ವಪಕ್ಷ ಸಭೆ ನಡೆಸಿ ಮುಂದಿನ ನಿಲುವಿನ ಬಗ್ಗೆ ತೀರ್ಮಾನಿಸಲಿದೆ.
  • ಕರ್ನಾಟಕ ಸದ್ಯ ನೀರು ಬಿಡದಿರಲು ಕೆಲ ಸಕಾರಣಗಳನ್ನು ನೀಡುತ್ತಿದೆ. ಕರ್ನಾಟಕದ ವಾದ, ಜೂನ್​ 1ರಿಂದ ಜುಲೈ 9ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಟ್ಟು ಒಳಹರಿವು 41.651 ಟಿಎಂಸಿ ಇತ್ತು. ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಟ್ಟು ಒಳಹರಿವಿನ ಕೊರತೆ ಶೇ.28.71 ಇದೆ. ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿನ ಸಂಗ್ರಹಣೆ 60 ಟಿಎಂಸಿ ಇದ್ದು, ಮೆಟ್ಟೂರಿನಿಂದ 4.905 ಟಿಎಂಸಿ ಮತ್ತು ಭವಾನಿಯಿಂದ 0.618 ಟಿಎಂಸಿ (ಒಟ್ಟು 5.542 ಟಿಎಂಸಿ) ನದಿಗೆ ಬಿಡುಗಡೆ ಮಾಡಿರುವುದರ ಜೊತೆಗೆ ತಮಿಳುನಾಡಿನ ಮೂರು ಜಲಾಶಯಗಳಲ್ಲಿ 24.705 ಟಿಎಂಸಿ ಇದೆ‌ ಎಂಬ ಕಾರಣ ಮುಂದಿಟ್ಟಿದೆ.
  • ಜೂನ್ 1ರಿಂದ ಜುಲೈ 2ರವರೆಗೆ ರಾಜ್ಯದಲ್ಲಿ ವಾಡಿಕೆಯಂತೆ 216.5 ಮಿ.ಮೀ. ಮಳೆಯಾಗಬೇಕಿದ್ದು, 212.5 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಂ-ಕಿಅಂಶಗಳಿಂದ ತಿಳಿದುಬಂದಿದೆ. ಅಂದರೆ ವಾಡಿಕೆಗಿಂತ 2% ಮಳೆ ಕೊರತೆಯಾಗಿದೆ‌. ಜುಲೈ ತಿಂಗಳ ವಾಡಿಕೆ ಮಳೆ 252.2 ಮಿ.ಮೀ. ಆಗಿದೆ. ಈ ತಿಂಗಳು ವಾಡಿಕೆ ಮಳೆಯಾಗುವ ನಿರೀಕ್ಷೆ ಇರಿಸಲಾಗಿದೆ‌. ಕಾವೇರಿ ಜಲಾನಯನ ಪ್ರದೇಶದ ಎಲ್ಲಾ 4 ಜಲಾಶಯಗಳಲ್ಲಿ ಒಟ್ಟು ಕೇವಲ 60 ಟಿಎಂಸಿ ನೀರು ಲಭ್ಯವಿದೆ. ಕೃಷಿ ಚಟುವಟಿಕೆಗಳಿಗೂ ನಾವು ನೀರು ಒದಗಿಸಬೇಕಾಗಿದೆ. ಮಳೆ ಕೊರತೆಯನ್ನು ಗಮನದಲ್ಲಿರಿಸಿ ಜುಲೈ ಅಂತ್ಯದವರೆಗೆ ಕಾಯುವಂತೆ ಕರ್ನಾಟಕ ವಾದಿಸುತ್ತಿದೆ.
  • ಮಳೆ ಮತ್ತು ನೀರು ಕೊರತೆ ಜೊತೆಗೆ ಕೃಷಿಗೂ ನೀರು ಕೊಡಬೇಕಾಗಿರುವುದರಿಂದ ಎಲ್ಲಾ ಕಾರಣಗಳಿಗೆ ನೀರು ಕೊಡಲು ಆಗುವುದಿಲ್ಲ. ಹಾರಂಗಿ ಅಣೆಕಟ್ಟೆಯಲ್ಲಿ 76%, ಹೇಮಾವತಿ 56%, ಕೆಆರ್​ಎಸ್​ನಲ್ಲಿ 54%, ಕಬಿನಿ ಜಲಾಶಯದಲ್ಲಿ 96% ನೀರು ಸಂಗ್ರಹವಾಗಿದೆ. ನಾಲ್ಕು ಜಲಾಶಯಗಳಲ್ಲಿ 63% ಸರಾಸರಿ ನೀರು ಇದೆ. 19-20 ಟಿಎಂಸಿ ನೀರು ಕೊರತೆ ಇದೆ. ಹೀಗಾಗಿ, ಸದ್ಯ ತಮಿಳುನಾಡಿಗೆ 1 ಟಿಎಂಸಿ ನೀರು ಬಿಡುಗಡೆ ಕಷ್ಟ ಸಾಧ್ಯ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಮುಂಗಾರು ಅಧಿವೇಶನ: ರಾಜ್ಯ ಸರ್ಕಾರಕ್ಕೆ ಚಳಿ ಬಿಡಿಸಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ತಯಾರಿ - Karnataka Legislature Session

ETV Bharat Logo

Copyright © 2024 Ushodaya Enterprises Pvt. Ltd., All Rights Reserved.