ETV Bharat / state

ಕೇಕ್ ಜಗತ್ತಿನ ಅದ್ಭುತ ಲೋಕದ ಪಯಣಕ್ಕೆ 50 ವರ್ಷಗಳ ಸಂಭ್ರಮ: ಇಂದಿನಿಂದ ಕೇಕ್ ಶೋ ಆರಂಭ - CAKE SHOW

ಪ್ಯಾಲೇಸ್ ಗ್ರೌಂಡ್​ನಲ್ಲಿ ಇಂದಿನಿಂದ ಕೇಕ್​​ ಉತ್ಸವ ಆರಂಭವಾಗಲಿದೆ. ಶೋನಲ್ಲಿ ಡೈನೋಸಾರ್ ವರ್ಲ್ಡ್ ಕೇಕ್​ನಿಂದ ಹಿಡಿದು, ರಾಮ ಮಂದಿರ ಕೇಕ್​ ಕೂಡ ಮೂಡಿ ಬಂದಿದೆ.

CELEBRATING 50 YEARS OF CAKE SHOW  BENGALURU  ಕೇಕ್ ಶೋ  PALACE GROUND CAKE SHOW
ಕೇಕ್ ಜಗತ್ತಿನ ಅದ್ಭುತ ಲೋಕದ ಪಯಣಕ್ಕೆ 50 ವರ್ಷಗಳ ಸಂಭ್ರಮ: ಇಂದಿನಿಂದ ಕೇಕ್ ಶೋ ಆರಂಭ (ETV Bharat)
author img

By ETV Bharat Karnataka Team

Published : Dec 13, 2024, 7:21 AM IST

ಬೆಂಗಳೂರು: ಕ್ರಿಸ್‌ಮಸ್​​​​​, ಹೊಸ ವರ್ಷವೆಂದರೆ ಬೆಂಗಳೂರಿಗರ ಮನಸ್ಸಿನಲ್ಲಿ ಮೂಡುವ ಚಿತ್ರ ವಾರ್ಷಿಕ ಕೇಕ್​ ಉತ್ಸವದ್ದಾಗಿದೆ. ನಗರದಲ್ಲಿ ಕೇಕ್​​ ಉತ್ಸವ ಎಂದ ಕೂಡಲೇ ನಮ್ಮ ನೆನಪಿಗೆ ಬರುವುದು ಉತ್ಸವದ ಜನಕ ಸಿ. ರಾಮಚಂದ್ರ ಅವರ ದೂರದೃಷ್ಟಿ, ಸೃಜನಶೀಲತೆಯ ಪ್ರತಿಬಿಂಬವಾದ ಕೇಕ್ ಶೋ. ಈಗ ಈ ಶೋ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.

ಸೃಜನಶೀಲತೆ ಮತ್ತು ಕರಕುಶಲತೆಯ ವಿಸ್ಮಯಕಾರಿ ಪ್ರತಿರೂಪವಾಗಿ ಬೆಳೆದಿರುವ ಕೇಕ್ ಉತ್ಸವ ಈಗ ಮತ್ತೆ ನಗರದಲ್ಲಿನ ಕೇಕ್ ಪ್ರಿಯರನ್ನು ಪ್ಯಾಲೇಸ್ ಗ್ರೌಂಡ್​ನ ಕಡೆ ಇಂದಿನಿಂದ ಕೈ ಬೀಸಿ ಕರೆಯಲಿದೆ. ಇನ್ಸ್ಟಿಟ್ಯೂಟ್​​ ಆಫ್​ ಬೇಕಿಂಗ್​ ಮತ್ತು ಕೇಕ್​ ಆರ್ಟ್ಸ್​ ಹಾಗೂ ಮೈ ಬೇಕ್​ ಮಾರ್ಟ್​ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿರುವ ಈ ಉತ್ಸವ ಅನುಭವಿ ಕೇಕ್​ ತರಬೇತುದಾರರು, ಕಲೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿರುವ ವಿದ್ಯಾರ್ಥಿಗಳು ಮತ್ತು ನುರಿತ ಕಲಾವಿದರ ಅಸಾಧಾರಣ ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆಯಾಗಿದೆ.

CELEBRATING 50 YEARS OF CAKE SHOW  BENGALURU  ಕೇಕ್ ಶೋ  PALACE GROUND CAKE SHOW
ಇಂದಿನಿಂದ ಕೇಕ್ ಶೋ ಆರಂಭ (ETV Bharat)

ಹಬ್ಬಕ್ಕಾಗಿ ನಡೆದಿತ್ತು ತಿಂಗಳುಗಳ ಕಾಲ ಪೂರ್ವ ತಯಾರಿ: ಈ ಹಬ್ಬಕ್ಕಾಗಿ ತಿಂಗಳಷ್ಟು ಕಾಲ ತಯಾರಿ ನಡೆದಿದೆ. ಈ ತಯಾರಿಯ ಫಲಿತಾಂಶ ಅಸಾಧಾರಣ ಕೇಕ್‌ಗಳ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ. ನೋಡುಗರು ಇಲ್ಲಿ ಕಲೆಯ ಮಾಧ್ಯಮವಾಗಿ ಸಕ್ಕರೆ ಮತ್ತು ಮಿಶ್ರಣಗಳ ಅಪರಿಮಿತ ಸಾಧ್ಯತೆಗಳನ್ನು ವೀಕ್ಷಿಸಲಿದ್ದಾರೆ. ವೈವಿಧ್ಯಮಯ ವಿನ್ಯಾಸಗಳು ಮತ್ತು ಸಂಸ್ಕೃತಿಗಳ ಕಲಾತ್ಮಕ ಅಭಿವ್ಯಕ್ತಿಯನ್ನು ಆಚರಿಸುವ ಥೀಮ್ ಈ ಬಾರಿಯದ್ದಾಗಿದೆ. ಈ ಪ್ರದರ್ಶನದಲ್ಲಿ 20 ಕೇಕ್ ಕಲಾಕೃತಿಗಳಿವೆ. ಪ್ರತಿಯೊಂದೂ ಕೂಡಾ ಅನನ್ಯವಾಗಿದ್ದು, ನೋಡುಗರನ್ನು ಕಲಾ ಲೋಕಕ್ಕೆ ಕೊಂಡೊಯ್ಯಲಿದೆ.

ಸಕ್ಕರೆಯಿಂದ ನಿರ್ಮಿಸಲಾದ ಗಾಜಿನ ಮನೆಯ ಉದ್ಯಾನ ಬೆಂಗಳೂರಿನ ಸಂಸ್ಥಾಪಕರನ್ನು ಕೊಂಡಾಡುವ ಕೆಂಪೇಗೌಡ ಪರಂಪರೆ ಸೇರಿದಂತೆ ಎಲ್ಲಾ ಕೇಕ್​ಗಳು ಶಂತನು, ಮಹೇಶ್, ಪೂರ್ವ ಮತ್ತು ನಮ್ರತಾ ಸೇರಿದಂತೆ ಪ್ರಸಿದ್ಧ ಪ್ರತಿಭಾವಂತ ಕಲಾವಿದರ ತಂಡಗಳ ಪ್ರತಿಭೆ, ಕರಕುಶಲತೆ ಪ್ರತಿಬಿಂಬಿಸುತ್ತಿದೆ.

ಡೈನೋಸಾರ್ ವರ್ಲ್ಡ್ ಕೇಕ್​. (ETV Bharat)

ಕೇಕ್ ಶೋನ ವಿಶೇಷತೆಗಳು: ದಿ ಎನ್‌ಚ್ಯಾಂಟೆಡ್​​ ಕ್ರಿಸ್‌ಮಸ್​ ಟ್ರೀ: ಖಾದ್ಯ ಆಭರಣ, ಮಿಠಾಯಿ ಮತ್ತು ಆಟಿಕೆ ರೈಲು ಮತ್ತು ಅಲಂಕರಿಸಲ್ಪಟ್ಟ ಸುಮಾರು 20 ಅಡಿ ಎತ್ತರದ ಅದ್ಭುತ ಕಲಾ ಕೃತಿ ಇದಾಗಿದೆ. ಈ 2.8 ಟನ್ ತೂಕದ ಕೇಕ್ ಹಬ್ಬದ ಸಂತೋಷವನ್ನು ಇಮ್ಮಡಿಗೊಳಿಸಲಿದೆ.

ರಾಮ ಮಂದಿರ ಥೀಮ್: ಭಕ್ತಿಯ ಸಮರ್ಪಣೆ. ಖಾದ್ಯಯುತ, ಸಕ್ಕರೆ ಪಾಕದಿಂದ ರೂಪಿಸಲಾದ ಸಿಂಹಗಳು, ಆನೆಗಳು ಮತ್ತು ಹನುಮಾನ್​ನನ್ನು ಒಳಗೊಂಡ ಸಂಕೀರ್ಣವಾದ ದೇವಾಲಯದ ವಾಸ್ತುಶಿಲ್ಪವನ್ನು ಪ್ರತಿಫಲಿಸುವ 850 ಕಿಲೋ ಕೇಕ್ ಇದಾಗಿದೆ.

ಕೆಂಪೇಗೌಡ ಪರಂಪರೆ ಕೇಕ್​ ಸಿದ್ಧ. (ETV Bharat)

ರಟಾಟೂಲ್ ಪಾಕಶಾಲೆಯ ಮೋಡಿ: ರಟಾಟೂಲ್ ಖ್ಯಾತ ಸಿನಿಮಾ ಪಾತ್ರ ಇಲ್ಲಿ ಕೇಕ್​ನಲ್ಲಿ ಮೂಡಿ ಬಂದಿದೆ. ಅನಿಮೇಟೆಡ್ ಇಲಿ ಬಾಣಸಿಗನ ತಮಾಷೆಯ ಚಿತ್ರಣ ಸಕ್ಕರೆ ರೂಪದಲ್ಲಿ ಮೂಡಿ ಬಂದಿದೆ.

ಡೈನೋಸಾರ್ ವರ್ಲ್ಡ್: ಕೇಕ್ ರೂಪದಲ್ಲಿ ಇಲ್ಲಿ ಡೈನೋಸಾರ್ ಜಗತ್ತನ್ನು ಬಿಂಬಿಸಲಾಗಿದೆ. ಸಿಹಿ ಮೂಲಕ ರೂಪುಗೊಂಡ ಡೈನೋಸಾರ್‌ಗಳು, ಜ್ವಾಲಾಮುಖಿಯ ದೃಶ್ಯಗಳು ಮತ್ತು ಹಚ್ಚ ಹಸಿರಿನಿಂದ ಕೂಡಿದ ಸಾಹಸಮಯ ಭೂಪ್ರದೇಶ ಕೇಕ್​ನಲ್ಲಿ ಕಲಾವಿದನ ಕೈಚಳಕದಲ್ಲಿ ಅರಳಿದೆ.

ಅನುಭವಿ ಕೇಕ್​ ತರಬೇತುದಾರರಿಂದ ಮೂಡಿರುವ ನಿಮ್ಮ ನೆಚ್ಚಿನ ಕೇಕ್​. (ETV Bharat)
ಕೇಕ್​ಗಳ ಸೌಂದರ್ಯ ನೋಡಿ ಮಂತ್ರ ಮುಗ್ದ: "ಇಲ್ಲಿಗೆ ಭೇಟಿ ನೀಡುವ ಎಲ್ಲಾ ವಯಸ್ಸಿನ ಸಂದರ್ಶಕರು ಇಲ್ಲಿನ ಕೇಕ್​ಗಳಿಂದ, ಅವರುಗಳ ಸೌಂದರ್ಯ ನೋಡಿ ಮಂತ್ರ ಮುಗ್ದರಾಗಲಿದ್ದಾರೆ. ಮಿಶ್ರಣ ಮತ್ತು ಗಮ್​ ಪೇಸ್ಟ್​ನ ರಾಯಲ್​ ಐಸಿಂಗ್​ ಮತ್ತು ಆಹಾರ ಬಣ್ಣಗಳವರೆಗೆ ಎಲ್ಲವನ್ನೂ ಕೇಕ್ ಶೋ ದೃಶ್ಯ ಕಾವ್ಯದ ರೂಪದಲ್ಲಿ ಪ್ರಚುರಪಡಿಸಲಿದೆ. 50ನೇ ವಾರ್ಷಿಕ ಕೇಕ್ ಪ್ರದರ್ಶನವು ಒಂದು ಅದ್ಭುತವಾದ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಕೇಕ್ ಕಲೆಯಲ್ಲಿನ ನಾವೀನ್ಯತೆ ಮತ್ತು ಸ್ಫೂರ್ತಿಯ ಪರಂಪರೆಯನ್ನು ಇದು ಮುಂದುವರಿಸಲಿದೆ" ಎಂದು ವ್ಯವಸ್ಥಾಪಕರಾದ ಗೌತಮ್ ಅಗರ್ವಾಲ್ ಹೇಳಿದ್ದಾರೆ.

ವಿವಿಧ ಶೈಲಿಯ ಕೇಕ್​ಗಳು (ETV Bharat)

"ಐದು ದಶಕಗಳ ಪಾಕಶಾಲೆಯ ಕಲಾತ್ಮಕತೆ ಮತ್ತು ಸೃಜನಶೀಲತೆಯನ್ನು ಸ್ಮರಿಸಲು ಕೇಕ್ ಶೋ ಆಯೋಜಿಸಲಾಗಿದೆ. ಜನರು ಇಲ್ಲಿಗೆ ಬಂದು ಕಲಾವಿದರನ್ನು ಗೌರವಿಸಬೇಕಿದೆ. ಈ ಕೇಕ್ ಕಲೆಯ ಶ್ರೇಷ್ಠತೆಯ ಸುವರ್ಣ ಮಹೋತ್ಸವವನ್ನು ಸ್ಮರಣೀಯವಾಗಿ ಆಚರಿಸಬೇಕಿದೆ" ಎಂದು ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ಸ್ ಸಂಸ್ಥೆಯ ಪರಂಶುಪಾಲರಾದ ಮನೀಶ್ ಗೌರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಮ ಮಂದಿರ ಥೀಮ್ ಕೇಕ್​ (ETV Bharat)

ಇದನ್ನೂ ಓದಿ: ಹರಿಹರದ ವೀಳ್ಯದೆಲೆಗೆ ಕರಾಚಿಯಲ್ಲೂ ಬೇಡಿಕೆ: ರಾಜ್ಯದ ಪ್ರಸಿದ್ಧ ವೀಳ್ಯದೆಲೆಯ ಇತಿಹಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.