ETV Bharat / state

"ಬೇಲಿನೇ ಎದ್ದು ಹೊಲ ಮೇಯ್ದಂತೆ": ವಕ್ಫ್ ಬೋರ್ಡ್​ಗೆ ಜಮೀರ್​ ಅಹಮದ್ ಕುಮ್ಮಕ್ಕು - ಬಿ.ವೈ. ವಿಜಯೇಂದ್ರ

ರೈತರ ಭೂಮಿಯನ್ನು ವಕ್ಫ್ ಬೋರ್ಡ್ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದು, ಇದಕ್ಕೆ ಜಮೀರ್ ಅಹ್ಮದ್ ಅವರು ಕುಮ್ಮಕ್ಕು ಕೊಡುತ್ತಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪಿಸಿದ್ದಾರೆ.

ವಕ್ಫ್ ಬೋರ್ಡ್​ಗೆ ಜಮೀರ್​ ಅಹಮದ್ ಕುಮ್ಮಕ್ಕು- ಬಿ.ವೈ. ವಿಜಯೇಂದ್ರ ಕಿಡಿ
ವಕ್ಫ್ ಬೋರ್ಡ್​ಗೆ ಜಮೀರ್​ ಅಹಮದ್ ಕುಮ್ಮಕ್ಕು- ಬಿ.ವೈ. ವಿಜಯೇಂದ್ರ ಕಿಡಿ (IANS)
author img

By ETV Bharat Karnataka Team

Published : Oct 30, 2024, 9:25 AM IST

ಹಾಸನ: "ರೈತರು ಉಳುಮೆ ಮಾಡುವ ಭೂಮಿಯನ್ನು ಕಿತ್ತುಕೊಳ್ಳುವ ಕೆಲಸ ವಕ್ಫ್ ಬೋರ್ಡ್ ಮಾಡುತ್ತಿದ್ದು, ಇದಕ್ಕೆ ಕುಮ್ಮಕ್ಕು ಕೊಡುವ ಕೆಲಸ ಜಮೀರ್​ ಅಹಮದ್​ ಖಾನ್​ ಮಾಡುತ್ತಿರುವುದು ದುರದೃಷ್ಠಕರ, ತಕ್ಷಣದಲ್ಲಿ ಸುಧಾರಿಸದೇ ಹೋದರೇ ಹಚ್ಚಿರುವ ಬೆಂಕಿ ಆರಿಸಲು ಸಾಧ್ಯವಾಗುವುದಿಲ್ಲ. ಮುಂದೆ ಸರಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ" ಎಂದು ರಾಜ್ಯ ಸರಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಹಾಸನಾಂಬ ದರ್ಶನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, "ಇವತ್ತು ಬೇಲಿನೇ ಎದ್ದು ಹೊಲ ಮೇಯ್ದಂತೆ ಆಗಿದೆ. ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸ ಜಮೀರ್​ ಮಾಡುತ್ತಿದ್ದಾರೆ. ಹಲವಾರು ದಶಕಗಳಿಂದ ರೈತರು ಉಳುಮೆ ಮಾಡುತ್ತಿದ್ದು, ಇದನ್ನು ವಕ್ಫ್​​ ಬೋರ್ಡ್​ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಇದಕ್ಕೆ ಕುಮ್ಮಕ್ಕು ಕೊಡುವ ಕೆಲಸ ಜಮೀರ್ ಅಹಮದ್ ಮಾಡುತ್ತಿರುವುದು ದುರದೃಷ್ಠಕರ".

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ (ETV Bharat)

"ತಕ್ಷಣ ಇದನ್ನು ಸುಧಾರಿಸದೇ ಹೋದರೇ ನೀವು ಹಚ್ಚಿರುವ ಕಿಡಿ ರಾಜ್ಯಾದ್ಯಂತ ಬೆಂಕಿ ಹಚ್ಚಿಕೊಳ್ಳುತ್ತದೆ. ಅದನ್ನು ಆರಿಸಲು ಸಾಧ್ಯವಾಗುವುದಿಲ್ಲ ಈ ಸರಕಾರಕ್ಕೆ" ಎಂದು ಎಚ್ಚರಿಸಿ, "ಇಂತಹ ಕಿಚ್ಚು ಹಚ್ಚುವ ಕೆಲಸ ಬಿಟ್ಟು ದೇವರು ಮೆಚ್ಚುವ ಕೆಲಸ ಮಾಡಿದರೇ ಒಳ್ಳೆಯದು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಮನೆಗೆ ಅತಿಥಿಗಳು ಬಂದಾಗ ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಮನೆಯಿಂದ ಹೊರ ಹೋದ ಮೇಲೆ ಅದರ ಪ್ರಶ್ನೆಯೇ ಇಲ್ಲ. ಹೊರ ಹೋದ ಮೇಲೆ ಯಾರಾರು ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಮಾಡುತ್ತಾರೆ. ಒಬ್ಬೊಬ್ಬರನ್ನೇ ಪಕ್ಷದಿಂದ ಹೊರ ಹಾಕುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ. ನಮ್ಮ ಪಕ್ಷ ಶುದ್ದೀಕರಣ ಆಗಬೇಕೆಂದು ಅನೇಕ ಹಿರಿಯರ ಒಂದು ಆಸೆ ಇತ್ತು. ಅವರ ಆಸೆಗೆ ತಕ್ಕಂತೆ ಶುದ್ದೀಕರಣ ಕೂಡ ಆಗುತ್ತಿದೆ. ಬರುವ ದಿನಗಳಲ್ಲಿ ಎಲ್ಲವೂ ಕೂಡ ಸರಿ ಹೋಗುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನಂತೂ ಅದರ ಬಗ್ಗೆ ಏನು ತಲೆಕೆಡಿಸಿಕೊಳ್ಳುವ ಪ್ರಶ್ನೆ ಇಲ್ಲ: ಮುಂದುವರೆದು, ಯತ್ನಾಳ್, ರಮೇಶ್ ಜಾರಕಿಹೋಳಿ ಅಸಮಾಧಾನ ವಿಚಾರದ ಕುರಿತು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ, "ಅವರ ಅಸಮಾಧಾನ ಹೊರಹಾಕಲು ಬೇರೆ ವ್ಯವಸ್ಥೆ ಮಾಡಿಕೊಡಬೇಕು. ಆ ದಿಕ್ಕಿನಲ್ಲಿ ಯೋಚನೆ ಮಾಡುತ್ತಾ ಇದ್ದೇವೆ. ನಾನಂತೂ ಅದರ ಬಗ್ಗೆ ಏನು ತಲೆಕೆಡಿಸಿಕೊಳ್ಳುವ ಪ್ರಶ್ನೆ ಇಲ್ಲ. ಮಾಡಲು ಬೇಕಾದಷ್ಟು ಕೆಲಸವಿದೆ. ಅದರಲ್ಲೂ ಸಂಘಟನೆ ಕೆಲಸ ಇದ್ದು, ಉಪಚುನಾವಣೆ ನಡೆಯುತ್ತಿದ್ದು, ಚುನಾವಣೆಯಲ್ಲಿ ಫಲಿತಾಂಶ ನಮ್ಮ ಪರವಾಗಿರುತ್ತದೆ ಎಂದರು.

"ಇವತ್ತು ವಕ್ಫ್ ವಿಚಾರವಾಗಿ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ. ಆ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ತೇವೆ. ಗೋವಿಂದ್ ಕಾರಜೋಳ ನೇತೃತ್ವದ ತಂಡ ವಿಜಯಪುರದ ಎಲ್ಲಾ ಕಡೆ ಭೇಟಿ ನೀಡಿದ್ದು, ಅಧಿಕಾರಿಗಳು, ರೈತರನ್ನು ಭೇಟಿ ಮಾಡುತ್ತಿದ್ದಾರೆ" ಎಂದು ಮಾಹಿತಿ ನೀಡಿದರು.

"ಹಿಂದೆ ಬ್ರಿಟಿಷರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಆ ನೀತಿ ಕುತಂತ್ರವನ್ನು ಕಾಂಗ್ರೆಸ್​ ಸರಕಾರ ಅನುಸರಿಸುತ್ತಿದೆ. ಜಮೀರ್​ ಅಹಮದ್ ಬಾಯಿಯಲ್ಲಿ ಮಾತು ಕೇಳಿದರೇ ಇವರು ಸಂವಿಧಾನದ ಹೆಸರು ಹೇಳಿಕೊಂಡು ಅದಕ್ಕೆ ಬದ್ಧವಾಗಿ ನಡೆದುಕೊಳ್ಳದೇ ಅದಕ್ಕೆ ಅಪಚಾರದ ರೀತಿ ನಡೆದುಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ, ಶಾಸಕ ಸಿಮೆಂಟ್ ಮಂಜು, ಹುಲ್ಲಳ್ಳಿ ಸುರೇಶ್, ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ವಿಜಯಪುರದಲ್ಲಿ ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ: ಸಿಎಂ ಅಭಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.