ETV Bharat / state

ಎಲ್ಲಾ ಜಾತಿ, ಧರ್ಮದವರಿಗೂ ಸೇರುವ ಸಾಮಾಜಿಕ ನ್ಯಾಯದ ಬಜೆಟ್: ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Feb 16, 2024, 6:12 PM IST

Updated : Feb 16, 2024, 10:21 PM IST

ನಮ್ಮ‌ ಬಜೆಟ್ ಎಲ್ಲರನ್ನೂ ಒಳಗೊಂಡಿರುವ ಸಾಮಾಜಿಕ‌ ನ್ಯಾಯದ ಬಜೆಟ್‌ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Budget  social justice  CM Siddaramaiah  ಬಜೆಟ್  ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಟಿ

ಬೆಂಗಳೂರು: ಅಲ್ಪಸಂಖ್ಯಾತರು, ಪರಿಶಿಷ್ಟರಿಗೆ ಕೊಂಡುಕೊಳ್ಳುವ ಶಕ್ತಿ ಹೆಚ್ಚಿಸಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡುವ ಬಜೆಟ್ ಇದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ‌ ಬಜೆಟ್ ಎಲ್ಲರನ್ನೂ ಒಳಗೊಂಡಿರುವ, ಸಾಮಾಜಿಕ‌ ನ್ಯಾಯದ ಆಧಾರದ ಮೇಲೆ ಎಲ್ಲಾ ಜಾತಿ, ಧರ್ಮದವರಿಗೂ ಸೇರುವ ಬಜೆಟ್ ಆಗಿದೆ. ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ಬರಗಾಲ ಇದ್ದರೂ ಅಭಿವೃದ್ಧಿ ಕೆಲಸಗಳಿಗೆ ಹಣ ಕೊಟ್ಟಿದ್ದೇವೆ: ದೇಶದಲ್ಲಿ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಸಮಸ್ಯೆಯಿಂದ ಬಡವರು ಜೀವನ‌ ಸಾಗಿಸುವುದು ಕಷ್ಟಕರವಾಗಿದೆ. ಬಡವರ ಕೊಂಡುಕೊಳ್ಳುವ ಶಕ್ತಿ ಹೆಚ್ಚಿಸಲು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಜನತೆಗೆ ಕೊಟ್ಟ ಎಲ್ಲಾ ವಾಗ್ದಾನಗಳನ್ನು ಈಡೇರಿಸಿದ್ದೇವೆ. ಕೃಷಿ, ಗ್ರಾಮೀಣಾಭಿವೃದ್ಧಿ, ಬರಗಾಲವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ಅಭಿವೃದ್ಧಿಗೆ ಹಣ ಒದಗಿಸುವ ಕೆಲಸ ಮಾಡಿದ್ದೇವೆ. 3.71 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದೇವೆ.‌ ಕಳೆದ ವರ್ಷಕ್ಕೆ ಹೋಲಿಸಿದರೆ 46,636 ಕೋಟಿ ರೂ.‌ ಹೆಚ್ಚಾಗಿದೆ. ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ, ಗ್ಯಾರಂಟಿಗಳನ್ನು ಜಾರಿ ಬಂದ ಮೇಲೆ ದಿವಾಳಿಯಾಗಿದೆ ಅಂತಿದ್ದಾರೆ. ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕೆಲಸಗಳಿಗೂ ದುಡ್ಡು ಕೊಟ್ಟಿದ್ದೇವೆ.‌ ಬರಗಾಲ ಇದ್ದರೂ ಅಭಿವೃದ್ಧಿ ಕೆಲಸಗಳಿಗೆ ಹಣ ಕೊಟ್ಟಿದ್ದೇವೆ ಎಂದರು.

ಬಿಜೆಪಿಯವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಬಜೆಟ್ ಮಂಡಿಸುವಾಗ ವಾಕೌಟ್ ಮಾಡಿದ ನಿದರ್ಶನ ಇಲ್ಲ. ಸುನಿಲ್ ಕುಮಾರ್ ಏನಿಲ್ಲ ಏನಿಲ್ಲ ಅಂದರು. ಅವರ ತಲೆಯಲ್ಲಿ‌ ಏನಿಲ್ಲ. ಅವರ ತಲೆ ತುಂಬಾ ರಾಜಕೀಯ ಮಂಜಾಗಿದೆ. ಕಾಮಾಲೆ ರೋಗದವರಿಗೆ ಕಾಣೋದೆಲ್ಲವೂ ಹಳದಿ. ರಾಜಕೀಯ ಮಾಡಲಿ, ಆದರೆ ಟೀಕೆಗಳು ಆರೋಗ್ಯಕರವಾಗಿರಬೇಕು. ಇವರು ಟೀಕೆ ಮಾಡಲು ಟೀಕೆ ಮಾಡುತ್ತಾರೆ. ಏನಿಲ್ಲಾ ಏನಿಲ್ಲಾ ಅಂತ ಶುರು ಮಾಡಿದರು. ಬಳಿಕ‌ ಪ್ಲಕಾರ್ಡ್ ಹಿಡಿದು ಬಂದಿದ್ದಾರೆ. ನಾನು ವಸ್ತುಸ್ಥಿತಿಯನ್ನು ಹೇಳುತ್ತಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ. ಸತ್ಯ ಹೇಳಿದರೆ ಅವರಿಗೆ ತಡೆದುಕೊಳ್ಳುವುದಕ್ಕೆ ಆಗಲ್ಲ. ಕರ್ನಾಟಕಕ್ಕೆ ಆಗುವ ಅನ್ಯಾಯವನ್ನು ಹೇಳುವುದು ನನ್ನ ಕರ್ತವ್ಯ ಎಂದು ಹೇಳಿದರು.

ಅವರೂ ಕೂಡ ಕೋಲೆ ಬಸವನ ಥರ ತಲೆ ಅಲ್ಲಾಡಿಸದೇ ಕೇಳಬೇಕಾಗಿತ್ತು. ಕೋಲಾರದ ಬಿಜೆಪಿ ಎಂಪಿ ಮುನಿಸ್ವಾಮಿ ಯಾವತ್ತಾದರೂ ಬಾಯಿ ಬಿಟ್ಟಿದ್ದಾರಾ?. ಒಂದು ದಿನವಾದರೂ ಮಾತನಾಡಿದ್ದಾರಾ?. ಅವರು ಎಂಪಿ ಆಗಲು ಲಾಯಕ್ಕಾ, ನಾಲಾಯಕ್ಕಾ ಎಂದು ಪ್ರಶ್ನಿಸಿದರು. 2,90,531 ಕೋಟಿ ರೂ. ರಾಜಸ್ವ ವೆಚ್ಚ ಮತ್ತು 55,877 ಕೋಟಿ ರೂ. ಬಂಡವಾಳ ವೆಚ್ಚ ಅಂದಾಜು ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜಸ್ವ ವೆಚ್ಚದಲ್ಲಿ 16%ರಷ್ಟು ಮತ್ತು ಬಂಡವಾಳ ವೆಚ್ಚದಲ್ಲಿ 3% ಹೆಚ್ಚಳವಾಗಿದೆ. ನಾನು ಗ್ಯಾರಂಟಿಗೆ 36,000 ಕೋಟಿ ರೂ. ಅನುದಾನ ಕೊಟ್ಟಿಲ್ಲ ಅಂತ ಪ್ರೂವ್ ಮಾಡಲಿ. ಅಭಿವೃದ್ಧಿ ಕೆಲಸಗಳಿಗೆ ದುಡ್ಡು ಕೊಟ್ಟಿಲ್ಲ ಅಂದರೆ ಪ್ರೂವ್ ಮಾಡಲಿ. ಬಿಜೆಪಿಯವರು ಕನ್ನಡಿಗರಿಗೆ ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದರು.

1,05,246 ಕೋಟಿ ರೂ. ಸಾಲ ಮಾಡಿದ್ದೇವೆ: ನಾನು ನನ್ನ ಅವಧಿಯಲ್ಲಿ 1,12,000 ಕೋಟಿ ಸಾಲ ಮಾಡಿದ್ದೆ. ಹೋದ ವರ್ಷ ಬಿಜೆಪಿಯವರ ಬಜೆಟ್​ನಲ್ಲಿ 80,000 ಕೋಟಿ ರೂ. ಸಾಲ ಮಾಡಿದ್ದರು. ಕೂತು ಕೇಳಲು ಆಗದೇ ವಿಲ ವಿಲ ಒದ್ದಾಡಿ ಬೆಂಕಿ ಬಿದ್ದವರಂತೆ ಆಗಿದ್ದರು. ರಾಜಸ್ವ ಕೊರತೆ ಹೆಚ್ಚಾಗಿದೆ. ಅದು 0.97% ಅಷ್ಟೇ ಆಗಿದೆ. ವಿತ್ತೀಯ ಕೊರತೆ 82,981 ಕೋಟಿ ರೂ.‌ ಇದ್ದು‌, ಅದು 2.95% ಇದೆ. 1,05,246 ಕೋಟಿ ರೂ. ಸಾಲ ಮಾಡಿದ್ದೇವೆ. ಒಟ್ಟು ಹೊಣೆಗಾರಿಕೆ 6,65,095 ಕೋಟಿ ರೂ. ಆಗಲಿದೆ. ಜಿಎಸ್​ಡಿಪಿಐಯ 23.68% ಆಗಲಿದೆ. ಮುಂದಿನ ವರ್ಷದಿಂದ ರಾಜಸ್ವ ಕೊರತೆ ಸ್ಥಿರತೆಗೆ ಬರಲಿದೆ ಎಂದು ವಿವರಿಸಿದರು.

ದಿವಾಳಿಯಾಗಿಲ್ಲ, ಆರ್ಥಿಕವಾಗಿ ಸುಭದ್ರ: ಕೇಂದ್ರದ ವಿತ್ತೀಯ ಕೊರತೆ 2% ಇದೆ. ಅದೇ ಉತ್ತರ ಪ್ರದೇಶದ ವಿತ್ತೀಯ ಕೊರತೆ 3% ಇದೆ. ಬಿಜೆಪಿಯವರು ಬಾಯಿ ಬಿಡದೇ ಇರುವುದರಿಂದ ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದಾರಾ, ಯೋಚಿಸಲಿ.‌ ನಾವು ಆರ್ಥಿಕವಾಗಿ ಸುಭದ್ರವಾಗಿದ್ದೇವೆ. ದಿವಾಳಿ ಆಗಿಲ್ಲ. ಮೋದಿ ಗ್ಯಾರಂಟಿ ಅಂತಾರೆ‌ ಅವರು ನಮ್ಮಿಂದ ಕಾಪಿ ಹೊಡೆದಿದ್ದಾರೆ. ಬಿಜೆಪಿಯವರು ಬೇಜವಾಬ್ದಾರಿಯಿಂದ, ಪ್ರಜಾಪ್ರಭುತ್ವ ವಿರುದ್ದವಾಗಿ ಕನ್ನಡಿಗರಿಗೆ ವಿರೋಧವಾಗಿ ನಡೆದುಕೊಂಡಿದ್ದಾರೆ. ಕುಮಾರಸ್ವಾಮಿ ಈಗ ಬಿಜೆಪಿ ವಕ್ತಾರ ಆಗಿದ್ದಾರೆ. ಅವರೂ ಟೀಕೆ ಮಾಡುತ್ತಾರೆ. ನಾವು ಅಂಜಾನಾದ್ರಿಗೆ ದೇವಸ್ಥಾನಕ್ಕೆ 100 ಕೋಟಿ ಕೊಟ್ಟಿದ್ದೇವೆ. ಅದಕ್ಕೆ ಜನಾರ್ಧನ ರೆಡ್ಡಿ ಅಭಿನಂದನೆ ಸಲ್ಲಿಸಿದರು ಎಂದು ತಿಳಿಸಿದರು.

ಬಿಜೆಪಿಯವರು ಮುಸ್ಲಿಂ ವಿರೋಧಿ, ಕ್ರಿಶ್ಚಿಯನ್ ವಿರೋಧಿ: ಅಲ್ಪಸಂಖ್ಯಾತರ ಬಜೆಟ್ ಇದಾಗಿದೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, ಬಿಜೆಪಿಯವರು ಮುಸ್ಲಿಂ ವಿರೋಧಿ, ಕ್ರಿಶ್ಚಿಯನ್ ವಿರೋಧಿಯಾಗಿದ್ದಾರೆ. ಅವರು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತಾರೆ. ಅವರಿಗೆ ಕಾಮಾಲೆ ರೋಗ. 3.71 ಲಕ್ಷ ಕೋಟಿ ರೂ ಬಜೆಟ್​ನಲ್ಲಿ ಅಲ್ಪಸಂಖ್ಯಾತರಿಗೆ ಕೇವಲ 3,000 ಕೋಟಿ ರೂ. ಕೊಟ್ಟರೆ ಎಷ್ಟು ಶೇಕಡಾ ಆಗುತ್ತೆ?. 0.8%ಗಿಂತಲೂ ಕಡಿಮೆಯಾಗಿದೆ ಎಂದರು.

ಬಿಯರ್ ಬೆಲೆ ಕಡಿಮೆಯಾಗಲಿದೆ: ಬಿಯರ್ ಪ್ರೀಮಿಯಂ ಬ್ರ್ಯಾಂಡ್‌​ಗಳಿಗೆ ದರ ಕಡಿಮೆ ಮಾಡಲಾಗುತ್ತದೆ. ಇತರೆ ರಾಜ್ಯಗಳ ದರಕ್ಕೆ ಹೊಂದಿಸಿದರೆ ದರ ಕಡಿಮೆ ಮಾಡುತ್ತೇವೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರಿಂದ ಆದಾಯ ಕೊರತೆಯ ಬಜೆಟ್ ಮಂಡನೆ: 1,05,246 ಕೋಟಿ ರೂ. ಸಾಲದ ಮೊರೆ

Last Updated : Feb 16, 2024, 10:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.