ವಿಜಯಪುರ: ಕೊಳವೆಬಾವಿಯಲ್ಲಿ ಸಾವು ಗೆದ್ದು ಬಂದಿರುವ 2 ವರ್ಷದ ಸಾತ್ವಿಕ್ ವಿಜಯಪುರ ಜಿಲ್ಲಾಸ್ಪತ್ರೆ ಬೆಡ್ ಮೇಲೆ ಕುಳಿತು ಎಳನೀರು ಕಾಯಿ, ನೀರಿನ ಬಾಟಲಿಯೊಂದಿಗೆ ಆಟವಾಡುತ್ತಿದ್ದ ದೃಶ್ಯ ಕಂಡುಬಂತು.
ಮೃತ್ಯುಕೂಪದಿಂದ ಬಾಲಕ ಬದುಕಿ ಬರಲೆಂದು ಐಹಿರಸಂಗ ಗ್ರಾಮದ ಯುವಕರಾದ ಮಹೇಶ್ ಹಾಗೂ ಅಶೋಕ ಹರಕೆ ಹೊತ್ತುಕೊಂಡಿದ್ದರು. ಇದೀಗ ಬಾಲಕ ಪವಾಡ ಸದೃಶವೆಂಬಂತೆ ಬದುಕಿ ಬಂದಿರುವುದರಿಂದ ಅವರು ಹರಕೆ ತೀರಿಸಿದ್ದಾರೆ. ಐಹಿರಸಂಗ ಗ್ರಾಮದಿಂದ ಲಚ್ಯಾಣದ ಸಿದ್ದಲಿಂಗ ಮಹಾರಾಜರ ದೇಗುಲದವರೆಗೆ ಸುಮಾರು 5 ಕಿ.ಮೀ ದೀಡ್ ನಮಸ್ಕಾರ ಹಾಕಿದ್ದಾರೆ.
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಕೊಳವೆ ಬಾವಿಯಲ್ಲಿ ಸಾತ್ವಿಕ್ ಆಟವಾಡಲು ತೆರಳಿ ಆಕಸ್ಮಿಕವಾಗಿ ಬಿದ್ದಿದ್ದನು. ರಕ್ಷಣಾ ಕಾರ್ಯಾಚರಣೆ ನಡೆಸಿ ಬಾಲಕನನ್ನು ಹೊರತೆಗೆದು ನಿನ್ನೆ ಸಂಜೆ 5 ಗಂಟೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ.
ಇದನ್ನೂ ಓದಿ: ಬೋರ್‌ವೆಲ್ ಪ್ರಕರಣದಲ್ಲಿ ಸಾವು ಗೆದ್ದ ಬಾಲಕನ ಮನೋಸ್ಥೈರ್ಯ ಮೆಚ್ಚುವಂಥದ್ದು: ಜಿಲ್ಲಾ ಸರ್ಜನ್ - Satvik Health