ETV Bharat / state

ಬೊಲೆರೋ ಕಳ್ಳತನ ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಸಿಕ್ಕ ಚಾಲಾಕಿ: ಖದೀಮನಿಂದ 11 ಬೈಕ್ ವಶ - Theft Case - THEFT CASE

ಬೊಲೆರೋ ವಾಹನ ಕಳ್ಳತನ ಪ್ರಕರಣವನ್ನು ಅಫಜಲಪುರ ಠಾಣೆ ಪೊಲೀಸರು ಬೇಧಿಸಿ, ಕುಖ್ಯಾತ ಖದೀಮನನ್ನು ಬಂಧಿಸಿದ್ದಾರೆ. ಜೊತೆಗೆ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ದ್ವಿಚಕ್ರ ವಾಹನಗಳ ಜೊತೆ ಪೊಲೀಸ್ ತಂಡ
ವಶಪಡಿಸಿಕೊಂಡ ದ್ವಿಚಕ್ರ ವಾಹನಗಳ ಜೊತೆ ಪೊಲೀಸ್ ತಂಡ (ETV Bharat)
author img

By ETV Bharat Karnataka Team

Published : Aug 13, 2024, 1:00 PM IST

ಕಲಬುರಗಿ: ಕುಖ್ಯಾತ ಕಳ್ಳನೋರ್ವನನ್ನು ಬಂಧಿಸಿ ಆತನಿಂದ 1 ಬೊಲೆರೋ ವಾಹನ, 11 ದ್ವಿಚಕ್ರವಾಹನ, ಚಿನ್ನಾಭರಣ ಸೇರಿದಂತೆ ಒಟ್ಟು 11.23 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಅಫಜಲಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಫಜಲಪುರ ಪಟ್ಟಣದ ಉಸ್ಮಾನಿಯಾ ಕಾಲೋನಿಯ ನಿವಾಸಿ 23 ವರ್ಷದ ಮುಜಾಫರ್ ಬಂಧಿತ ಆರೋಪಿ. ಇನ್ನು ಬಂಧಿತನಿಂದ 6,13,000ರೂ. ಮೌಲ್ಯದ ವಿವಿಧ ಕಂಪನಿಯ11 ದ್ವಿಚಕ್ರವಾಹನಗಳು, 4.5 ಲಕ್ಷದ ಬೊಲೆರೋ ವಾಹನ, 12 ಗ್ರಾಂ ಚಿನ್ನಾಭರಣ ಸೇರಿ 11.23 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬೊಲೆರೋ ವಾಹನ ಕಳ್ಳತನವಾದ ಬಗ್ಗೆ ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ವೇಳೆ ಆರೋಪಿಯನ್ನು ತಂದು ವಿಚಾರಣೆಗೆ ಒಳಪಡಿಸಿದಾಗ ಬೊಲೆರೋ ವಾಹನ ಮಾತ್ರವಲ್ಲ, ಬೈಕ್​ಗಳು ಹಾಗೂ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿರುವ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಬೊಲೆರೋ ಕಳ್ಳತನ ಪ್ರಕರನ ಬೇಧಿಸಿದಾಗ ಸಿಕ್ಕಿದ್ದು 11 ವಾಹನಗಳು: ಬೊಲೆರೋ ವಾಹನ ಕಳ್ಳತನ ಪ್ರಕರಣ ಬೆನ್ನತ್ತಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದಾಗ ಆತ ಕುಖ್ಯಾತ ಕಳ್ಳನೆಂಬುದು ಗೊತ್ತಾಗಿದೆ. ಅಂತೆಯೇ ಆರೋಪಿ ಬಳಿ ಬೊಲೆರೋ ಜೊತೆಗೆ 11 ಬೈಕ್, ಚಿನ್ನಾಭರಣಗಳು ಪತ್ತೆಯಾಗಿವೆ.

ಕೂಲಿ ಕೆಲಸ ಮಾಡುತ್ತಿದ್ದ ಆರೋಪಿ ಐಶಾರಾಮಿ ಜೀವನ ನಡೆಸುವ ದುರಾಸೆಗೆ ಬಿದ್ದು ಕಳ್ಳತನ ಪ್ರವೃತ್ತಿ ಬೆಳಸಿಕೊಂಡಿದ್ದ. ಈತ ಕಳೆದ ಎರಡು ವರ್ಷಗಳಿಂದ ಅಫಜಲಪುರ ತಾಲೂಕಿನ ಹಲವೆಡೆ ವಾಹನ ಹಾಗೂ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ. ಇದರಿಂದ ಸ್ಥಳೀಯರಿಗೆ ಮತ್ತು ಪೊಲೀಸರಿಗೆ ತಲೆನೋವಾಗಿದೆ. ಇದೀಗ ಪಿಎಸ್‌ಐ ಸೋಮಲಿಂಗ ಒಡೆಯರ್ ನೇತೃತ್ವದಲ್ಲಿ ಸಿಬ್ಬಂದಿ ಕಳ್ಳನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ಇದನ್ನೂ ಓದಿ: ಯಾದಗಿರಿ: ಅಕ್ರಮ ಪಡಿತರ ಸಾಗಾಣಿಕೆ, ಅಂದಾಜು 4.70 ಲಕ್ಷ ಮೌಲ್ಯದ ಅಕ್ಕಿ ವಶ - ration rice seized

ETV Bharat Logo

Copyright © 2025 Ushodaya Enterprises Pvt. Ltd., All Rights Reserved.