ಬೆಂಗಳೂರು: ಬಿಎಂಟಿಸಿ ಸಂಸ್ಥೆಯು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಪ್ರಮುಖ ರೈಲ್ವೆ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಹೊಸ ಮಾರ್ಗಗಳನ್ನು ಪ್ರಕಟಿಸಿದೆ.
ನೂತನ ಮಾರ್ಗ ಸಂಖ್ಯೆ 300 ಆರ್ ಅನ್ನು ಆಗಸ್ಟ್ 26 ರಿಂದ ಪರಿಚಯಿಸಲಾಗುತ್ತಿದೆ. ಯಶವಂತಪುರ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುವ ಹೊಸ ಬಸ್ ಸೇವೆ ಯಶವಂತಪುರ ಬಸ್ ನಿಲ್ದಾಣ, ದಂಡು ರೈಲ್ವೆ ನಿಲ್ದಾಣ, ಈಸ್ಟ್ ರೈಲ್ವೆ ನಿಲ್ದಾಣ ಹಾಗೂ ಮಾರುತಿ ಸೇವಾ ನಗರ ಮಾರ್ಗವಾಗಿ ಸರ್. ಎಂ. ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ.
300-ಆರ್ ಬಿಡುವ ವೇಳೆ: ಬೆಳಗ್ಗೆ 5 ಗಂಟೆ, 6.05, 7.20, 8.25, 9.45, 11.10 ಮತ್ತು ಮಾಧ್ಯಾಹ್ನ 2.25, 4.10, 5.10, 6.45, 7.45 ಮತ್ತು ರಾತ್ರಿ 9.30 ಗಂಟೆ ವೇಳೆಗೆ ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಡಲಿದೆ. ಇನ್ನೊಂದೆಡೆ ಬೆಳಗ್ಗೆ 5 ಗಂಟೆ, 6.05, 7.10, 8.30, 9.30, 11.15 ಕ್ಕೆ ಮತ್ತು ಮಧ್ಯಾಹ್ನ 2.55, 5.30, 6.30, 7.50 ಮತ್ತು ರಾತ್ರಿ 8.50 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದಿಂದ ಬಸ್ ಸೇವೆ ಪ್ರಾರಂಭವಾಗಲಿದೆ.