ETV Bharat / state

ಹೂವಿನಲ್ಲಿ ಅರಳಲಿದೆ ಅಂಬೇಡ್ಕರ್​ ಜೀವನ ಗಾಥೆ: ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗುತ್ತಿರುವ ಲಾಲ್​ಬಾಗ್ - Lalbagh ready for fruit flower show

ಫಲಪುಷ್ಪದಲ್ಲಿ ಡಾ.ಬಿ.ಆರ್. ಅಂಬೇಡ್ಕರ್​ ಜೀವನ ಗಾಥೆ ಅರಳಲಿದೆ. ಈ ನಿಟ್ಟಿನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಪುಷ್ಪ ಕಾಶಿ ಲಾಲ್​ಬಾಗ್ ಸಜ್ಜಾಗುತ್ತಿದೆ.

Dr BR Ambedkar  Lalbagh ready for fruit flower show  Lalbagh Botanical Garden
ಈ ಬಾರಿ ಹೂವಿನಲ್ಲಿ ಅರಳಿಲಿದೆ ಡಾ.ಬಿ.ಆರ್. ಅಂಬೇಡ್ಕರ್​ ಜೀವನ ಗಾಥೆ! ಫಲಪುಷ್ಪ ಪದರ್ಶನಕ್ಕೆ ಸಜ್ಜಾಗುತ್ತಿರುವ ಲಾಲ್​ಬಾಗ್ (ETV Bharat)
author img

By ETV Bharat Karnataka Team

Published : Jul 27, 2024, 9:08 PM IST

ಬೆಂಗಳೂರು: ಪ್ರತಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಗೆ ರಾಜಧಾನಿ ಬೆಂಗಳೂರಿನ ಪುಷ್ಪಕಾಶಿ ಲಾಲ್​ಬಾಗ್​ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಸಿಬ್ಬಂದಿ ಸಿದ್ದಪಡಿಸುತ್ತಿದ್ದು, ಆಗಸ್ಟ್​ 15ರ ಸ್ವಾಂತಂತ್ರ್ಯೋತ್ಸವಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್​. ಅಂಬೇಡ್ಕರ್​ ಜೀವನವನ್ನು ಕಣ್ಣು ತುಂಬಿಕೊಳ್ಳಬಹುದಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ಅಗತ್ಯವಿರುವ ಹೂವುಗಳನ್ನು ರಾಜ್ಯದ ವಿವಿಧ ಭಾಗಗಳು, ನಂದಿ ಬೆಟ್ಟದಲ್ಲಿ ಬೆಳೆಯುವ ಕೆಲ ಜಾತಿಯ ಹೂವುಗಳು ಮತ್ತು ಊಟಿಯಿಂದ ಕೆಲ ಜಾತಿಯ ಹೂವುಗಳನ್ನು ತರಿಸಿಕೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಅಲ್ಲದೆ, ಅಂಬೇಡ್ಕರ್​ ಜೀವನ ಕುರಿತಂತೆ ಹಲವು ಪುಸ್ತಕಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಜತೆಗೆ, ಅವರ ಕುಟುಂಬಸ್ಥರಿಂದಲೂ ಮಾಹಿತಿಯನ್ನು ಪಡೆಯುವುದಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಹೂವಿನ ಗಿಡಗಳ ಸಿದ್ಧತೆ: ಫಲಪುಷ್ಪ ಪ್ರದರ್ಶನದಲ್ಲಿ ಅಳವಡಿಸುವುದಕ್ಕಾಗಿ ಅಗತ್ಯವಿರುವ ಹೂವಿನ ಗಿಡಗಳನ್ನು ಲಾಲ್ ಬಾಗ್ ಮತ್ತು ಕಬ್ಬನ್​ ಪಾರ್ಕ್​ನಲ್ಲಿ ವಿವಿಧ ಜಾತಿಯ ಹೂವಿನ ಗಿಡಗಳು ಹಾಗೂ ಹೂವಿನ ಕುಂಡಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರದರ್ಶನದ ಸಮಯದ ವೇಳೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಅಲ್ಲದೆ, ಪ್ರದರ್ಶನಕ್ಕೆಂದೇ ರಸ್ತೆಗಳ ಇಕ್ಕೆಲಗಳಲ್ಲಿ ಓರೆ-ಕೋರೆಯಾಗಿ ಬೆಳೆದುನಿಂತ ಗಿಡಗಳು ಒಪ್ಪ- ಓರಣದೊಂದಿಗೆ ಅಲಂಕೃತಗೊಳ್ಳುತ್ತಿವೆ. ಅಂಬೇಡ್ಕರ್‌ ಅವರ ಪ್ರತಿಮೆ, ಸಂವಿಧಾನದ ಕೃತಿ, ಅವರು ಬಾಳಿ ಬದುಕಿದ ಮನೆ, ಅವರ ಆದರ್ಶಗಳನ್ನು ಹೂಗಳಲ್ಲಿಅನಾವರಣಗೊಳಿಸಲು ತಂತ್ರಜ್ಞರ ತಂದ ಶ್ರಮಿಸುತ್ತಿದೆ.

ಜೊತೆಗೆ, ಇಂಡೋ ಅಮೆರಿಕನ್‌ ಹೈಬ್ರಿಡ್‌ ಸೀಡ್ಸ್‌ ಕಂಪನಿಯ ಆಕರ್ಷಕ ಅಲಂಕಾರಿಕ ಪುಷ್ಪಗಳ ಜೋಡಣೆ, ಹೂವಿನ ಪಿರಮಿಡ್‌ಗಳು, ವಾರ್ಷಿಕ ಹೂಗಳ ರಂಗು ನೋಡುಗರ ಗಮನ ಸೆಳೆಯಲಿದೆ. ಗಾಜಿನಮನೆ, ಬ್ಯಾಂಡ್‌ಸ್ಟ್ಯಾಂಡ್‌, ಲಾಲ್‌ಬಾಗ್‌ ಬಂಡೆ, ಕೆರೆ ಏರಿ, ಟೋಪಿಯಾರಿ ಗಾರ್ಡನ್‌, ಬೋನ್ಸಾಯ್‌ ಗಾರ್ಡನ್‌ ಸೇರಿದಂತೆ ಲಾಲ್‌ಬಾಗ್‌ನ ಆಯ್ದ ಸ್ಥಳಗಳಲ್ಲಿ ವಿಶೇಷ ಆಕರ್ಷಣೆಗಳಿರಲಿವೆ.

ಪ್ರದರ್ಶನಕ್ಕೆ ಬಳಸುವ ಹೂವುಗಳು: ಪ್ರದರ್ಶನದಲ್ಲಿ ಎಂದಿನಂತೆ ಆಂಥೋರಿಯಂ ಹೂಗಳು, ಗುಲಾಬಿ, ಜರ್ಬೆರಾ, ಆರ್ಕಿಡ್‌, ನಂದಿ ಗಿರಿಧಾಮದ ಇಂಪೇಷನ್ಸ್‌ ಹೂಗಳು, ರೆಡ್‌ಹಾಟ್‌ ಪೋಕರ್‌, ಆಲ್‌ಸ್ಟೋಮೇರಿಯನ್‌ ಲಿಲ್ಲಿ, ಪೂಷಿಯಾ, ಅಗಪಾಂಥಸ್‌, ಸೈಕ್ಲೋಮನ್‌, ಕ್ಯಾಲಾಲಿಲ್ಲಿ, ಸುಗಂಧ ರಾಜ ಸೇರಿದಂತೆ ಶೀತ ವಲಯದ ಹೂವುಗಳು ಕಣ್ಮನ ಸೆಳೆಯಲಿವೆ.
ಈ ಕುರಿತಂತೆ ಈ ಟಿವಿ ಭಾರತ್ ಜತೆ ಮಾತನಾಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಜಿ. ಕುಸುಮಾ, ''ಪ್ರಸಕ್ತ ಅವಧಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್​. ಅಂಬೇಡ್ಕರ್​ ಅವರ ಜೀವನ ಕುರಿತು ಸಾರ್ವಜನಿಕರಿಗೆ ಫಲಪುಷ್ಪ ಪ್ರದರ್ಶನದ ಮೂಲಕ ತಿಳಿಸುವುದಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ'' ಎಂದು ವಿವರಿಸಿದರು.

ಇದನ್ನೂ ಓದಿ: ಬೂತ್​ಗಳಲ್ಲಿ ರಾಜಕೀಯ ಮಾಡೋಣ, ಈಗ ಎಲ್ಲರೂ ಸೇರಿ ಬೆಂಗಳೂರನ್ನು ಕಟ್ಟೋಣ: ಡಿಸಿಎಂ ಸಲಹೆ - Lets build Bengaluru together

ETV Bharat Logo

Copyright © 2024 Ushodaya Enterprises Pvt. Ltd., All Rights Reserved.