ETV Bharat / state

ತಾಯಿಯ ಫೋಟೋ ವೈರಲ್ ಮಾಡುವುದಾಗಿ ಬೆದರಿಸಿ ಮಗಳ ನಗ್ನ ಫೋಟೋ ಪಡೆದ ವಂಚಕ: ಬೆಂಗಳೂರಲ್ಲಿ ಯುವತಿ ದೂರು - Blackmail Case - BLACKMAIL CASE

ಇನ್​ಸ್ಟಾಗ್ರಾಂ ಮೂಲಕ ಯುವತಿಯ ನಗ್ನ ಫೋಟೋಗಳಿಗೆ ಬ್ಲ್ಯಾಕ್‌ಮೇಲ್ ಮಾಡಿದ ಪ್ರಕರಣ ಅಮೃತಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.

Etv Bharat
Etv Bharat
author img

By ETV Bharat Karnataka Team

Published : Apr 28, 2024, 11:03 AM IST

ಬೆಂಗಳೂರು: ಅಶ್ಲೀಲವಾಗಿ ಎಡಿಟ್ ಮಾಡಿರುವ ತಾಯಿಯ ಫೋಟೋವನ್ನು ಮಗಳಿಗೆ ಕಳುಹಿಸಿ ಬೆದರಿಸಿ, ಆಕೆಯ ನಗ್ನ ಫೋಟೋಗಳನ್ನು ಪಡೆಯುತ್ತಿದ್ದ ಪ್ರಕರಣ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ 18 ವರ್ಷ ವಯಸ್ಸಿನ ನೊಂದ ಯುವತಿ ನೀಡಿರುವ ದೂರಿನನ್ವಯ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

'ಕಳೆದ ಸೆಪ್ಟೆಂಬರ್‌ನಲ್ಲಿ ಇನ್‌ಸ್ಟಾಗ್ರಾಂ ಖಾತೆಯೊಂದರಿಂದ ಅಶ್ಲೀಲವಾಗಿ ಎಡಿಟ್ ಮಾಡಲಾಗಿದ್ದ ನನ್ನ ತಾಯಿಯ ಫೋಟೋವನ್ನು ವಂಚಕ ಕಳುಹಿಸಿದ್ದ. ಬಳಿಕ ಬೆದರಿಕೆ ಹಾಕಿ, ನಿನ್ನ ನಗ್ನ ಫೋಟೋ ಕಳುಹಿಸದಿದ್ದರೆ ನಿನ್ನ ತಾಯಿಯ ಫೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ. ತಾಯಿಯ ಮರ್ಯಾದೆ ಹೋಗುತ್ತದೆ ಎಂದು ಅಂಜಿ ನನ್ನ ನಗ್ನ ಫೋಟೋಗಳನ್ನು ವಂಚಕನಿಗೆ ಕಳುಹಿಸಿದ್ದೆ. ನಂತರ ಅದೇ ಫೋಟೋವನ್ನು ಆರೋಪಿ ನನ್ನ ಸ್ನೇಹಿತರಿಗೆ, ಸೋದರ ಮಾವನಿಗೆ ಶೇರ್ ಮಾಡಿದ್ದಾನೆ. ಆರು ತಿಂಗಳುಗಳಿಂದ ಅಪರಿಚಿತ ವಂಚಕ ಕಿರುಕುಳ ನೀಡುತ್ತಿದ್ದಾನೆ' ಎಂದು ಅಮೃತಹಳ್ಳಿ ಠಾಣೆಗೆ ನೀಡಿದ ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದೂರುದಾರಳ ಪರಿಚಿತರಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಯುವತಿಯ ಕೆಲ ಪರಿಚಿತರು, ಸ್ನೇಹಿತರ ವಿಚಾರಣೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಒಳ ಉಡುಪಿನಲ್ಲಿ ಚಿನ್ನ ಮರೆಮಾಚಿ ಸಾಗಣೆಗೆ ಯತ್ನ: ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಬಿದ್ದ ಪ್ರಯಾಣಿಕ - Gold seized

ETV Bharat Logo

Copyright © 2024 Ushodaya Enterprises Pvt. Ltd., All Rights Reserved.