ETV Bharat / state

ಮಂಗಳೂರು: ಆಹಾರ ಅರಸಿ ಬಂದು ಬಾವಿಗೆ ಬಿದ್ದ ಅಪರೂಪದ ಕರಿಚಿರತೆ ಸೆರೆ - Black Panther - BLACK PANTHER

ಬಾವಿಗೆ ಬಿದ್ದಿದ್ದ ಕರಿಚಿರತೆಯೊಂದನ್ನು ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ.

black-panther-rescued
ಕರಿಚಿರತೆ ಸೆರೆ
author img

By ETV Bharat Karnataka Team

Published : Mar 31, 2024, 10:38 PM IST

Updated : Mar 31, 2024, 10:57 PM IST

ಮಂಗಳೂರು: ಆಹಾರ ಅರಸಿ ಬಂದು ಬಾವಿಗೆ ಬಿದ್ದ ಅಪರೂಪದ ಕರಿಚಿರತೆ ಸೆರೆ

ಮಂಗಳೂರು: ನಗರದ ಹೊರವಲಯದ ಎಡಪದವು ಬಳಿಯ ಗೊಸ್ಪೆಲ್ ಸನಿಲ ಎಂಬಲ್ಲಿ ಅಪರೂಪದ ಕರಿಚಿರತೆಯೊಂದು ಬಾವಿಗೆ ಬಿದ್ದ ಘಟನೆ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಹಕಾರದಿಂದ ಹರಸಾಹಸಪಟ್ಟು ಕರಿಚಿರತೆಯನ್ನು ಬೋನಿಗೆ ಬೀಳಿಸಿ, ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗೊಸ್ಪೆಲ್ ಸನಿಲದ ಶಕುಂತಲಾ ಆಚಾರ್ಯ ಎಂಬುವರ ಮನೆಯ ಬಳಿ ಶನಿವಾರ ರಾತ್ರಿ ವೇಳೆ ಚಿರತೆಯು ಆಹಾರ ಅರಸಿ ಬಂದು ಬಾವಿಗೆ ಬಿದ್ದಿರಬಹುದು‌ ಎಂದು ಅಂದಾಜಿಸಲಾಗಿದೆ. ಭಾನುವಾರ ಬೆಳಗ್ಗೆ ಮನೆಯವರು ಬಾವಿಯಿಂದ ನೀರು ಸೇದಲೆಂದು ಹೋದಾಗ ಚಿರತೆ ಇರುವುದು ಗೊತ್ತಾಗಿದೆ.

ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಕರಿಚಿರತೆಯನ್ನು ಮೇಲಕ್ಕೆತ್ತಲು ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದರು. ಮಧ್ಯಾಹ್ನದ ವೇಳೆಗೆ ಬೋನಿನಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಗಾಗಿ ಬಾವಿಯ ಸುತ್ತ ಬಲೆ ಹಾಕಲಾಗಿತ್ತು. ಏಣಿ ಇಳಿಸಿ ಬಾವಿಯ ದಂಡೆಯ ಸಮೀಪ ಚಿರತೆಯನ್ನು ಸೆರೆ ಹಿಡಿಯಲು ಬೋನ್​​ ಇಡಲಾಗಿತ್ತು. ಬಳಿಕ ಚಾಕಚಕ್ಯತೆಯಿಂದ ಕರಿಚಿರತೆಯನ್ನು ಬೋನಿಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.

ಬಾವಿಗೆ ಚಿರತೆ ಬಿದ್ದಿರುವುದು ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಎಡಪದವು ಸಮೀಪದ ಬೋರುಗುಡ್ಡೆ ಎಂಬಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆಯ ಉಪಟಳದಿಂದ ಜನರು ಕಂಗೆಟ್ಟಿದ್ದಾರೆ. ಹಲವು ಮನೆಗಳಲ್ಲಿನ ಸಾಕು ನಾಯಿಗಳು ಹಾಗೂ ದನಕರುಗಳು ಚಿರತೆಗೆ ಬಲಿಯಾಗಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕರಿಚಿರತೆ ಸೆರೆ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾ‌ರ್, ಸಹಾಯಕ ವಲಯ ಅರಣ್ಯಾಧಿಕಾರಿ ಜಗರಾಜ್, ಅರಣ್ಯ ಪಾಲಕರಾದ ದಿನೇಶ್, ಕ್ಯಾತಲಿಂಗ, ಚಾಲಕ ಸೂರಜ್, ಬಜಪೆ ಪೊಲೀಸರು ಸ್ಥಳೀಯರಾದ ಹರೀಶ್, ಗಣೇಶ್ ಸೇರಿದಂತೆ ಹಲವರು ಸಹಕರಿಸಿದ್ದರು.

ಇದನ್ನೂ ಓದಿ: ಧಾರವಾಡ: ಮನಸೂರು ಗ್ರಾಮದಲ್ಲಿ ಮತ್ತೆ ಚಿರತೆ ದಾಳಿ, ಮೂರು ಕರುಗಳ ಬಲಿ - Leopard attacks

Last Updated : Mar 31, 2024, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.