ETV Bharat / state

ಆಯೋಗಗಳ ರಚನೆ, ಅನುಕೂಲಕರ ವರದಿ ಪಡೆದುಕೊಳ್ಳುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು - ಬಿ ವೈ ವಿಜಯೇಂದ್ರ - B Y VIJAYENDRA

ಕೋವಿಡ್​ ಅವಧಿಯಲ್ಲಿನ ಅಕ್ರಮಗಳ ಕುರಿತು ತನಿಖೆಗಾಗಿ ಕಾಂಗ್ರೆಸ್​ ಸರ್ಕಾರ ಆಯೋಗ ರಚಿಸಿರುವ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಮಾತನಾಡಿದ್ದಾರೆ.

b-y-vijayendra
ಬಿ ವೈ ವಿಜಯೇಂದ್ರ (ETV Bharat)
author img

By ETV Bharat Karnataka Team

Published : Nov 9, 2024, 3:25 PM IST

ಬೆಂಗಳೂರು : ಅಕ್ರಮಗಳು ಆದಾಗ ತನಿಖೆಗಾಗಿ ಆಯೋಗಗಳನ್ನ ರಚಿಸುವುದನ್ನ ನೋಡಿದ್ದೇವೆ. ಆದರೆ, ಅಕ್ರಮ ಆಗಿದೆಯೋ ಇಲ್ಲವೋ ಎಂದು ವರದಿ ನೀಡುವುದಕ್ಕಾಗಿಯೇ ಕಾಂಗ್ರೆಸ್ ಸರ್ಕಾರ ಆಯೋಗವನ್ನ ರಚಿಸಿದೆ. ತಮ್ಮ ಸಚಿವರು ಶಾಸಕರನ್ನ ಹೇಗೆ ರಕ್ಷಿಸಿಕೊಳ್ಳಬೇಕು? ಎದುರಾಳಿಗಳನ್ನ ರಾಜಕೀಯವಾಗಿ ಮುಗಿಸಲು ಯಾವ ರೀತಿ ಕುತಂತ್ರಗಳನ್ನ ಮಾಡಬೇಕು? ಯಾವ ರೀತಿ ಆಯೋಗಗಳನ್ನ ರಚಿಸಬೇಕು? ಆ ಆಯೋಗಗಳಲ್ಲಿ ಯಾರಿರಬೇಕು? ಯಾವ ರೀತಿ ವರದಿಗಳನ್ನ ನೀಡಬೇಕು ಎಂಬುದರಲ್ಲಿ ಕಾಂಗ್ರೆಸ್‌ನವರು ಹಾಗೂ ಸ್ವತಃ ಸಿದ್ಧರಾಮಯ್ಯ ನಿಸ್ಸೀಮರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಗುಡುಗಿದ್ದಾರೆ.

ತಮ್ಮ ಸಚಿವರು, ಶಾಸಕರನ್ನ ರಕ್ಷಿಸಿಕೊಳ್ಳಲಿಲ್ಲವಾ?: ಕೋವಿಡ್ ಅವಧಿಯಲ್ಲಿನ ಅಕ್ರಮಗಳ ಕುರಿತು ತನಿಖೆಗಾಗಿ ಆಯೋಗ ರಚಿಸಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಬಿ. ವೈ ವಿಜಯೇಂದ್ರ, ''ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಗಳು ಅಧಿಕಾರದಲ್ಲಿದ್ದ ಸಂದರ್ಭಗಳಲ್ಲಿ ಯಾವ್ಯಾವ ಆಯೋಗಗಳನ್ನ ರಚಿಸಿ, ತನಿಖಾ ವರದಿಗಳನ್ನ ನೀಡಿದ್ದಾರೆ ಎಂದು ನಮಗೂ ಗೊತ್ತಿದೆ. ರಾಜ್ಯದ ಜನತೆಗೂ ಗೊತ್ತಿದೆ. ಇದೇ ಸಿದ್ಧರಾಮಯ್ಯನವರು ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ ಲೋಕಾಯುಕ್ತ ಮುಚ್ಚಿಹಾಕಿ, ಎಸಿಬಿಯನ್ನ ರಚಿಸುವ ಮೂಲಕ ತಾವು ಹಾಗೂ ತಮ್ಮ ಸಚಿವರು, ಶಾಸಕರನ್ನ ರಕ್ಷಿಸಿಕೊಳ್ಳಲಿಲ್ಲವಾ? ಎಂದು ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾತನಾಡಿದರು (ETV Bharat)

ಬಿಎಸ್​ವೈ ವಿರುದ್ಧ ಇಂತಹ ಸಾಕಷ್ಟು ಕುತಂತ್ರಗಳು ನಡೆದಿವೆ: ಮೈಸೂರಿನಲ್ಲಿ ಮುಡಾ ಹಗರಣದ ಕುರಿತು ತನಿಖೆಗೆ ಹಾಜರಾಗುವ ಮುನ್ನ ಲೋಕಾಯುಕ್ತದಲ್ಲಿ ತಮಗೆ ಬೇಕಾದ ತನಿಖಾಧಿಕಾರಿಗಳಿರುವುದನ್ನ ಮನವರಿಕೆ ಮಾಡಿಕೊಂಡು, ಸಿದ್ದರಾಮಯ್ಯ ಶೂರರಂತೆ ತನಿಖೆ ಎದುರಿಸಿದ್ದಾರೆ. ಸಿದ್ದರಾಮಯ್ಯ ಆಗಲಿ, ಕಾಂಗ್ರೆಸ್ ಸರ್ಕಾರವಾಗಲಿ, ಯಡಿಯೂರಪ್ಪ ವಿರುದ್ಧ ಇಂತಹ ಸಾಕಷ್ಟು ಕುತಂತ್ರಗಳು ನಡೆದಿವೆ. ಭಾರತೀಯ ಜನತಾ ಪಾರ್ಟಿಯಾಗಲಿ, ಯಡಿಯೂರಪ್ಪ ಆಗಲಿ ಹೆದರುವವರಲ್ಲ ಎಂದಿದ್ದಾರೆ.

ಭಂಡತನದ ವರ್ತನೆಗೆ ಹೆದರುವ ಪ್ರಶ್ನೆಯೇ ಇಲ್ಲ : ಕಾಂಗ್ರೆಸ್‌ನ ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ ಜನ ಬರುತ್ತಿಲ್ಲ, ಚುನಾವಣೆಯಲ್ಲಿ ಸೋತರೆ ತಮ್ಮ ಮುಖ್ಯಮಂತ್ರಿ ಕುರ್ಚಿಗೆ ಕುತ್ತು ಬರಲಿದೆ ಎಂಬುದು ಗೊತ್ತಾಗಿರುವುದರಿಂದ ಸಿದ್ದರಾಮಯ್ಯನವರು ಕುನ್ಹಾ ವರದಿಯನ್ನಿಟ್ಟುಕೊಂಡು ದಿಕ್ಕುತಪ್ಪಿಸುವ ಕೆಲಸವನ್ನ ಮಾಡುತ್ತಿದ್ದಾರೆ. ಅವರ ಬಾಲಿಶ ಹಾಗೂ ಭಂಡತನದ ವರ್ತನೆಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದರು. ಅಲ್ಲದೆ, ಪಿಪಿಇ ಕಿಟ್‌ಗಳನ್ನ ಯಡಿಯೂರಪ್ಪ ಕಡೆಯವರಿಗೆ ಬಹುಶಃ ಅನುಕೂಲವಾಗಲಿ‌ ಎಂದು ಕೊಟ್ಟಿರಬಹುದು, ಅನುಕೂಲವಾಗಿದೆ ಎಂದು ಕುನ್ಹಾರವರು ವರದಿ ನೀಡಿದ್ದಾರೆ ಎಂದು ಅವರು ವಿವರಿಸಿದರು.

ಉಪಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದಾರೆ: ಆರೋಪ ಎದುರಿಸುತ್ತಿರುವ ಯಡಿಯೂರಪ್ಪ ಚುನಾವಣಾ ಪ್ರಚಾರ ಕಾರ್ಯಗಳಿಂದ ದೂರ ಉಳಿಯಬೇಕು ಎಂದಿರುವ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿ. ವೈ ವಿಜಯೇಂದ್ರ, 'ಯಡಿಯೂರಪ್ಪ ಚುನಾವಣಾ ಪ್ರಚಾರಗಳಿಂದ ದೂರ ಉಳಿದುಬಿಟ್ಟರೆ ಅವರು ಹೇಗಾದರೂ ಉಪಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದಾರೆ'' ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ : ಗೆಲ್ಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಆತಂಕ ಶುರು: ಬಿ.ವೈ. ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.