ETV Bharat / state

ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ: ಅಕ್ರಮದ ಸಮರ್ಥನೆಯನ್ನು ಸಿದ್ದರಾಮಯ್ಯನ ಅಂತರಾತ್ಮವೂ ಒಪ್ಪಲ್ಲ - ಸಿ.ಟಿ.ರವಿ - BJP leaders Statement

author img

By ETV Bharat Karnataka Team

Published : Jul 13, 2024, 5:15 PM IST

ವಾಲ್ಮೀಕಿ ನಿಗಮದ ಹರಗಣ ಹಾಗೂ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮೇಲೆ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಸಿ.ಟಿ.ರವಿ, ಗೋವಿಂದ ಕಾರಜೋಳ, ಎನ್​.ರವಿಕುಮಾರ್ ಆಗ್ರಹಿಸಿದ್ದಾರೆ.

ಗೋವಿಂದ ಕಾರಜೋಳ,  ಮುರುಗೇಶ್ ನಿರಾಣಿ, ಎನ್​.ರವಿಕುಮಾರ್, ಸಿ.ಟಿ.ರವಿ
ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಎನ್​.ರವಿಕುಮಾರ್, ಸಿ.ಟಿ.ರವಿ, (ETV Bharat)
ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಎನ್​.ರವಿಕುಮಾರ್, ಸಿ.ಟಿ.ರವಿ (ETV Bharat)

ದಾವಣಗೆರೆ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣವನ್ನು ಸಮರ್ಥನೆ ಮಾಡಿಕೊಳ್ಳುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾರ್ವಜನಿಕ ಬದುಕಿನ ವ್ಯಕ್ತಿತ್ವಕ್ಕೆ ಧಕ್ಕೆ ಆಗುತ್ತೆ. ಇಂತಹ ಸಮರ್ಥನೆಯನ್ನು ಅವರ ಅಂತರಾತ್ಮವೂ ಒಪ್ಪಲ್ಲ ಎಂದು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಉಪ್ಪು ತಿಂದವರು ನೀರು ಕುಡಿಯಲೇಬೇಕೆಂದು ಸಿದ್ದರಾಮಯ್ಯನವರು ಹೇಳುತ್ತಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ತಿಂದವರೂ ಆ ಹಣ ಕಕ್ಕಬೇಕು. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಬೇಕು. ಅಹಿಂದ ರಾಜಕಾರಣ ಮಾಡಿದ ಸಿದ್ದರಾಮಯ್ಯನವರು ದಲಿತರ ಹಣ ತಿಂದು ನೀರು ಕುಡಿದವರನ್ನು ಹೇಗೆ ಸಹಿಸಿಕೊಳ್ಳುತ್ತಾರೆ'' ಎಂದು ಖಾರವಾಗಿ ಪ್ರಶ್ನಿಸಿದರು.

ಈ ಹಿಂದೆ ಭೋವಿ ಅಭಿವೃದ್ಧಿ ನಿಗಮದಲ್ಲೂ ಹಗರಣವಾಗಿದೆ ಎಂಬ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿ, ''ಯಾರ್ಯಾರು ಹಗರಣ ಮಾಡಿದ್ದಾರೆ, ತಪ್ಪು ಮಾಡಿದ್ದಾರೆ, ಅವರೆಲ್ಲರ ಬಗ್ಗೆಯೂ ತನಿಖೆಯಾಗಿ ಶಿಕ್ಷೆಯಾಗಲಿ. ಯಾವ ಇಲಾಖೆಯ ಹಗರಣಗಳು ಏನಾಗಿವೆ ಗೊತ್ತಿಲ್ಲ. ರಾಜ್ಯದ ಖಜಾನೆಗೆ ಕನ್ನ ಹಾಕುವ ಹೆಗ್ಗಣಗಳು ಎಲ್ಲ ಕಡೆ ತುಂಬಿವೆ. ಎಷ್ಟೇ ಬೆಲೆ ಏರಿಕೆ ಮಾಡಿ ಖಜಾನೆ ತುಂಬಿಸಿದರೂ ಕೂಡ ಹೆಗ್ಗಣಗಳು ಖಜಾನೆ ಖಾಲಿ ಮಾಡುತ್ತಿದ್ದರೆ, ಅದು ಹೇಗೆ ತುಂಬುತ್ತೆ?. ಅಂತಹ ಹೆಗ್ಗಣಗಳನ್ನು ನಿಯಂತ್ರಿಸದೆ ಇದ್ರೆ, ನಮ್ಮ ರಾಜ್ಯದ ಖಜಾನೆ ಉಳಿಯಲ್ಲ. ಜನರ ಮೇಲೆ ತೆರಿಗೆ ಭಾರ ಮಾತ್ರವಾಗುತ್ತದೆ'' ಎಂದು ತಿಳಿಸಿದರು.

ಮುಂದುವರೆದು, ಮುಡಾ ಪ್ರಕರಣದ ರೀತಿಯೇ ಬೇರೆ ಅಕ್ರಮವನ್ನು ಬೇರೆ ಪಕ್ಷದವರು ಮಾಡಿದ್ದರೆ, ಸಿದ್ದರಾಮಯ್ಯನವರ ಸುಮ್ಮನೆ ಕೂರುತ್ತಿದ್ದರಾ?, ಅವರ ಬಾಯಲ್ಲಿ ಇಂತಹದ್ದೇ ಮಾತು ಬರ್ತಿತ್ತಾ?, ಅವರಾಗಿದ್ದರೆ ಒಂದು ನಿಮಿಷವೂ ಕುರ್ಚಿ ಮೇಲೆ ಕೂರಲು ಬಿಡುತ್ತಿಲ್ಲ. ರಾಜೀನಾಮೆ ಕೊಡಬೇಕು. ಎಲ್ಲರೂ ಭಷ್ಟ್ರರು ಅಂತಿದ್ದರೂ ಇಲ್ಲವೋ?. ಈಗ ಅವರು ಆಪಾಧಿತರಾಗಿದ್ದಾರೆ ಎನ್ನುವ ಕಾರಣಕ್ಕೆ ಸಮರ್ಥನೆ ಮಾಡಿಕೊಳ್ಳೋಕೆ ಬರುತ್ತಾ?, ಸಮರ್ಥನೆ ಮಾಡಿಕೊಳ್ಳುವುದರಿಂದ ಅವರ ಸಾರ್ವಜನಿಕ ಬದುಕಿನ ವ್ಯಕ್ತಿತ್ವಕ್ಕೆ ಧಕ್ಕೆ ಆಗುತ್ತೆ. ಸಮರ್ಥನೆಯನ್ನು ಅವರ ಅಂತರಾತ್ಮವನ್ನೂ ಒಪ್ಪಲ್ಲ'' ಎಂದು ಸಿದ್ದರಾಮಯ್ಯನವರಿಗೆ ಸಿ.ಟಿ.ರವಿ ಕುಟುಕಿದರು.

ಕಾಂಗ್ರೆಸ್ ಸರ್ಕಾರ ಎಂದರೆ ಹಗರಣಗಳ ಸರಮಾಲೆ - ಕಾರಜೋಳ: ಸಂಸದ ಗೋವಿಂದ ಕಾರಜೋಳ ಮಾತನಾಡಿ, ''ಕಾಂಗ್ರೆಸ್ ಸರ್ಕಾರ ಎಂದರೆ ಹಗರಣಗಳ ಸರಮಾಲೆ. ದೇಶದ ಸ್ವಾತಂತ್ರ್ಯ ನಂತರ 70 ವರ್ಷಗಳ ಆಡಳಿತ ಮಾಡಿದ ಕಾಂಗ್ರೆಸ್​ನವರು 60 ಲಕ್ಷ ಕೋಟಿಗಿಂತ ಅಧಿಕ ಹಗರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದಾರೆ. ಅನೇಕರು ಜಾಮೀನು ಮೇಲೆ ಹೊರಗಿದ್ದಾರೆ'' ಎಂದು ದೂರಿದರು.

''ಈಗ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದು ಒಂದು ವರ್ಷ, ಎರಡು ತಿಂಗಳು ಆಗಿದೆ.‌ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮತ್ತು ಸ್ವಜನಪಕ್ಷಪಾತದಲ್ಲಿ ಮುಳುಗಿದೆ. ಸಾಚಾ ಎಂದು ಹೇಳಿಕೊಳ್ಳುತಿದ್ದವರು ಇಂದು ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡು ನರಳುತ್ತಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.

ವಾಲ್ಮೀಕಿ ನಿಗಮದ ಹರಗಣವನ್ನು ಉಲ್ಲೇಖಿಸಿದ ಮಾತನಾಡಿದ ಅವರು, ''ಕರ್ನಾಟಕದ ಇತಿಹಾಸದಲ್ಲಿ ಸರ್ಕಾರದಿಂದ ಬ್ಯಾಂಕ್ ದರೋಡೆ ಆಗಿರಲಿಲ್ಲ. ಸಚಿವರೇ ಭಾಗಿಯಾಗಿದ್ದು ನಾಚಿಕೆಗೇಡಿನ ಸಂಗತಿ. ರಾಷ್ಟ್ರೀಕೃತ ಬ್ಯಾಂಕ್ ಇರುವುದರಿಂದ ಜಾರಿ ನಿರ್ದೇಶನಾಲಯದವರು ಭಾಗಿಯಾಗಿ ತನಿಖೆ ಮಾಡುತ್ತಿದ್ದಾರೆ. ಅದರಲ್ಲಿ ಮೇಲ್ನೋಟಕ್ಕೆ ಕಂಡು ಬರುತ್ತಿರುವವರನ್ನು ಬಂಧನ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಹೇಳಲು ಇಷ್ಟ ಪಡುತ್ತೇನೆ. ಮೂಡಾ ಹಗರಣ ಮತ್ತು ವಾಲ್ಮೀಕಿ ಹಗರಣ ವಿಚಾರದಲ್ಲಿ ತಾವು ಸ್ವಚ್ಛ ಇರುವುದನ್ನು ಸಾಬೀತು ಪಡಿಸಲು ಅನುವು ಮಾಡಬೇಕು ಮತ್ತು ರಾಜೀನಾಮೆ ನೀಡಬೇಕು. ಸರ್ಕಾರದ ಖಜಾನೆಯಿಂದ ಹಣ ಬಿಡುಗಡೆ ಆಗಿದೆ. ಸಿದ್ದರಾಮಯ್ಯ ಅವರಿಗೆ ಸಮರ್ಥನೆ ಮಾಡಲು, ಯಾರನ್ನೂ ಉಳಿಸಲು ನೈತಿಕತೆ ಇಲ್ಲ. ಆದ್ದರಿಂದ ಸಿದ್ದರಾಮಯ್ಯ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಯಾವುದೇ ಸರ್ಕಾರದಲ್ಲೂ ಹಗರಣಗಳಾದರೂ, ತನಿಖೆ ಮಾಡಿ ಕಾನೂನಿನ ಕ್ರಮ ಜರುಗಿಸಿ'' ಎಂದು ಕಾರಜೋಳ ಹೇಳಿದರು.

700 ಅಕೌಂಟ್​ಗೆ ನಿಗಮ ಹಣ ಜಮೆ - ರವಿಕುಮಾರ್: ವಿಧಾನ ಪರಿಷತ್ತಿನ ಮತ್ತೋರ್ವ ಬಿಜೆಪಿ ಸದಸ್ಯ ಎನ್​.ರವಿಕುಮಾರ್ ಮಾತನಾಡಿ, ''ವಾಲ್ಮೀಕಿ ನಿಗಮದ ಹಗರಣದಲ್ಲಿ ಇನ್ನೂ ಹಲವರ ಬಂಧನ ಆಗಬೇಕಿದೆ. ನಿಗಮದ 187 ಕೋಟಿ ಹಣದ ಪೈಕಿ 94 ಕೋಟಿ ಹಣವನ್ನು 700 ಅಕೌಂಟ್​ಗೆ ಹಾಕಲಾಗಿದೆ. ಈ ಸರ್ಕಾರ ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದ್ದು, ಇದು ಲೂಟಿ ಸರ್ಕಾರ'' ಎಂದು ಆರೋಪಿಸಿದರು.

ಮುಡಾ ಹಗರಣದಲ್ಲಿ ಸಮಾಜವಾದಿ ಸಿದ್ದರಾಮಯ್ಯ ಈಗ ಮಜಾವಾದಿ ಆಗಿದ್ದಾರೆ ಎಂಬ ಅವರ ನಿಜ ಬಣ್ಣ ಬಯಲಾಗಿದ್ದು, ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಯಡಿಯೂರಪ್ಪ ಈ ಸ್ಥಾನದಲ್ಲಿ ಇದ್ದಿದ್ದರೆ ನೀವು ಕೇಳುತ್ತಿದ್ರಲ್ಲಾ?, ಈಗ ನಾವು ವಿಪಕ್ಷದಲ್ಲಿದ್ದು ಕೇಳುತ್ತಿದ್ದು, ನೀವು ರಾಜೀನಾಮೆ ಕೊಟ್ಟು ಆಮೇಲೆ ಮಾತಾಡಿ'' ಎಂದರು.

ಪಂಚಮಸಾಲಿ 2ಎ ಮೀಸಲಾತಿ ಕೊಡಿಸಿ: ನಿರಾಣಿ: ಪಂಚಮಸಾಲಿ ಮೀಸಲಾತಿ ಕುರಿತಾಗಿ ಮಾತನಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ, ''ಬಿಜೆಪಿ ಸರ್ಕಾರವಿದ್ದಾಗ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬಗ್ಗೆ ಹೋರಾಟ ಮಾಡಲಾಗಿತ್ತು. ಈಗ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ನಮ್ಮ ಸರ್ಕಾರ ಬಂದ ಮೂರೇ ತಿಂಗಳಲ್ಲಿ 2ಎ ಮೀಸಲಾತಿ ಕೊಡಿಸುತ್ತೇವೆ ಎಂದು ವಿಧಾನಸೌಧದ ಒಳಗೆ, ಹೊರಗೆ ಹೇಳಿದ್ದರು. ಈ ಸರ್ಕಾರ ಬಂದು 15 ತಿಂಗಳು ಆಗಿದ್ದು, ಈಗಲಾದರೂ ಮೀಸಲಾತಿ ಕೊಡಿಸಬೇಕು. ಮೀಸಲಾತಿ ಕೊಡಿಸಿದವರೆಗೆ ನಾವು ಸನ್ಮಾನ ಮಾಡುತ್ತೇವೆ'' ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ‌ಕೂಡಲೇ ರಾಜೀನಾಮೆ ‌ನೀಡಬೇಕು, ಬಿಜೆಪಿಗರ ವಿರುದ್ಧವೂ ಕ್ರಮ ಕೈಗೊಳ್ಳಿ: ಕೇಂದ್ರ ಸಚಿವ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.