ETV Bharat / state

ಸದನದಲ್ಲಿ ಮುಡಾ ಹಗರಣದ ಚರ್ಚೆಗೆ ಸಿಗದ ಅವಕಾಶ; ರಾಜಭವನದ ಕದ ತಟ್ಟಿದ ಬಿಜೆಪಿ - ಜೆಡಿಎಸ್ - RAJ BHAVAN CHALO - RAJ BHAVAN CHALO

ಬಿಜೆಪಿ ಜೆಡಿಎಸ್ ಜನಪ್ರತಿನಿಧಿಗಳು ರಾಜಭವನ ಚಲೋ ನಡೆಸಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

bjp-jds-has-submitted-a-petition-to-the-governor-demanding-the-cms-resignation
ಸಿಎಂ ರಾಜೀನಾಮೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ (ETV Bharat)
author img

By ETV Bharat Karnataka Team

Published : Jul 25, 2024, 7:18 PM IST

Updated : Jul 25, 2024, 10:13 PM IST

ರಾಜಭವನದ ಕದ ತಟ್ಟಿದ ಬಿಜೆಪಿ - ಜೆಡಿಎಸ್ (ETV Bharat)

ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರವು ಸದನದಲ್ಲಿ ಮುಡಾ ವಿಚಾರದಲ್ಲಿ ಅವಕಾಶ ನೀಡದೇ ಇರುವುದನ್ನು ಖಂಡಿಸಿ ಬಿಜೆಪಿ - ಜೆಡಿಎಸ್ ಜನಪ್ರತಿನಿಧಿಗಳು ರಾಜಭವನ ಚಲೋ ನಡೆಸಿ, ಸಿಎಂ ರಾಜೀನಾಮೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ವಿಧಾನಮಂಡಲದ ಉಭಯ ಸದನಗಳ ಕಲಾಪ ಅನಿರ್ದಿಷ್ಟಾವಧಿಗೆ ಮೂಂದೂಡಿಕೆಯಾಗುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ - ಜೆಡಿಎಸ್ ಪ್ರಮುಖರು ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದರು. ರಾಜಭವನ ಚಲೋ ನಡೆಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದರು. ಮುಡಾ ಹಗರಣ ಮತ್ತು ಚರ್ಚೆಗೆ ಸದನದಲ್ಲಿ ಅವಕಾಶ ನಿರಾಕರಣೆ ಕುರಿತ ವಿವರ ನೀಡಿ ಸಿಎಂ ವಿರುದ್ಧ ದೂರು ಸಲ್ಲಿಸಿದರು, ಸಿಎಂ ರಾಜೀನಾಮೆಗೆ ಒತ್ತಾಯಿಸಿದರು.

ನಂತರ ಮಾತನಾಡಿದ ವಿರೋಧಪಕ್ಷದ ನಾಯಕ ಆರ್. ಅಶೋಕ್, ಮುಡಾ ಹಗರಣ ಜೆ. ಹೆಚ್ ಪಟೇಲರ ಕಾಲದ್ದು. ಅರಿಶಿಣ ಕುಂಕುಮಕ್ಕೆ ನೀಡಿರೋದು. ಒಂದು ಲಕ್ಷ ಸ್ಕ್ವಯರ್ ಫೀಟ್ 50:50 ರೇಶಿಯೋದಲ್ಲಿ ಲೂಟಿ‌ ಹೊಡೆದಿದ್ದಾರೆ. ಸಂವಿಧಾನ ರಕ್ಷಣೆ ಮಾಡ್ತೀನಿ ಅಂತ ಶಪಥ ಮಾಡಿದ್ದರು. ನನ್ನ ಬಂಧುಗಳಿಗೆ ಸಹಾಯ ಮಾಡಲ್ಲ ಅಂತ ಹೇಳಿದ್ದಾರೆ. ಸಂವಿಧಾನ ರಕ್ಷಣೆ ಮಾಡ್ತೀನಿ ಅಂತ‌ ಹೇಳಿ, ಭಕ್ಷಣೆ ಮಾಡಿದ್ದಾರೆ. ಸ್ಪೀಕರ್ ಕೂಡ ಕಾಂಗ್ರೆಸ್ ಪರ ವಾಲಿದ್ದಾರೆ. ಸದನದಲ್ಲಿ ಚರ್ಚೆ, ದಾಖಲೆ ನೀಡುವ ಅಧಿಕಾರ ನಮಗಿದೆ. ಆದರೆ ಚರ್ಚೆಗೆ ಅವಕಾಶ ಕೊಡದೇ ಹೆದರಿ ಪಲಾಯನ ಮಾಡಿದ್ದಾರೆ ಎಂದರು.

14 ಸೈಟು ಟಕಾ ಟಕ್​​​: 86 ಸಾವಿರ ಜನ ಸೈಟಿಗೆ ಕಾಯ್ತಿದ್ದರೂ 14 ಸೈಟು ಟಕಾ ಟಕ್ ಅಂತ ಸಿಎಂ ಕುಟುಂಬಕ್ಕೆ ಕೊಟ್ಟಿದ್ದಾರೆ. ಹಾಗಾಗಿ ಸಿಎಂ ರಾಜೀನಾಮೆ ಕೊಡಬೇಕು. ಎಲ್ಲಾ ಹಗರಣ ದಲಿತರಿಗೆ ಸಂಬಂಧಿಸಿದ್ದು, ದಲಿತರಿಗೆ ಜಮೀನು ಕೊಡಬೇಕು ಅಂತಿದೆ. ಆದರೆ, ಇವರು ದಲಿತರ ಜಮೀನೇ ಲೂಟಿ ಮಾಡಿದ್ದಾರೆ. ದಲಿತರ ಹಣದಲ್ಲಿ‌ ಗ್ಯಾರಂಟಿ ಕೊಟ್ಟಿದ್ದಾರೆ. ಮೂರು ಹಗರಣ ನಡೆದಿದೆ. ಮುಖ್ಯಮಂತ್ರಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಬಿಜೆಪಿ ಜೆಡಿಎಸ್‌ ಮುಖಂಡರು ಬಂದಿದ್ದೇವೆ. ಸಿಎಂ‌ ಒಂದು ಕ್ಷಣ ನಿಲ್ಲದೇ ರಾಜೀನಾಮೆ ಕೊಡಬೇಕು ಅಂತ ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದರು.

ಎರಡು ವಾರದ ಕಾಲದ ಅಧಿವೇಶನದಲ್ಲಿ ಈ ಸರ್ಕಾರ ಬೃಹತ್ ಹಗರಣದಲ್ಲಿ ಪಾಲ್ಗೊಂಡಿರೋದು ಜಗಜ್ಜಾಹೀರಾಗಿದೆ. ಈ ರೀತಿ ಅವಮಾನ ಯಾವ ಸರ್ಕಾರಕ್ಕೂ ಆಗಿಲ್ಲ. ಅದೂ ಸಿಎಂ ಅವರೇ ಲೂಟಿ ಮಾಡಿರೋ ಎರಡು ಹಗರಣ. ವಾಲ್ಮೀಕಿ ಹಗರಣ 187 ಕೋಟಿ. ಒಬ್ಬ ಮಂತ್ರಿ ರಾಜೀನಾಮೆ ಕೊಟ್ಟು ಜೈಲಿಗೆ ಹೋಗಿದ್ದಾರೆ. ಮತ್ತೊಬ್ಬ ಶಾಸಕ ಹೋಗಬೇಕಾದ ಬಾಕಿ ಇದೆ ಎಂದು ಆರೋಪಿಸಿದರು.

ಸಿಎಂ‌ ನಾಳೆ ಸುದ್ದಿಗೋಷ್ಠಿ ಮಾಡುತ್ತಾರಂತೆ, ಸದನದಲ್ಲೇ ಮಾತನಾಡಬಹುದಿತ್ತು. ಸದನದಲ್ಲೇ ಚರ್ಚೆ ನಡೆಯಬೇಕಿತ್ತು. ಹೆದರಿ ಸಿಎಂ ಪಲಾಯನ ಮಾಡಿದ್ದಾರೆ. ಮೂರು ಲಕ್ಷಕ್ಕೂ ಹೆಚ್ಚು ಹಣ ಅವಾರ್ಡ್ ಆಗಿದೆ. ಲೇಔಟ್ ಫಾರ್ಮೇಶನ್ ಆಗಿ, ಸೈಟ್ ಅಲಾಟ್ ಆಗಿದೆ. ಇವರು ಹೇಗೆ ರಿಜಿಸ್ಟರ್ ಮಾಡಿಕೊಂಡರು? ಎಂದು ಪ್ರಶ್ನಿಸಿದರು.

ಇಡಿ ವಿರುದ್ಧ ಸರ್ಕಾರದ ಪ್ರತಿಭಟನೆ, ಹೈಕೋರ್ಟ್​​​ನಲ್ಲಿ ಇಡಿ ವಿರುದ್ಧದ ಪ್ರಕರಣಕ್ಕೆ ತಡೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರೋ ಹಗರಣ ಸಂಬಂಧ ಸಿಬಿಐ, ಇಡಿ ತನಿಖೆ ನಡೆಯುತ್ತಿದ್ದರೂ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕರು ಪ್ರತಿಭಟನೆ ಮಾಡಿ ಇಡಿ ವಿರುದ್ಧ ದೂರು ನೀಡಿದರು. ಹೈಕೋರ್ಟ್ ಅದಕ್ಕೆ ತಡೆ ನೀಡಿದೆ. ವಾಲ್ಮೀಕಿ ನಿಗಮದ ಹಗರಣ ಮಂತ್ರಿ ರಾಜೀನಾಮೆ ಕೊಟ್ಟಿದ್ದಾರೆ. ಸದನದಲ್ಲಿ ಸಿದ್ದರಾಮಯ್ಯ ಧೈರ್ಯದಿಂದ ಎದುರಿಸ್ತಾರೆ ಅಂದುಕೊಂಡಿದ್ದೆವು. ಅದ್ಯಾವುದೂ ಮಾಡದೇ ಹೆದರಿ ಪಲಾಯನ ಮಾಡಿದ್ದಾರೆ. ರಾಜ್ಯಪಾಲರ ಭೇಟಿ ಮಾಡಿ, ಮುಡಾದಲ್ಲಿ ಆದ ಹಗರಣ ಸಿಬಿಐ ತನಿಖೆಗೆ ನೀಡಬೇಕು ಎಂದು ನಾವು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ರಾಜ್ಯಪಾಲರು ನಿನ್ನೆ ಸಿಎಂ ಕರೆದು ಚರ್ಚೆ ಮಾಡಿದ್ದಾರೆ. ನಾವು ಕೂಡ ಕಾದು ನೋಡುತ್ತೇವೆ, ನಾವು ನಮ್ಮ ಮಿತ್ರ ಪಕ್ಷ ಕಾದು ನೋಡುತ್ತೇವೆ ಎಂದರು.

ಸಿ. ಟಿ ರವಿ ಮಾತನಾಡಿ, ಕಾಂಗ್ರೆಸ್ ಪಾದಯಾತ್ರೆ ಮಾಡುವ ವಿಚಾರ ಚರ್ಚೆಗೆ ಬಂದಿದೆ, ಬರೀ ಪಾದಯಾತ್ರೆ ಅಲ್ಲ, ಪ್ರಾಯಶ್ಚಿತಕ್ಕೆ ಉರುಳುಸೇವೆ ಮಾಡಿಕೊಂಡು ಬರಲಿ. ತಾಯಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಉರುಳುಸೇವೆ ಮಾಡಲಿ. ಅವರು ಅಧಿಕಾರದಲ್ಲಿ ಇರೋರು, ತನಿಖೆ ಮಾಡಬೇಕು. ಸ್ವಜನ ಪಕ್ಷಪಾತ ಮಾಡಿ, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರು ದಲಿತರ ಜಮೀನು ಖರೀದಿಸಿ ತಪ್ಪು ಮಾಡಿದ್ದಾರೆ.

ಸದನದಲ್ಲಿ ಚರ್ಚೆಗೆ ಅವಕಾಶ ಕೊಡಬೇಕಿತ್ತು. ನಾವು ನಿರಪರಾಧಿ ಅಂತ ನಿರೂಪಿಸಲು ಅವಕಾಶ ಇತ್ತು. ಸದನದಲ್ಲಿ ದಾಖಲೆ ಕೊಟ್ಟು ಚರ್ಚೆ ಮಾಡಬೇಕು. ಅವರು ನಿರಪರಾಧಿ ಆಗಿದ್ದರೆ, ಸದನದಲ್ಲಿ ನಿರೂಪಿಸಬೇಕಿತ್ತು. ಅವರು ಸುದ್ದಿಗೋಷ್ಠಿ ಮಾಡ್ತೀನಿ ಅಂದರೆ ಅದನ್ನ ಯಾರೂ ಒಪ್ಪಲ್ಲ. ದಾಖಲೆಯನ್ನ ಸದನದಲ್ಲೇ ಇಟ್ಟು ಚರ್ಚೆ ಮಾಡಬೇಕಿತ್ತು ಎಂದು ಹೇಳಿದರು.

ಜೆಡಿಎಸ್ ನಾಯಕ ಸುರೇಶ್ ಬಾಬು ಮಾತನಾಡಿ, ಸರ್ಕಾರ ಬಂದು ಒಂದು ವರ್ಷದಲ್ಲಿ ಸಚಿವರೊಬ್ಬರ ತಲೆದಂಡ ಆಗಿದೆ. ಚುನಾವಣೆ ನಡೆಸಲು ರಾಜ್ಯದ ಬೊಕ್ಕಸ ಖಾಲಿ ಮಾಡಿದ್ದಾರೆ. ನಮ್ಮ ವಾಲ್ಮೀಕಿ ನಿಗಮದ ಹಣ ಆಂಧ್ರಕ್ಕೆ ಕಳಿಸಿದ್ದಾರೆ. ಇಡಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಮುಡಾ ಹಗರಣದಲ್ಲಿ ಸ್ವತಃ ಸಿಎಂ ಭಾಗಿಯಾಗಿದ್ದಾರೆ. ಚರ್ಚೆಗೆ ಅವಕಾಶ ಕೊಡದಂತೆ ಸಭಾಪತಿಗಳಿಗೆ ತಾಕೀತು ಮಾಡಿದ್ದಾರೆ. ಈ ರೀತಿ ದುರಾಡಳಿತ ಮಾಡ್ತಾರೆ ಅಂತ ನಾವು ಭಾವಿಸಿರಲಿಲ್ಲ ಎಂದರು.

ಇದನ್ನೂ ಓದಿ : ಪ್ರತಿಪಕ್ಷಗಳಿಂದ ಮುಂದುವರಿದ ಮುಡಾ ಗದ್ದಲ; ಒಂದು ದಿನ ಮೊದಲೇ ವಿಧಾನಸಭೆ ಅಧಿವೇಶನ ಮೊಟಕು - Assembly adjourned sine die

Last Updated : Jul 25, 2024, 10:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.