ETV Bharat / state

ರಾಜ್ಯದಲ್ಲಿ ಬಾಣಂತಿಯರ ಸಾವು, ಅಧಿಕಾರಿಗಳ ಆತ್ಮಹತ್ಯೆ: ಸತ್ಯಶೋಧನೆಗೆ ಬಿಜೆಪಿ ಆಂದೋಲನ ಸಮಿತಿ ರಚನೆ - BJP AGITATION COMMITTEE

ಬಾಣಂತಿಯರ ಸಾವುಗಳ ಬಗ್ಗೆ ಸತ್ಯಶೋಧನೆ, ಅಧಿಕಾರಿಗಳ ಆತ್ಮಹತ್ಯೆಗೆ ಕಾರಣ ಹುಡುಕಲು ಬಿಜೆಪಿಯಿಂದ ಆಂದೋಲನ ಸಮಿತಿ ರಚನೆ ಮಾಡಲಾಗಿದೆ.

MATERNAL DEATHS  OFFICERS DEATH CASES  BENGALURU  ಬಿಜೆಪಿ ಆಂದೋಲನ ಸಮಿತಿ
ಬಿಜೆಪಿ (ETV Bharat)
author img

By ETV Bharat Karnataka Team

Published : Dec 30, 2024, 6:07 PM IST

ಬೆಂಗಳೂರು: ಬಾಣಂತಿಯರ ಸಾವುಗಳ ಸತ್ಯಶೋಧನೆ, ಅಧಿಕಾರಿಗಳು ಹಾಗೂ ಇತರರ ಸರಣಿ ಆತ್ಮಹತ್ಯೆಗೆ ಕಾರಣ ಹುಡುಕಿ ಆಂದೋಲನ ನಡೆಸಲು ಬಿಜೆಪಿ ಸಜ್ಜಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮಾರ್ಗದರ್ಶನದಲ್ಲಿ ಪ್ರಮುಖ ಮುಖಂಡರನ್ನು ಒಳಗೊಂಡ ಆಂದೋಲನ ಸಮಿತಿ ಹಾಗೂ ಸತ್ಯಶೋಧನಾ ತಂಡವನ್ನು ಪ್ರತ್ಯೇಕವಾಗಿ ರಚಿಸಲಾಗಿದ್ದು, ಅದಕ್ಕೆ ಜವಾಬ್ದಾರಿ ಸಹ ನಿಗದಿಪಡಿಸಲಾಗಿದೆ.

ಸರ್ಕಾರಿ ಅಧಿಕಾರಿ, ಸಿಬ್ಬಂದಿ ಮತ್ತು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡ ಸ್ಥಳಗಳಿಗೆ ಭೇಟಿ ನೀಡಿ ಆತ್ಮಹತ್ಯೆಗೆ ಕಾರಣ, ಪೂರ್ವಾಪರ ಮಾಹಿತಿ ಸಂಗ್ರಹಿಸುವುದು. ಪ್ರಕರಣ ಬೆಳಕಿಗೆ ಬಂದ ನಂತರ ಉಸ್ತುವಾರಿ ಸಚಿವರ ಸ್ಪಂದನೆ, ಸರ್ಕಾರ ಕೈಗೊಂಡ ಕ್ರಮ, ತನಿಖೆಯ ಪ್ರಗತಿ ಮತ್ತಿತರ ವಿವರಗಳನ್ನು ಆಂದೋಲನ ಸಮಿತಿ ಸಂಗ್ರಹಿಸಲಿದೆ.

18 ಮಂದಿ ಪ್ರಮುಖರ ಆಂದೋಲನ ಸಮಿತಿ: ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿ ಒಟ್ಟು 18 ಜನ ಪ್ರಮುಖರನ್ನು ಒಳಗೊಂಡ ಆಂದೋಲನ ಸಮಿತಿಯು ಸಂಗ್ರಹಿಸಿದ ಮಾಹಿತಿಯನ್ನು ಜನರ ಮುಂದಿಡಲಿದೆ. ಹೋರಾಟದ ಮೂಲಕ ಸರ್ಕಾರಕ್ಕೆ ತ್ವರಿತ ಕ್ರಮಗಳಿಗೆ ಒತ್ತಡ ಹೇರಲಿದೆ.

ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಬಿಸಿ ಮುಟ್ಟಿಸಿದರೆ ಸರ್ಕಾರದ ಬಣ್ಣ ಬಯಲಾಗಲಿದೆ. ತಳಮಟ್ಟದಲ್ಲಿ ಏನಾಗುತ್ತಿದೆ, ಏನಾಗಿದೆ ಎಂದು ಎತ್ತಿ ತೋರಿಸಿ ಗಟ್ಟಿ ಜನಾಭಿಪ್ರಾಯ ರೂಪುಗೊಳ್ಳುತ್ತದೆ. ಈ ಕ್ರಮದಿಂದ ಜನರ ಜೊತೆಗೆ ನಿಕಟತೆ, ಸಮಸ್ಯೆ ಬಗೆಹರಿದರೆ ಪಕ್ಷದ ಪರ ಸಕಾರಾತ್ಮಕ ವಾತಾವರಣ ಜೊತೆಗೆ ಸರ್ಕಾರದ ಕೈಕಟ್ಟಿ ಹಾಕುವುದು ಪಕ್ಷದ ಕಾರ್ಯತಂತ್ರವಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗೂ ನವಜಾತ ಶಿಶುಗಳ ಸಾವಿನ ಹಿನ್ನೆಲೆಯಲ್ಲಿ ಸತ್ಯಶೋಧನೆಗೆ ತಜ್ಞರು ಸೇರಿ 15 ಸದಸ್ಯರ ತಂಡ ಸತ್ಯಶೋಧನೆಗೆ ಇಳಿಯಲಿದೆ. ವಸ್ತುಸ್ಥಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸುವ ಜವಾಬ್ದಾರಿಯನ್ನು ತಂಡವು ಮಾಡಲಿದೆ. ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲಿ ಸರ್ಕಾರದ ಕಣ್ಣು ತೆರೆಸಲು ಬಿಜೆಪಿ ರಾಜ್ಯಾಧ್ಯಕ್ಷರು ಬಯಸಿದ್ದಾರೆ.

ವಿರೋಧಕ್ಕಾಗಿ ವಿರೋಧ, ಪ್ರತಿಪಕ್ಷಗಳಿಗೆ ಮಾಡಲು ಕೆಲಸವಿಲ್ಲವೆಂದು ಸಮಸ್ಯೆಯ ತೀವ್ರತೆ ತಗ್ಗಿಸುವ, ಪ್ರತಿಯೊಂದಕ್ಕೂ ಅಧಿಕಾರಿಗಳತ್ತ ಬೊಟ್ಟು ತೋರಿಸಿ ಸರ್ಕಾರ ನುಣುಚಿಕೊಳ್ಳುತ್ತಿದೆ. ವರ್ಗಾವಣೆ ದಂಧೆ, ಮಿತಿಮೀರಿದ ಭ್ರಷ್ಟಾಚಾರ ಆರೋಪ, ಆರ್ಥಿಕ ಸಂಕಷ್ಟದ ಒತ್ತಡದಿಂದ ಆಡಳಿತ ವ್ಯವಸ್ಥೆ ಕುಸಿತ, ಅಭಿವೃದ್ಧಿ ಸ್ಥಗಿತವಾಗಿದೆ ಎಂದು ಸಾಕ್ಷಿ, ಪುರಾವೆ, ದಾಖಲೆಗಳ ಸಹಿತ ಸರ್ಕಾರಕ್ಕೆ ಚಾಟಿ ಬೀಸಲು ಬಿಜೆಪಿ ಸಜ್ಜಾಗಿದೆ.

ಜನವರಿಯಲ್ಲಿ ಪ್ರವಾಸ: ಸಮಿತಿ ಮತ್ತು ತಂಡ ಪ್ರತ್ಯೇಕವಾಗಿ ಒಂದೆರಡು ದಿನಗಳಲ್ಲಿ ಸಭೆ ಸೇರಿ, ಪ್ರವಾಸ ರೂಪುರೇಷೆ ಅಂತಿಮಗೊಳಿಸಲಿವೆ. ಜನವರಿಯಲ್ಲೇ ಪ್ರವಾಸ ನಿಗದಿಯಾಗಿದ್ದು, ಜಿಲ್ಲೆ, ಸ್ಥಳಗಳು ಸಂಖ್ಯೆಯ ಆಧಾರದಲ್ಲಿ ಪ್ರವಾಸದ ಅವಧಿ ಗೊತ್ತಾಗಲಿದೆ. ತಿಂಗಳು ಪೂರ್ತಿ ಆಂದೋಲನ ಮತ್ತು ಅಧ್ಯಯನ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಆಂದೋಲನ ಸಮಿತಿ: ಛಲವಾದಿ ನಾರಾಯಣಸ್ವಾಮಿ, ಆರಗ ಜ್ಞಾನೇಂದ್ರ, ಎನ್.ಮಹೇಶ್, ಅಶ್ವತ್ಥನಾರಾಯಣ, ಬಸವರಾಜ ಮತ್ತಿಮಡ್, ಎನ್.ರವಿಕುಮಾರ್, ಕೆ.ಎಸ್.ನವೀನ್, ರಾಜುಗೌಡ, ಭಾರತಿಶೆಟ್ಟಿ, ಹೇಮಲತಾ ನಾಯಕ್, ಲಲಿತಾ ಅನಪೂರ್‌, ರಾಜಕುಮಾರ್ ಪಾಟೀಲ ತೇಲ್ಯೂರ್, ಚಂದು ಪಾಟೀಲ್, ಭಾಸ್ಕರ್‌ರಾವ್, ವೆಂಕಟೇಶ ದೊಡ್ಡರಿ, ವಸಂತಕುಮಾರ್, ಕರುಣಾಕರ್ ಖಾಸಲೆ. ಸಂಯೋಜಕ: ಜಗದೀಶ ಹಿರೇಮನಿ.

ಸತ್ಯಶೋಧನಾ ತಂಡ: ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಅವಿನಾಶ್, ಡಾ.ಬಸವರಾಜ ಕೇಲಗಾರ್, ಡಾ.ಲಕ್ಷ್ಮಿ ಅಶ್ವಿನ್‌ಗೌಡ, ಡಾ. ನಾರಾಯಣ್, ಡಾ.ಅರುಣಾ, ವಿಜಯಲಕ್ಷ್ಮೀ ಕರೂರು, ಡಾ.ಪದ್ಮಪ್ರಕಾಶ್, ಡಾ.ವಿಜಯಲಕ್ಷ್ಮೀ ಬಾ.ತುಂಗಳ, ಡಾ. ಸುಧಾ ಹಲ್ಕಾಯಿ, ರತನ್ ರಮೇಶ್
ಪೂಜಾರಿ, ಪ್ರದೀಪ್‌ ಕಡಾಡಿ. ಸಂಯೋಜಕರು: ಸಿ.ಮಂಜುಳಾ, ಕೆ.ಎಂ.ಅಶೋಕ್‌ ಗೌಡ.

ಇದನ್ನೂ ಓದಿ: ನಮ್ಮದು ಸ್ವಚ್ಛ ಆಡಳಿತದ ಸರ್ಕಾರ, ಗುತ್ತಿಗೆದಾರನ ಸಾವಿಗೂ ಪ್ರಿಯಾಂಕ್ ಖರ್ಗೆಗೂ ಸಂಬಂಧವಿಲ್ಲ : ಡಿ ಕೆ ಶಿವಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.