ETV Bharat / state

ಮಾಹಿತಿ ನೀಡದೆ ಸದನದಲ್ಲಿ ಕೇಂದ್ರದ ವಿರುದ್ಧ ನಿರ್ಣಯ ಮಂಡನೆ: ನಾಳೆ ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ನಿರ್ಧಾರ - ಕೇಂದ್ರದ ವಿರುದ್ಧ ನಿರ್ಣಯ ಮಂಡನೆ

ಮಾಹಿತಿ ನೀಡದೆ ಸದನದಲ್ಲಿ ಕೇಂದ್ರದ ವಿರುದ್ಧ ನಿರ್ಣಯ ಮಂಡಿಸಿದ್ದು ಇದರ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ಆರ್​ ಅಶೋಕ್​ ಹೇಳಿದರು.

ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ನಿರ್ಧಾರ
ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ನಿರ್ಧಾರ
author img

By ETV Bharat Karnataka Team

Published : Feb 22, 2024, 9:31 PM IST

Updated : Feb 22, 2024, 10:56 PM IST

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕಿಡಿ

ಬೆಂಗಳೂರು: ಸದನಕ್ಕೆ ಮಾಹಿತಿ ನೀಡದೆ ಕೇಂದ್ರದ ವಿರುದ್ಧ ನಿರ್ಣಯ ಮಂಡಿಸಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಇದರ ವಿರುದ್ಧ ನಾಳೆ ರಾಜ್ಯಪಾಲರಿಗೆ ದೂರು ನೀಡಲಿದ್ದೇವೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸದನ ನಡೆಯುತ್ತಿರುವ ಸಂದರ್ಭದಲ್ಲಿ ಇದು ಕರಾಳ ದಿನ ಅನಿಸುತ್ತಿದೆ. ಅಧಿವೇಶನ ಹೇಗೆ ನಡೆಯಬೇಕು ಅಂತ ಬಿಎಸಿ ಸಭೆ ನಡೆಸಿ ಚರ್ಚಿಸಲಾಗುತ್ತದೆ. ಯಾವ ಬಿಲ್ ಮಂಡನೆ, ಎಷ್ಟು ದಿನ ಸದನ ಅಂತ ನಿರ್ಣಯ ಆಗುತ್ತದೆ. ಯಾವೆಲ್ಲಾ ಬಿಲ್ ಮಂಡನೆ ಅಂತ ಮನೆಗೆ ಪೋಸ್ಟ್ ಬರುತ್ತದೆ. ಏಕಾಏಕಿ ಕೇಂದ್ರದ ವಿರುದ್ಧ ಅವಹೇಳನ ಮಾಡುವ ಚಾಳಿ ಮುಂದುವರೆದಿದೆ.

ಯಡಿಯೂರಪ್ಪ ಅವರು ಸಿಎಂ‌ ಆಗಿದ್ದಾಗ ಬಜೆಟ್ ಮಂಡಿಸಿದ್ದರು. ಅವರು ಕೇಂದ್ರದ ಸಹಕಾರ ಬೇಕು ಅಂತ ಹೇಳಿದ್ದರು. ಆದರೆ ಸಿದ್ದರಾಮಯ್ಯ ಇವರ ತಲೆಯಲ್ಲಿ ವಿಷ ಬಿತ್ತಿದ್ದಾರೆ. ಅವರು ಕೇಂದ್ರದ ವಿರುದ್ಧ ನಿರ್ಣಯ ಮಂಡನೆ ಮಾಡೋದಾದರೆ ಮೊದಲೇ ಹೇಳಬೇಕಿತ್ತು. ಆದರೆ ಕಳ್ಳರ ರೀತಿ ನಿರ್ಣಯ ಮಂಡಿಸಿದ್ದಾರೆ. ಸ್ಪೀಕರ್ ಕೂಡ ನಮ್ಮ ಗಮನಕ್ಕೆ ತಂದಿಲ್ಲ. ಬಡವರ, ರೈತರ ಪರ ಚರ್ಚೆ ಆಗಬೇಕಿತ್ತು. ಇವರು ಪ್ರಧಾನಿ ಮೋದಿ ಅವರನ್ನು ತೆಗಳುವ ಕೆಲಸ ಮಾಡಿದ್ದಾರೆ. ಇವರು ಲೋಕಸಭೆ ಚುನಾವಣೆ ಸೋತಿರೋ ರೀತಿ ಬಿಲ್ ಮಂಡಿಸಿದ್ದಾರೆ ಎಂದು ಆರೋಪಿಸಿದರು.

ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕರು ಹೇಳಿದಂತೆ ಸದನ ಸುಸೂತ್ರವಾಗಿ ನಡೆಸಲು ಸಹಕಾರ ನೀಡಿದ್ದೇವೆ. ಕಾನೂನು ಸಚಿವರು ಏಕಾಏಕಿ ಅಡಿಷನಲ್ ಸಬ್ಜೆಕ್ಟ್ ಮಂಡನೆ ಮಾಡಿ ಸದನದ ಎಲ್ಲಾ ನೀತಿ, ನಿಯಮ ಗಾಳಿಗೆ ತೂರಿದ್ದಾರೆ. ಅದಕ್ಕೆ‌ ಸ್ಪೀಕರ್ ಕೂಡ ಕೈ ಜೋಡಿಸಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ನಾಲಾಯಕ್ ಕಾಂಗ್ರೆಸ್ ಸರ್ಕಾರ ಇದೆ ಗ್ಯಾರಂಟಿ ಮೂಲಕ ಲೋಕಸಭಾ ಚುನಾವಣೆ ಗೆಲ್ಲುತ್ತೇವೆ ಅನ್ನೋ ವಿಶ್ವಾಸ ಅವರಿಗಿಲ್ಲ. ಸದನದ ಒಳಗೂ ರಾಜಕೀಯ ಮಾಡ್ತಿದ್ದಾರೆ. ಸದನದ ಗೌರವ ಹಾಳು ಮಾಡುವ ಕೆಲಸ‌ ಮಾಡಿದ್ದಾರೆ. ಇದನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ. ಕಾನೂನುಬಾಹಿರ ನಿರ್ಣಯ ಮಂಡಿಸಿದ್ದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಇದರ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡುತ್ತೇವೆ.

ಸರ್ಕಾರ ವಿಪಕ್ಷಗಳ ತಾಳ್ಮೆ ಕೆಡಿಸುವ ಕೆಲಸ ಮಾಡುತ್ತಿದೆ. ಆಡಳಿತ ಪಕ್ಷ ಈ ರೀತಿ ಕೈ ಹಾಕಿರೋದು ದುರದೃಷ್ಟ. ನಿಮ್ಮ ಗ್ಯಾರಂಟಿ ಮೇಲೆ ನಿಮಗೆ ನಂಬಿಕೆ‌ ಇದ್ದರೆ ಜನರ ಬಳಿ ಹೋಗೋಣ. ಚುನಾವಣೆಯಲ್ಲಿ ನಿರ್ಧಾರ ಆಗಲಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲೆಸೆದರು.

ಪ.ಜಾ, ಪ.ಪಂ ಅನುದಾನ ಬೇರೆ ಕಡೆ ವರ್ಗಾವಣೆ:

ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದು 9 ತಿಂಗಳು ಕಳೆದಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮಂಜೂರಾದ 11,144 ಕೋಟಿ ಅನುದಾನವನ್ನು ಬೇರೆ ಕಡೆ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡಿದ್ದನ್ನು ಖಂಡಿಸಿ ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆಯನ್ವಯ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ತಿಳಿಸಿದ್ದಾರೆ.

ಎಸ್‍ಇಎಸ್‍ಪಿ ಎಸ್‍ಟಿಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಮೂಲಕ ಈ ಸರಕಾರ ದಲಿತರಿಗೆ ನಿರಂತರವಾಗಿ ಅನ್ಯಾಯ ಮಾಡುತ್ತ ಬಂದಿದೆ. ಈ ಹಣವನ್ನು ಗ್ಯಾರಂಟಿಗಳಿಗೆ ಮತ್ತು ಬೇರೆ ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದನ್ನು ಖಂಡಿಸಿ ಈ ಪ್ರತಿಭಟನೆ ನಡೆಯಲಿದೆ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ದಲಿತರಿಗೆ ಈ ಹಿಂದೆ ಬಿಜೆಪಿ ಸರಕಾರ ಜಾರಿಗೊಳಿಸಿದ್ದ 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆಯನ್ನು ರದ್ದು ಮಾಡಲಾಗಿದೆ. ಇದು ಖಂಡನೀಯ. ಎಸ್‍ಸಿ, ಎಸ್‍ಟಿ ಸಮುದಾಯದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿವೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ: ಬಿಜೆಪಿ‌ ಸಭಾತ್ಯಾಗದ ನಡುವೆ ವಿಧೇಯಕಕ್ಕೆ ಪರಿಷತ್ ಅಂಗೀಕಾರ

Last Updated : Feb 22, 2024, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.