ETV Bharat / state

ಮೈಸೂರು ದಸರಾ 2024: ಜಂಬೂ ಸವಾರಿಯಲ್ಲಿ ಭಾಗವಹಿಸುವ 14 ಆನೆಗಳ ಪರಿಚಯ ನಿಮಗಿದೆಯೇ? - Jambo Savari Elephants

author img

By ETV Bharat Karnataka Team

Published : Aug 20, 2024, 8:05 PM IST

ಇತಿಹಾಸ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದೆ. ನಾಳೆ ಗಜಪಯಣ ಆರಂಭಗೊಳ್ಳಲಿದೆ. ಈ ಬಾರಿ ಒಟ್ಟು 14 ಆನೆಗಳು ಭಾಗವಹಿಸಲಿದ್ದು, ಅವುಗಳ ಕಿರು ಪರಿಚಯ ಇಲ್ಲಿದೆ.

ಜಂಬೂ ಸವಾರಿಯಲ್ಲಿ ಭಾಗವಹಿಸುವ 14 ಆನೆಗಳು
ಜಂಬೂ ಸವಾರಿಯಲ್ಲಿ ಭಾಗವಹಿಸುವ 14 ಆನೆಗಳು (Karnataka Forest Department)

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2024ರ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಯ ಮೊದಲ ಹಂತದಲ್ಲಿ 9 ಆನೆಗಳು ನಾಳೆ ಮತ್ತು ಎರಡನೇ ಹಂತದಲ್ಲಿ 5 ಆನೆಗಳು 10 ದಿನಗಳ ನಂತರ ಅರಮನೆಗೆ ಆಗಮಿಸಲಿವೆ. ಈ ಬಾರಿ ಒಟ್ಟು 14 ಆನೆಗಳು ನಾಡಹಬ್ಬದಲ್ಲಿ ಭಾಗವಹಿಸಲಿವೆ.

ಮೈಸೂರು ದಸರಾ
ಮೈಸೂರು ದಸರಾ (ETV Bharat)

ಅಭಿಮನ್ಯು: ಐದನೇ ಬಾರಿಗೆ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯುಗೆ ನೀಡಲಾಗಿದೆ. ಮತ್ತಿಗೋಡು ಶಿಬಿರದಲ್ಲಿರುವ 58 ವರ್ಷದ ಅಭಿಮನ್ಯು ಆನೆಯನ್ನು 1970ರಲ್ಲಿ ಕೊಡಗು ಜಿಲ್ಲೆ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಅಭಿಮನ್ಯು, ಪುಂಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದೆ. ಈ ಆನೆ 2012ರಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. ಇದು 2015ರ ಜಂಬೂಸವಾರಿ ವೇಳೆ ಕರ್ನಾಟಕ ವಾದ್ಯಗೋಷ್ಠಿ ತಂಡದ ಗಾಡಿಯನ್ನು ಮೆರವಣಿಗೆಯಲ್ಲಿ ಎಳೆದಿತ್ತು. 2020ರಿಂದ ಅಭಿಮನ್ಯು, ಚಿನ್ನದ ಅಂಬಾರಿ ಹೊರುವ ಕಾರ್ಯವನ್ನು ಯಶಸ್ವಿ ನಿರ್ವಹಿಸುತ್ತಿದ್ದಾನೆ. 2.74 ಮೀಟರ್ ಎತ್ತರ ಇರುವ ಅಭಿಮನ್ಯು, ಸುಮಾರು 4,700ರಿಂದ 5,000 ಕೆ.ಜಿ.ಗೂ ಹೆಚ್ಚಿನ ತೂಕವಿದ್ದಾನೆ. 30ಕ್ಕೂ ಹೆಚ್ಚು ಹುಲಿಗಳನ್ನು ಹಿಡಿಯುವಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದಾನೆ.

ಮೈಸೂರು ದಸರಾ
ಮೈಸೂರು ದಸರಾ (ETV Bharat)

ಧನಂಜಯ: ದುಬಾರೆ ಆನೆ ಶಿಬಿರದಲ್ಲಿರುವ 44 ವರ್ಷದ ಧನಂಜಯ ಆನೆಯನ್ನು 2013ರಲ್ಲಿ ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಸೆರೆ ಹಿಡಿಯಲಾಗಿತ್ತು. ಕಾಡಾನೆ ಮತ್ತು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಈ ಆನೆಯನ್ನು ಬಳಸಲಾಗುತ್ತದೆ. ಧನಂಜಯ ಆನೆ ಐದು ವರ್ಷದಿಂದ ದಸರಾದಲ್ಲಿ ಭಾಗವಹಿಸುತ್ತಿದೆ. 2.80 ಮೀಟರ್ ಎತ್ತರ ಇರುವ ಈ ಆನೆ, ಸುಮಾರು 4000 ರಿಂದ 4200 ಕೆ.ಜಿ. ತೂಕವಿದೆ. ಸದ್ಯ ಈ ಬಾರಿ ದಸರಾದಲ್ಲಿ ನೌಫತ್ ಆನೆಯಾಗಿದೆ.

ದಸರಾ ಆನೆಗಳು
ದಸರಾ ಆನೆಗಳು (ETV Bharat)

ಭೀಮ: 24ರ ಹರೆಯದ ಮತ್ತಿಗೋಡು ಭೀಮ ಆನೆ, ಅಭಿಮನ್ಯುವಿನ ನಂತರ ಚಿನ್ನದ ಅಂಬಾರಿ ಹೊರಲು ಬೇಕಾದ ಎಲ್ಲಾ ಸಾಮರ್ಥ್ಯ ಹೊಂದಿದ್ದಾನೆ. ಈ ಆನೆ 2.85 ಮೀ. ಎತ್ತರ, 3.05 ಮೀ ಉದ್ದ ಮತ್ತು ಸುಮಾರು 3800 ರಿಂದ 4,000 ಕೆ.ಜಿ. ತೂಕ ಹೊಂದಿದೆ. ಭೀಮ 2022 ಹಾಗೂ 2017ರ ದಸರಾದಲ್ಲಿ ಪಾಲ್ಗೊಂಡಿದ್ದ. 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಹೆತ್ತೂರಿನಲ್ಲಿ ಈತ ಸೆರೆ ಸಿಕ್ಕಿದ್ದ.

ದಸರಾ ಆನೆಗಳು
ದಸರಾ ಆನೆಗಳು (ETV Bharat)

ಮಹೇಂದ್ರ: ಮತ್ತೀಗೋಡು ಶಿಬಿರದ 41 ವರ್ಷದ ಆನೆ ಮಹೇಂದ್ರ. ಈತ 2.75 ಮೀ ಎತ್ತರ, 3.25 ಮೀ ಉದ್ದ ಮತ್ತು ಸುಮಾರು 3,800 ರಿಂದ 4,000 ಕೆ.ಜಿ. ತೂಕ ಹೊಂದಿದ್ದಾನೆ. ಹೀಗಾಗಿ ಮಹೇಂದ್ರ ಭವಿಷ್ಯದಲ್ಲಿ ‘ಗಜಪಡೆಯ ಕ್ಯಾಪ್ಟನ್’ ಆಗಲಿದ್ದಾನೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ. 2022ರ ಶ್ರೀರಂಗಪಟ್ಟಣ ದಸರಾದಲ್ಲಿ ಭಾಗಿಯಾದ ಅನುಭವ ಮಹೇಂದ್ರನಿಗೆ ಇದೆ. ಕಾಡಾನೆ ಹಾಗೂ ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಈತ ಭಾಗಿಯಾಗಿದ್ದಾನೆ.

ದಸರಾ ಆನೆಗಳು
ದಸರಾ ಆನೆಗಳು (ETV Bharat)

ಗೋಪಿ: ದುಬಾರೆ ಶಿಬಿರದ ಗೋಪಿಗೆ 42 ವರ್ಷ. 1990ರಲ್ಲಿ ಹಾಸನದ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಈತನನ್ನು ಸೆರೆ ಹಿಡಿಯಲಾಗಿತ್ತು. ಗೋಪಿ 12ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾನೆ. 2015ರಲ್ಲಿ ಗೋಪಿ ಅರಮಮನೆಯ ಪೂಜಾ ಕೈಂಕರ್ಯದಲ್ಲಿ ಪಟ್ಟದ ಆನೆಯಾಗಿದ್ದ. ಗೋಪಿ, 2.86 ಮೀ ಎತ್ತರ, ಸುಮಾರು 3700 ರಿಂದ 3800 ಕೆ.ಜಿ. ತೂಕ ಹೊಂದಿದ್ದಾನೆ.

ಕಂಜನ್: ದುಬಾರೆ ಶಿಬಿರದ ಕಂಜನ್‌ಗೆ ಈಗ 25 ವರ್ಷ. ಕಂಜನ್‌ ಕಳೆದ ವರ್ಷ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ. ಇದೀಗ ಎರಡನೇ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿದ್ದಾನೆ. ಈತ 2.62 ಎತ್ತರ, 3700 ರಿಂದ 3900 ಕೆ.ಜಿ.ತೂಕ ಹೊಂದಿದ್ದಾನೆ.

ದಸರಾ ಆನೆಗಳು
ದಸರಾ ಆನೆಗಳು (ETV Bharat)

ಲಕ್ಷ್ಮೀ: ದೊಡ್ಡ ಹರವೆ ಶಿಬಿರದ ಲಕ್ಷ್ಮೀಗೆ ಈಗ 53 ವರ್ಷ. ಲಕ್ಷ್ಮೀ 2.52 ಎತ್ತರ, 3000 ರಿಂದ 3200 ಕೆ.ಜಿ.ತೂಕ ಹೊಂದಿದ್ದಾಳೆ. ಅನೇಕ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಅನುಭವ ಲಕ್ಷ್ಮೀಗೆ ಇದೆ.

ರೋಹಿತ್: ರಾಮಪುರ ಶಿಬಿರದ 22 ವರ್ಷ ರೋಹಿತ್ ಆನೆ ಈ ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿರುವ ಅತೀ ಚಿಕ್ಕ ವಯಸ್ಸಿನ ಆನೆಯಾಗಿದೆ. ಈತ 2.70 ಮೀ ಎತ್ತರ, ಸುಮಾರು 2900 ರಿಂದ 3000 ತೂಕ ಹೊಂದಿದ್ದಾನೆ. ರೋಹಿತ್​ ಎರಡನೇ ಬಾರಿಗೆ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿದ್ದಾನೆ.

ಹಿರಣ್ಯಾ: ರಾಮಪುರ ಶಿಬಿರದ ಹೆಣ್ಣಾನೆ ಹಿರಣ್ಯಾಗೆ 47 ವರ್ಷ. ಹಿರಣ್ಯಾ 2.50 ಮೀ. ಎತ್ತರ, ಸುಮಾರು 3000-3200 ಕೆ.ಜಿ.ತೂಕ ಹೊಂದಿದೆ. ಈ ಆನೆ ಎಡರನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದೆ.

ದಸರಾ ಆನೆಗಳು
ದಸರಾ ಆನೆಗಳು (ETV Bharat)

ಪ್ರಶಾಂತ: ದುಬಾರೆ ಶಿಬಿರದ ಪ್ರಶಾಂತ ಆನೆಗೆ 51 ವರ್ಷ. ಈತ 3 ಮೀ. ಎತ್ತರ, ಸುಮಾರು 4000 ರಿಂದ 4200 ಕೆ.ಜಿ.ತೂಕ ಹೊಂದಿದ್ದಾನೆ. ಪ್ರಶಾಂತ ಅನೇಕ ಬಾರಿ ಜಂಬೂ ಸವಾರಿಯಲ್ಲಿ ಭಾಗಹಿಸಿದ್ದಾನೆ.

ಸುಗ್ರೀವ: ದುಬಾರೆ ಶಿಬಿರದ ಸುಗ್ರೀವ ಆನೆಗೆ 42 ವರ್ಷ. ಈತ 2.77 ಮೀ. ಎತ್ತರ, ಸುಮಾರು 4000 ರಿಂದ 4100 ಕೆ.ಜಿ.ತೂಕ ಹೊಂದಿದ್ದಾನೆ.

ವರಲಕ್ಷ್ಮೀ: ಭೀಮನಕಟ್ಟೆ ಶಿಬಿರದ ಹೆಣ್ಣಾನೆಯಾದ ವರಲಕ್ಷ್ಮೀಗೆ ಈಗ 68 ವರ್ಷ. ಈ ಆನೆ 2.36 ಎತ್ತರ, ಸುಮಾರು 3300 ರಿಂದ 3500 ಕೆ.ಜಿ.ತೂಕ ಹೊಂದಿದೆ. ವರಲಕ್ಷ್ಮೀ ದಸರಾದ ಕುಮ್ಕಿ ಆನೆಯಾಗಿದೆ.

ದಸರಾ ಆನೆಗಳು
ದಸರಾ ಆನೆಗಳು (ETV Bharat)

ಏಕಲವ್ಯ: ಮತ್ತಿಗೋಡು ಶಿಬಿರದ ಏಕಲವ್ಯ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾನೆ. ಏಕಲವ್ಯನಿಗೆ 39 ವರ್ಷ. ಈ ಆನೆ ಸುಮಾರು 4,150 ಕೆ.ಜಿ. ತೂಕ, 2.83 ಮೀಟರ್ ಎತ್ತರ, 3.70 ಮೀಟರ್ ಉದ್ದವಿದೆ.

ಈ ಎಲ್ಲಾ ಆನೆಗಳು ಸುಮಾರು 50 ದಿನಗಳ ಕಾಲ ಅರಮನೆಯಲ್ಲಿ ವಾಸ್ತವ್ಯ ಹೊಡಲಿದ್ದು, ದಸರಾ ತಾಲೀಮು ನಡೆಸಲಿವೆ.

ಇದನ್ನೂ ಓದಿ: ಮೈಸೂರು ದಸರಾ 2024 : ನಾಳೆಯಿಂದ ಗಜಪಯಣ, ಮೊದಲ ಬಾರಿಗೆ ಏಕಲವ್ಯ ಭಾಗಿ - Mysuru Dussehra 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.