ETV Bharat / state

ಭವಾನಿ ರೇವಣ್ಣಗೆ ಬಂಧನ ಭೀತಿ: ಎಸ್ಐಟಿಯಿಂದ ಮುಂದುವರಿದ ಶೋಧ - Bhavani Revanna - BHAVANI REVANNA

ಎಸ್ಐಟಿ ವಿಚಾರಣೆಗೆ ಹಾಜರಾಗದೇ ಉಳಿದಿರುವ ಭವಾನಿ ರೇವಣ್ಣ ವಿರುದ್ಧ ಕ್ರಮಕ್ಕೆ ಎಸ್ಐಟಿ ಮುಂದಾಗಿದೆ.

Bhavani Revanna
ಭವಾನಿ ರೇವಣ್ಣ (ETV Bharat)
author img

By ETV Bharat Karnataka Team

Published : Jun 2, 2024, 11:51 AM IST

ಬೆಂಗಳೂರು: ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಸ್ಐಟಿ ವಿಚಾರಣೆಗೆ ಹಾಜರಾಗದೇ ಉಳಿದಿರುವ ಭವಾನಿ ರೇವಣ್ಣ ಅವರ ನಡೆ ಕುತೂಹಲ ಮೂಡಿಸಿದೆ. ಅತ್ತ ಹಾಸನದಲ್ಲೂ ಇಲ್ಲ, ಇತ್ತ ಬೆಂಗಳೂರಿನಲ್ಲೂ ಇರದ ಭವಾನಿ ರೇವಣ್ಣ ಎಲ್ಲಿದ್ದಾರೆ? ಯಾರ ಆಶ್ರಯದಲ್ಲಿದ್ದಾರೆ? ಎಂಬುದರ ಕುರಿತು ಎಸ್ಐಟಿ ಅಧಿಕಾರಿಗಳ ತಂಡ ಶೋಧ ಆರಂಭಿಸಿದೆ.

ಮತ್ತೊಂದೆಡೆ, ಯಾರ ಸಂಪರ್ಕಕ್ಕೂ ಸಿಗದೆ ಉಳಿದಿರುವ ಭವಾನಿ ರೇವಣ್ಣ ಹೈಕೋರ್ಟ್ ಜನಪ್ರತಿನಿಧಿಗಳ ಪೀಠದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದ್ದು, ಅವರ ವಿರುದ್ಧ 'ತನಿಖೆಗೆ ಅಸಹಕಾರ'ದ ಅಸ್ತ್ರ ಬಳಸಲು ಎಸ್ಐಟಿ ಸಿದ್ಧತೆ ಮಾಡಿಕೊಂಡಿದೆ.

ನೋಟಿಸ್ ಮೂಲಕ ಸೂಚಿಸಿ ಮನೆಗೆ ತೆರಳಿದ್ದ ಎಸ್ಐಟಿ ಅಧಿಕಾರಿಗಳು ಸುಮಾರು ಏಳು ಗಂಟೆಗಳ ಕಾಲ ಕಾದರೂ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ ಎಂಬ ಅಂಶವನ್ನು ನ್ಯಾಯಾಲಯದ ಮುಂದಿರಿಸಲು ಎಸ್ಐಟಿ ಸಿದ್ಧತೆ ಮಾಡಿಕೊಂಡಿದೆ. ಮೇ 2ರಂದು ಕೆ.ಆರ್. ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮೇ 15ರಂದು ಭವಾನಿ ರೇವಣ್ಣ ಅವರಿಗೆ ಎಸ್ಐಟಿ ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಯಾಗಿ 'ಪ್ರಕರಣದಲ್ಲಿ ತನಿಖೆಗೆ ಅಗತ್ಯವಿದ್ದರೆ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ತಾವು ಇರುವುದಾಗಿ' ಪತ್ರದ ಮುಖೇನ ತಿಳಿಸಿದ್ದ ಭವಾನಿ ರೇವಣ್ಣ ನಂತರ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.

ಈ ನಡುವೆ ಜೂನ್ 1ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗಿನ ಅವಧಿಯಲ್ಲಿ ಹಾಸನದ ಹೊಳೆನರಸೀಪುರದಲ್ಲಿರುವ ಚೆನ್ನಾಂಬಿಕ ನಿವಾಸದಲ್ಲಿ ಹಾಜರಿರುವಂತೆ ಎಸ್ಐಟಿ ಅಧಿಕಾರಿಗಳು ಸೂಚಿಸಿದ್ದರು. ಆದರೆ ಎಸ್ಐಟಿ ಅಧಿಕಾರಿಗಳು ಹೋಗಿ ಏಳು ಗಂಟೆಗಳ ಕಾಲ ಕಾದರೂ ಭವಾನಿ ರೇವಣ್ಣ ಮಾತ್ರ ಅಜ್ಞಾತವಾಗಿಯೇ ಉಳಿದಿದ್ದರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕ್ಷಮೆಗೆ ಅರ್ಹನಲ್ಲ, ಕ್ಷಮಿಸುವ ಪ್ರಶ್ನೆಯೇ ಇಲ್ಲ: ಪ್ರಲ್ಹಾದ್ ಜೋಶಿ - Pralhad Joshi

ಸುಮಾರು ಏಳು ಗಂಟೆಗಳ ಕಾಲ ಕಾದು ವಾಪಾಸಾಗಿರುವುದರ ಕುರಿತು ವರದಿ ಸಿದ್ಧಪಡಿಸಿಕೊಂಡಿರುವ ಎಸ್ಐಟಿ, ಭವಾನಿ ರೇವಣ್ಣ ತನಿಖೆಗೆ ಅಸಹಕಾರ ತೋರಿದ್ದಾರೆ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಮೂಲಕ ಜಾಮೀನು ನೀಡದಂತೆ ಕೋರಲು ಸಿದ್ಧತೆ ಮಾಡಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.