ETV Bharat / state

ನಿಂತಿದ್ದ ಬೈಕಿಗೆ ಗೂಡ್ಸ್ ವಾಹನ ಡಿಕ್ಕಿ: ಇಬ್ಬರ ಸಾವು, ಓರ್ವನಿಗೆ ಗಾಯ - Road Accident - ROAD ACCIDENT

ರಸ್ತೆ ಬದಿ ನಿಂತಿದ್ದ ಬೈಕ್​ಗೆ ಗೂಡ್ಸ್​ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಿಂತಿದ್ದ ಬೈಕಿಗೆ ಗೂಡ್ಸ್ ವಾಹನ ಡಿಕ್ಕಿ: ಇಬ್ಬರ ದುರ್ಮರಣ ಓರ್ವನಿಗೆ ಗಾಯ

author img

By ETV Bharat Karnataka Team

Published : Apr 10, 2024, 9:20 AM IST

Updated : Apr 10, 2024, 3:48 PM IST

ಉತ್ತರ ವಿಭಾಗದ ಸಂಚಾರಿ ಡಿಸಿಪಿ ಸಿರಿಗೌರಿ

ಬೆಂಗಳೂರು: ನಿಂತಿದ್ದ ಬೈಕ್​​ಗೆ ಗೂಡ್ಸ್ ವಾಹನ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ತಡರಾತ್ರಿ ರಾಜಗೋಪಾಲನಗರದ ಹೆಗ್ಗನಹಳ್ಳಿ ಬಳಿ ನಡೆದಿದೆ. ಮೊಹಮ್ಮದ್ ಫಾರೂಕ್ ಹಾಗೂ ಅಬ್ರಾರ್ ಅಹಮದ್ ಮೃತ ದುರ್ದೈವಿಗಳು. ಮೂವರು ಯುವಕರು ರಾತ್ರಿ 11 ಗಂಟೆ ಸುಮಾರಿಗೆ‌ ಹೆಗ್ಗನಹಳ್ಳಿ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದಿದ್ದ ಟಾಟಾ ಏಸ್ ವಾಹನ ನಿಯಂತ್ರಣ ತಪ್ಪಿ ಬೈಕಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೊಹಮ್ಮದ್ ಸಿದ್ದಿಕ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಟಾಟಾ ಏಸ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೀಣ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಲಿಸುತ್ತಿದ್ದಾಗ ಗೂಡ್ಸ್ ವಾಹನದ ಮುಂದಿನ ಟೈರ್ ಸ್ಫೋಟಗೊಂಡ ಪರಿಣಾಮ ಅಪಘಾತ ಸಂಭವಿಸಿರುವ ಸಾಧ್ಯತೆಯಿದ್ದು, ಆ ಕುರಿತು ತನಿಖೆ ಮಾಡಲಾಗುತ್ತಿದೆ. ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿರಿಗೌರಿ - ಉತ್ತರ ವಿಭಾಗದ ಸಂಚಾರಿ ಡಿಸಿಪಿ

ಇದನ್ನೂ ಓದಿ: ಶಿರಸಿ: ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ರಸ್ತೆ ಕಾರ್ಮಿಕರ ಮೇಲೆ ಹರಿದ ಕಾರು - five injured in car accident

Last Updated : Apr 10, 2024, 3:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.