ETV Bharat / state

ಇನ್ಮುಂದೆ ಬೆಂಗಳೂರನ್ನು 'ಟ್ರಾಫಿಕ್ ಸಿಟಿ' ಎನ್ನಬೇಡಿ; ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಕೈಗೊಂಡ ಕ್ರಮಗಳಿವು - ಟ್ರಾಫಿಕ್ ಜಾಮ್

ಅತೀ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುವ ವಿಶ್ವದ ನಗರಗಳ ಪೈಕಿ ಬೆಂಗಳೂರು ನಗರ 6ನೇ ಸ್ಥಾನದಲ್ಲಿದೆ. ಈ ಹಿಂದೆ ನಗರ 2ನೇ ಸ್ಥಾನದಲ್ಲಿತ್ತು. ಇದು ಸಂಚಾರಿ ಪೊಲೀಸರು ಕೈಗೊಂಡ ಕ್ರಮಗಳ ಪರಿಣಾಮ. ಆದರೆ ಮೊದಲ ಮೂರು ಸ್ಥಾನಗಳಲ್ಲಿರುವ ಜಗತ್ತಿನ ನಗರಗಳು ಯಾವುವು ಗೊತ್ತೇ?.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
author img

By ETV Bharat Karnataka Team

Published : Feb 6, 2024, 3:48 PM IST

Updated : Feb 6, 2024, 6:40 PM IST

ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿಕೆ

ಬೆಂಗಳೂರು: ವಿಪರೀತ ಸಂಚಾರ ದಟ್ಟಣೆ ಉಂಟಾಗುವ ವಿಶ್ವದ ಪ್ರಮುಖ ನಗರಗಳ ಪೈಕಿ ಸಿಲಿಕಾನ್​ ಸಿಟಿ ಖ್ಯಾತಿಯ ಬೆಂಗಳೂರಿಗೆ ಆರನೇ ಸ್ಥಾನ ಸಿಕ್ಕಿದೆ. ನಗರ ಸಂಚಾರ ಪೊಲೀಸರು ಕೈಗೊಂಡ ಕ್ರಮಗಳಿಂದ ಇದು ಎರಡನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಸುಧಾರಿಸಿದೆ. ರಸ್ತೆ ಸಂಚಾರ ದಟ್ಟಣೆ ಬಗ್ಗೆ ಅಧ್ಯಯನ ನಡೆಸುವ ಟಾಮ್‌ಟಾಮ್‌ ಸಂಸ್ಥೆಯ 2023ರ ವರದಿಯಲ್ಲಿ ಈ ಮಾಹಿತಿ ಲಭ್ಯ. ಮೊದಲ ಸ್ಥಾನದಲ್ಲಿ ಲಂಡನ್, ಎರಡು ಹಾಗೂ ಮೂರನೇ ಸ್ಥಾನದಲ್ಲಿ ಕ್ರಮವಾಗಿ ಐರ್ಲೆಂಡ್ ರಾಜಧಾನಿ ಡಬ್ಲಿನ್ ಮತ್ತು ಕೆನಡಾದ ಟೊರಾಂಟೋ ನಗರವಿದೆ. ಪುಣೆ‌ ಏಳನೇ ಸ್ಥಾನದಲ್ಲಿದೆ.

bengaluru-ranks-6th-in-the-world-in-traffic-jam
ಇನ್ಮುಂದೆ ಬೆಂಗಳೂರನ್ನು 'ಟ್ರಾಫಿಕ್ ಸಿಟಿ' ಎನ್ನಬೇಡಿ

ಬೆಂಗಳೂರಿನಲ್ಲಿ ವಾಹನಗಳ ವೇಗಮಿತಿ 2022ರಲ್ಲಿ ಪ್ರತಿ ಗಂಟೆಗೆ 14 ಕಿ.ಮೀ ಇತ್ತು. ಇದು 2023ರಲ್ಲಿ 18 ಕಿ.ಮೀಗೆ ಏರಿಕೆಯಾಗಿದೆ. 2022ರಲ್ಲಿ 10 ಕಿ.ಮೀ ಪ್ರಯಾಣಕ್ಕೆ 28.11 ನಿಮಿಷ ಬೇಕಾಗುತ್ತಿತ್ತು. ಅದು 2023ರಲ್ಲಿ 27 ನಿಮಿಷ 11 ಸೆಕೆಂಡ್​ಗೆ ತಗ್ಗಿದ್ದು, 1 ನಿಮಿಷ ಇಳಿಕೆಯಾಗಿದೆ. ವಿಶ್ವದ 10 ನಗರಗಳ ಪೈಕಿ ಬೆಂಗಳೂರು ನಗರದಲ್ಲಿ ಮಾತ್ರವೇ ಪ್ರಯಾಣ ಸಮಯ ಒಂದು ನಿಮಿಷ ಕಡಿಮೆ ಎಂದು ವರದಿ ತಿಳಿಸಿದೆ.

ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಈ ಕುರಿತು ಮಾತನಾಡಿ, "ಸಂಚಾರ ಪೊಲೀಸರು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವುದರಿಂದ ದಟ್ಟಣೆ ಕಡಿಮೆಯಾಗುತ್ತಿದೆ. ಹೆಬ್ಬಾಳ, ಟಿನ್ ಫ್ಯಾಕ್ಟರಿ, ಗೊರಗುಂಟೆಪಾಳ್ಯ ಹಾಗೂ ಸಾರಕ್ಕಿ ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಾಹನ ದಟ್ಟಣೆಯಾಗುತ್ತಿದ್ದ ರಸ್ತೆ ವಿಭಜಕಗಳನ್ನು ಮುಚ್ಚಿಸಲಾಗಿದೆ. ಅನಗತ್ಯ ಬಸ್ ನಿಲ್ದಾಣಗಳ ತೆರವು, ಅವೈಜ್ಞಾನಿಕವಾಗಿರುವ ಯೂಟರ್ನ್ ರಸ್ತೆ ಮುಚ್ಚಿರುವುದು ಹಾಗೂ ಫ್ರೀ ಸಿಗ್ನಲ್‌ ಒತ್ತು ನೀಡಿದ್ದರಿಂದ ಸರಾಗ ವಾಹನ ಸಂಚಾರಕ್ಕೆ ಅನುವಾಗಿದೆ" ಎಂದರು.

"ನಮ್ಮ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಅಗಲೀಕರಣ ಹಾಗೂ ಉನ್ನತೀಕರಣಗೊಳಿಸಲು ಬಿಬಿಎಂಪಿ ಜೊತೆ ಸಮನ್ವಯತೆ ಸಾಧಿಸಿ ಅಭಿವೃದ್ಧಿಪಡಿಸಲಾಗಿದೆ. ಪೀಕ್​ ಅವರ್‌ನಲ್ಲಿ ಭಾರೀ ಗಾತ್ರದ ವಾಹನ ಸಂಚಾರ ನಿಷೇಧ ಹಾಗೂ ಹೈಟೆಕ್ ತಂತ್ರಜ್ಞಾನ ಬಳಕೆ ಸೇರಿದಂತೆ ಮೇಲಿನ‌ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಅನುಷ್ಠಾನ ಮಾಡಿದ್ದರಿಂದಲೇ ಸಂಚಾರ ದಟ್ಟಣೆ ಕಡಿಮೆಯಾಗಿ, ಪ್ರಯಾಣದ ಸಮಯ ಕೊಂಚ ಇಳಿಕೆಯಾಗಿದೆ" ಎಂದು ಅವರು ಹೇಳಿದರು.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

"ಸಂಚಾರ ದಟ್ಟಣೆಯನ್ನು ಇನ್ನಷ್ಟು ತಗ್ಗಿಸಲು ಭವಿಷ್ಯದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸರು ಆತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಇದಕ್ಕಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎಐ) ಆಧಾರಿತ ಟ್ರಾಫಿಕ್ ಸಿಗ್ನಲ್ ಬಳಸಲು ಮುಂದಾಗಿದ್ದಾರೆ.‌ ನಗರದ ಎಲ್ಲೆಡೆ ಕ್ಯಾಮರಾ ಅಳವಡಿಕೆಯಾದರೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ (ಎಐ) ನೆರವಿನಿಂದ ಸಂಚಾರ ದಟ್ಟಣೆಯಾಗುವುದನ್ನು ಗುರುತಿಸಬಹುದು"ಎಂದು ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟ್ರಾಫಿಕ್ ನಿಯಂತ್ರಣ: ಸಂಚಾರ ಪೊಲೀಸರು ಮಾಡಿದ್ದೇನು?: ಅತ್ಯಾಧುನಿಕ ಕ್ಯಾಮರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘಿಸುವ ಸವಾರರ ವಿರುದ್ಧ ಹೆಚ್ಚೆಚ್ಚು ಪ್ರಕರಣಗಳನ್ನು ದಾಖಲಿಸುವುದು. ಸುಗಮ ಸಂಚಾರಕ್ಕಾಗಿ ದಟ್ಟಣೆ ಅವಧಿಯಲ್ಲಿ (ಪೀಕ್ ಅವರ್ಸ್) ಅಧಿಕ ಟ್ರಾಫಿಕ್ ಪೊಲೀಸರನ್ನು ನಿಯೋಜಿಸುವುದು. ಪೀಕ್ ಅವರ್ಸ್‌ನಲ್ಲಿ ನಗರಕ್ಕೆ ಬರುತ್ತಿದ್ದ ಭಾರೀ ಗಾತ್ರದ ವಾಹನಗಳ ನಿಷೇಧ. ಹಾರ್ಟ್‌ ಆಫ್ ಟ್ರಾಫಿಕ್ ಎಂದ ಕರೆಯಲಾಗುವ ಪ್ರಮುಖ ಜಂಕ್ಷನ್​ಗಳ ಅಭಿವೃದ್ಧಿ. ಅನಗತ್ಯ ಜಾಗದಲ್ಲಿದ್ದ ರಸ್ತೆ ವಿಭಜಕ ಮುಚ್ಚಿರುವುದು, ಟ್ರಾಫಿಕ್‌ ಹೆಚ್ಚಳಕ್ಕೆ ಕಾರಣವಾಗುತ್ತಿದ್ದ ಯೂಟರ್ನ್‌ಗಳನ್ನು ಕ್ಲೋಸ್ ಮಾಡಿರುವುದು, ಅತ್ಯಾಧುನಿಕ ಕ್ಯಾಮರಾಗಳು ಸೇರಿದಂತೆ ಸಮಗ್ರ ತಂತ್ರಜ್ಞಾನ ಬಳಕೆಯಂಥ ಕ್ರಮಗಳನ್ನು ಸಂಚಾರ ಪೊಲೀಸರು ಕೈಗೊಂಡಿದ್ದಾರೆ.

ಇದನ್ನೂ ಓದಿ: ಲೈಸನ್ಸ್‌ ಪಡೆಯದೆ ಶಾಲೆಗೆ ಬೈಕ್‌ ಸವಾರಿ: 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೋಷಕರಿಗೆ ದಂಡ

Last Updated : Feb 6, 2024, 6:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.