ETV Bharat / state

ಸ್ಫೋಟದ ಬಳಿಕ ನಾಳೆಯಿಂದ 'ದಿ ರಾಮೇಶ್ವರಂ ಕೆಫೆ' ಗ್ರಾಹಕರಿಗೆ ಮುಕ್ತ - Rameswaram Cafe Blast

ಬಾಂಬ್‌ ಸ್ಫೋಟದ ಬಳಿಕ ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ನಾಳೆಯಿಂದ ಮತ್ತೆ ಗ್ರಾಹಕರಿಗೆ ತೆರೆದುಕೊಳ್ಳಲಿದೆ.

Rameswaram Cafe  Bengaluru Bomb blast case
ಸ್ಫೋಟದ ಬಳಿಕ ಮೊದಲ ಬಾರಿಗೆ ದಿ ರಾಮೇಶ್ವರಂ ಕೆಫೆ ಗ್ರಾಹಕರಿಗೆ ಮುಕ್ತ
author img

By ETV Bharat Karnataka Team

Published : Mar 8, 2024, 1:02 PM IST

ಬೆಂಗಳೂರು: ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಮೊದಲ ಬಾರಿಗೆ ಗ್ರಾಹಕರಿಗೆ ತೆರೆದುಕೊಳ್ಳಲು ನಗರದ ಐಟಿಪಿಎಲ್ ಮುಖ್ಯರಸ್ತೆಯಲ್ಲಿರುವ 'ದಿ ರಾಮೇಶ್ವರಂ ಕೆಫೆ' ಸಜ್ಜಾಗಿದೆ. ಒಂದು ವಾರದ ಬಳಿಕ ಕೆಫೆಯಲ್ಲಿ ದೈನಂದಿನ ವಹಿವಾಟು ಆರಂಭಿಸಲು ಸಕಲ ಸಿದ್ಧತೆ ನಡೆದಿದೆ. ಈ ನಿಟ್ಟಿನಲ್ಲಿ ಇಂದು (ಶುಕ್ರವಾರ) ಪೂಜೆ, ಹೋಮ ಹವನಾದಿಗಳು ನಿಗದಿಯಾಗಿವೆ.

ಕೆಫೆಯಲ್ಲಿ ಹಾನಿಗೊಳಗಾಗಿದ್ದ ಸ್ಥಳವನ್ನು ಸಂಪೂರ್ಣವಾಗಿ ಮರುನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಗ್ರಾಹಕರು ಪ್ರವೇಶಿಸುವ ಕಡೆಗಳಲ್ಲೆಲ್ಲಾ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಪ್ರತಿಯೊಬ್ಬ ಗ್ರಾಹಕರನ್ನೂ ಮೆಟಲ್ ಡಿಟೆಕ್ಟರ್ ಹಾಗೂ ಹ್ಯಾಂಡ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದ ಬಳಿಕವೇ ಪ್ರವೇಶಕ್ಕೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ.

ಸದ್ಯ ಕೆಫೆ ಸುತ್ತಲಿನ ರಸ್ತೆಗಳಲ್ಲಿ ಅಳವಡಿಸಿರುವ ಬ್ಯಾರಿಕೇಡ್​ಗಳನ್ನು ಪೊಲೀಸರು ತೆರವುಗೊಳಿಸದ ಕಾರಣ ಪೊಲೀಸ್ ಭದ್ರತೆಯಲ್ಲಿಯೇ ಇಂದು ಮುಂಜಾನೆಯಿಂದ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಕೆಫೆಯನ್ನು ಸಂಪೂರ್ಣವಾಗಿ ತಳಿರು-ತೋರಣಗಳಿಂದ ಅಲಂಕರಿಸಿ ಸಿಂಗರಿಸಲಾಗಿದೆ. ನಾಳೆ ಮುಂಜಾನೆ 6.30ರಿಂದ ಎಂದಿನಂತೆ ಕೆಫೆ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಕೆಫೆಯ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

Rameswaram Cafe  Bengaluru Bomb blast case
ಸ್ಫೋಟದ ಬಳಿಕ ಮೊದಲ ಬಾರಿಗೆ ದಿ ರಾಮೇಶ್ವರಂ ಕೆಫೆ ಗ್ರಾಹಕರಿಗೆ ಮುಕ್ತ: ನಾಳೆ ಮುಂಜಾನೆಯಿಂದ ಆರಂಭ

ಇಂದು ಸಾಂಕೇತಿಕ ಚಾಲನೆ ನೀಡಲಿರುವ ಸಿಎಂ: 'ದಿ ರಾಮೇಶ್ವರಂ ಕೆಫೆ'ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಶುಕ್ರವಾರ) ಸಂಜೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಗೃಹ ಸಚಿವ ಜಿ.ಪರಮೇಶ್ವರ ಹಾಗೂ ಅರವಿಂದ ಲಿಂಬಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕೆಫೆಯ ಸಹ ಸಂಸ್ಥಾಪಕರಾದ ದಿವ್ಯಾ ರಾಘವೇಂದ್ರ ಹಾಗೂ ರಾಘವೇಂದ್ರ ರಾವ್ ತಿಳಿಸಿದ್ದಾರೆ.

ಸ್ಫೋಟ ಪ್ರಕರಣ: ಮಾರ್ಚ್​ 1ರಂದು (ಶುಕ್ರವಾರ) ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಅಂದು ಬೆಳಿಗ್ಗೆ 11:30ರ ಸುಮಾರಿಗೆ ಕೆಫೆಗೆ ಬಂದಿದ್ದ ಶಂಕಿತ ಆರೋಪಿ, ರವೆ ಇಡ್ಲಿ ಆರ್ಡರ್ ಮಾಡಿ ತಿಂದಿದ್ದನು. ನಂತರ ಕೆಲವೇ ನಿಮಿಷಗಳ ಅಂತರದಲ್ಲಿ ಸ್ಫೋಟಕವಿದ್ದ ಬ್ಯಾಗ್ ಅ​ನ್ನು ವಾಶ್ ಬೇಸಿನ್ ಬಳಿ ಇಟ್ಟು ಅಲ್ಲಿಂದ ತೆರಳಿದ್ದ. ಮಧ್ಯಾಹ್ನ 1 ಗಂಟೆಯ ವೇಳೆಯಲ್ಲಿ ಸ್ಫೋಟ ಸಂಭವಿಸಿತ್ತು. ಪ್ರಕರಣದ ಕುರಿತು ಎನ್ಐಎ ಕೈಗೆತ್ತಿಕೊಂಡಿದೆ.

ಇದನ್ನೂ ಓದಿ: ಬೆಂಗಳೂರು ಕೆಫೆ ಸ್ಫೋಟ ಪ್ರಕರಣ; ಶಂಕಿತ ಉಗ್ರನ ವಶಕ್ಕೆ ಪಡೆದ ಎನ್ಐಎ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.