ETV Bharat / state

ಬೆಂಗಳೂರು: ಆರ್‌ಬಿಐಗೆ ನಕಲಿ ನೋಟು ತಂದು ಅಸಲಿ ನೋಟು ಪಡೆಯಲು ಯತ್ನ: ಐವರ ಬಂಧನ

ನಕಲಿ ನೋಟುಗಳನ್ನು ಮುದ್ರಿಸಿಕೊಂಡು ಬ್ಯಾಂಕ್​ನಲ್ಲಿ ಬದಲಾವಣೆಗೆ ಯತ್ನಿಸಿದ ಆರೋಪದ ಮೇಲೆ ಐವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

fake currency
ನಕಲಿ ನೋಟುಗಳು (ETV Bharat)
author img

By ETV Bharat Karnataka Team

Published : Oct 11, 2024, 11:33 AM IST

ಬೆಂಗಳೂರು: 2 ಸಾವಿರ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ, ಭಾರತೀಯ ರಿಸರ್ವ್ ಬ್ಯಾಂಕ್​ನಲ್ಲಿ ಬದಲಾವಣೆಗೆ ಯತ್ನಿಸಿದ ಆರೋಪದ ಮೇಲೆ ಐವರು ಹಲಸೂರು ಗೇಟ್‌ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಿರಿಗುಪ್ಪ ತಾಲೂಕಿನ ಸಿರಿಗೆರೆ ನಿವಾಸಿ ಎ.ಕೆ.ಅಫ್ಜಲ್‌ ಹುಸೇನ್‌ (29), ಪಾಂಡಿಚೇರಿ ಮೂಲದ ಪ್ರಸೀತ್‌ (47), ಕೇರಳ ಮೂಲದ ಮೊಹಮ್ಮದ್ ಅಫ್ನಾಸ್‌ (34), ನೂರುದ್ದೀನ್‌ ಅಲಿಯಾಸ್‌ ಅನ್ವರ್‌ (34) ಹಾಗೂ ಪ್ರಿಯೇಶ್‌ (34) ಬಂಧಿತರು. ಆರೋಪಿಗಳಿಂದ 52.40 ಲಕ್ಷ ಮೌಲ್ಯದ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟುಗಳು ಹಾಗೂ ಎರಡು ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

ನಕಲಿ ನೋಟುಗಳು (ETV Bharat)

ಬಳ್ಳಾರಿ ಮೂಲದ ಆರೋಪಿ ಅಫ್ಜಲ್‌ ಹುಸೇನ್‌ ಸೆ.9ರಂದು ನೃಪತುಂಗ ರಸ್ತೆಯ ಭಾರತೀಯ ರಿಸರ್ವ್​ ಬ್ಯಾಂಕ್‌ಗೆ ಬಂದಿದ್ದು, 2 ಸಾವಿರ ರೂ. ಮುಖಬೆಲೆಯ 24.68 ಲಕ್ಷ ರೂ. ಹಣವನ್ನು 500 ರೂ. ಮುಖಬೆಲೆಯ ನೋಟುಗಳಿಗೆ ಬದಲಾವಣೆ ಮಾಡಲು ಮುಂದಾಗಿದ್ದ. ಈ ವೇಳೆ, ಆರ್‌ಬಿಐ ಅಧಿಕಾರಿಗಳು ಈ 2 ಸಾವಿರ ರೂ. ಮುಖ ಬೆಲೆಯ ನೋಟುಗಳ ನೈಜತೆ ಪರೀಕ್ಷಿಸಿದಾಗ ಅವು ನಕಲಿ ನೋಟುಗಳು ಎಂಬುದು ಬೆಳಕಿಗೆ ಬಂದಿದೆ.

ಈ ಸಂಬಂಧ ಆರ್‌ಬಿಐ ಬ್ಯಾಂಕಿನ ಎಜಿಎಂ ಭೀಮ್‌ ಚೌಧರಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಅಫ್ಜಲ್ ಹುಸೇನ್‌ನನ್ನು ಬಂಧಿಸಿ ವಿಚಾರಿಸಿದಾಗ ನಕಲಿ ನೋಟು ದಂಧೆ ಬಯಲಾಗಿದೆ. ಈತ ನೀಡಿದ ಮಾಹಿತಿ ಮೇರೆಗೆ ಉಳಿದ ನಾಲ್ವರು ಆರೋಪಿಗಳನ್ನು ಕೇರಳದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, 27.72 ಲಕ್ಷ ರೂ. ಮೌಲ್ಯದ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಅಡವಿಟ್ಟ ಚಿನ್ನಾಭರಣ ಬಿಡಿಸಿಕೊಡಿ ಎಂದ ಪತ್ನಿಗೆ ಬೆಂಕಿ ಇಟ್ಟ ಗಂಡ: ಪತಿ, ಅತ್ತೆ, ಮಾವನಿಗೆ ಜೀವಾವಧಿ ಶಿಕ್ಷೆ

ಗ್ರಾನೈಟ್‌ ವ್ಯವಹಾರ: ಆರೋಪಿ ಅಫ್ಜಲ್‌ ಹುಸೇನ್‌ ಬಳ್ಳಾರಿಯಲ್ಲಿ ಗ್ರಾನೈಟ್‌ ವ್ಯವಹಾರ ನಡೆಸುತ್ತಿದ್ದಾನೆ. ಕೇರಳ ಮೂಲದ ಆರೋಪಿ ನೂರುದ್ದೀನ್‌ಗೆ ಗ್ರಾನೈಟ್‌ ವ್ಯವಹಾರ ಸಂಬಂಧ ಅಫ್ಜಲ್‌ ಹುಸೇನ್‌ಗೆ 25 ಲಕ್ಷ ರೂ. ನೀಡಬೇಕಿತ್ತು. ಈ ಹಣವನ್ನು ಕೊಡುವಂತೆ ಕೇಳಿದಾಗ, ತನ್ನ ಬಳಿ 500 ರೂ. ಮುಖಬೆಲೆಯ ನೋಟುಗಳು ಇಲ್ಲ. 2 ಸಾವಿರ ರೂ. ಮುಖಬೆಲೆಯ ನೋಟುಗಳಿವೆ. ಅವುಗಳನ್ನು 500 ರೂ. ಮುಖಬೆಲೆಯ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಿದ್ದ ಎಂದು‌ ಪೊಲೀಸರು ತಿಳಿಸಿದ್ದಾರೆ.

ಪ್ರಿಂಟಿಂಗ್ ಪ್ರೆಸ್‌ನಲ್ಲಿ ಖೋಟಾ ನೋಟು ಮುದ್ರಣ: ಕೇರಳದ ಕಾಸರಗೋಡು ಜಿಲ್ಲೆಯ ಚರ್ಕಳಾದಲ್ಲಿ ಆರೋಪಿ ಪ್ರಿಯೇಶ್‌ ಕಳೆದ 20 ವರ್ಷಗಳಿಂದ ಪ್ರಿಂಟಿಂಗ್‌ ಪ್ರೆಸ್‌ ನಡೆಸುತ್ತಿದ್ದಾನೆ. ಆರೋಪಿಯು ಕ್ಯಾಲಿಕಟ್‌ನಿಂದ ವಿಶೇಷ ಪೇಪರ್‌ ಹಾಗೂ ನೋಟು ತಯಾರಿಸುವ ಸಾಮಾಗ್ರಿಗಳನ್ನು ತಂದು ತನ್ನದೇ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಗಾಗಿ ಆರೋಪಿ ನೂರುದ್ದೀನ್‌ಗೆ ನೀಡಿದ್ದ. ಈ ನೂರುದ್ದೀನ್‌ ಇತರ ಆರೋಪಿಗಳ ಜತೆಗೆ ಸೇರಿಕೊಂಡು ಈ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಭೀಮಾ ನದಿಯಲ್ಲಿ ಬಾಲಕಿಯರಿಬ್ಬರು ಸಾವು; ಹೃದಯಾಘಾತದಿಂದ ವ್ಯಕ್ತಿ ಮೃತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.