ನೇರಳೆ ಮಾರ್ಗದ ಮೇಲೆ ಬಿದ್ದ ಮರ, ಈಗ ಸಂಚಾರಕ್ಕೆ ಮುಕ್ತ: ಮರ ತೆರವು ಯಶಸ್ವಿ ಎಂದ ಬಿಎಂಆರ್ಸಿಎಲ್ - METRO PURPLE LINE
ನೇರಳೆ ಮಾರ್ಗದಲ್ಲಿ ಉಂಟಾಗಿದ್ದ ಅಡಚಣೆ ಶಮನವಾಗಿದ್ದು, ಮರ ತೆರವು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಲಾಗಿದೆ. ಬೆಳಗ್ಗೆ 8.05ರಿಂದ ಈ ಮಾರ್ಗವೂ ಸಂಚಾರಕ್ಕೆ ಮುಕ್ತವಾಗಿದೆ
By ANI
Published : Oct 16, 2024, 10:01 AM IST
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಸಿಲಿಕಾನ್ ಸಿಟಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಈ ನಡುವೆ ಮರವೊಂದು ಉರುಳಿ ಬಿದ್ದ ಪರಿಣಾಮ ಮೆಟ್ರೋ ನೆರಳೆ ಮಾರ್ಗ ಸಂಚಾರದಲ್ಲಿ ವ್ಯತ್ಯಾಯ ಉಂಟಾಗಿತ್ತು. ತಕ್ಷಣಕ್ಕೆ ಕಾರ್ಯ ಪ್ರವೃತ್ತರಾದ ಸಿಬ್ಬಂದಿ ಇದರ ತೆರವು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದು,ಈಗ ಸಂಚಾರಕ್ಕೆ ಮುಕ್ತವಾಗಿದೆ.
ಬಿಎಂಆರ್ಸಿಎಲ್ ಮೊದಲ ಪೋಸ್ಟ್ನಲ್ಲಿ ಏನಿತ್ತು: ಈ ಕುರಿತು ಬಿಎಂಆರ್ಸಿಎಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನೆರಳೆ ಮಾರ್ಗದ ಜಳಿ ಮೇಲೆ ಮರ ಬಿದ್ದ ಪರಿಣಾಮ ಸಂಚಾರದಲ್ಲಿ ವ್ಯತ್ಯಾಯ ಉಂಟಾಗಿತ್ತು. ಇಂದು 6.15ಕ್ಕೆ ಮೆಟ್ರೋ ರೈಲುಗಳು ಕೇವಲ ಇಂದಿರಾನಗರ - ಚಲ್ಲಘಟ್ಟ ಮತ್ತು ಬೈಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ವರೆಗೆ ಸಾಗಲಿದೆ. ಎಸ್ವಿ ರೋಡ್ ಮತ್ತು ಇಂದಿರಾನಗರ ಸಂಪರ್ಕದ ಸಂಚಾರ ಇರುವುದಿಲ್ಲ. ಈ ಮಾರ್ಗದಲ್ಲಿ ಮರ ಬಿದ್ದ ಕಾರಣ ತಾತ್ಕಲಿಕ ಸಂಚಾರ ನಿಲ್ಲಿಸಲಾಗಿದ್ದು, ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಬಿಎಂಆರ್ಸಿಎಲ್ ಈ ಮೊದಲು ತಿಳಿಸಿತ್ತು.
ಸಂಚಾರಕ್ಕೆ ಮುಕ್ತ ಎಂದು 2ನೇ ಪೋಸ್ಟ್: ಇದಾದ ಎರಡು ಗಂಟೆ ಬಳಿಕ ಮತ್ತೊಂದು ಪೋಸ್ಟ್ ಮಾಡಿರುವ ಬಿಎಂಆರ್ಸಿಎಲ್, ನೇರಳೆ ಮಾರ್ಗದಲ್ಲಿ ಉಂಟಾಗಿದ್ದ ಅಡಚಣೆ ಶಮನವಾಗಿದ್ದು, ಮರ ತೆರವುಗೊಳಿಸಲಾಗಿದೆ. ಬೆಳಗ್ಗೆ 8.05ರಿಂದ ಈ ಮಾರ್ಗವೂ ಸಂಚಾರಕ್ಕೆ ಮುಕ್ತವಾಗಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಎಡೆಬಿಡದೆ ಸುರಿಯುತ್ತಿರುವ ಮಳೆ: ಬೆಂಗಳೂರಿನ ಎಲ್ಲಾ ಶಾಲೆಗಳಿಗೆ ಇಂದು ರಜೆ