ಬೆಳಗಾವಿ: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿ-ಸೂರತ್, ಬೆಳಗಾವಿ-ಅಜ್ಮೀರ್ ವಿಮಾನ ಸೇವೆ ಬಂದ್ ಆಗಲಿದ್ದು, ಜೂನ್ 14ರಿಂದ ಈ ಮಾರ್ಗದ ವಿಮಾನಗಳು ಹಾರಾಟ ನಡೆಸುವುದಿಲ್ಲ ಎಂದು ಸ್ಟಾರ್ ಏರ್ ಸಂಸ್ಥೆ ಮಾಹಿತಿ ನೀಡಿದೆ.
ಉಡಾನ್ ಯೋಜನೆಯಡಿ 2020ರ ಡಿಸೆಂಬರ್‌ನಲ್ಲಿ ಬೆಳಗಾವಿ-ಸೂರತ್, ಬೆಳಗಾವಿ-ಅಜ್ಮೀರ್ ವಿಮಾನ ಸೇವೆ ಆರಂಭಿಸಲಾಗಿತ್ತು. ನಾಲ್ಕು ವರ್ಷದ ಬಳಿಕ ವಿಮಾನಯಾನ ಸಂಸ್ಥೆ ಈ ಮಾರ್ಗದ ವಿಮಾನ ಹಾರಾಟ ರದ್ದುಗೊಳಿಸಿರುವುದು ವಿಮಾನ ಪ್ರಯಾಣಿಕರಿಗೆ ನಿರಾಸೆ ತಂದಿದೆ.
ಸ್ಟಾರ್ ಏರ್ ಸಂಸ್ಥೆ ವಿಮಾನ ಸೇವೆ ಸ್ಥಗಿತಗೊಳಿಸಲು ಕಾರಣ ತಿಳಿಸಿಲ್ಲ. ಆದರೆ ವಿಮಾನಗಳ ರೊಟೇಷನ್‌ಗಾಗಿ ಸೇವೆ ರದ್ದು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಬೆಳಗಾವಿಯಿಂದ ಈ ಎರಡೂ ನಗರಗಳ ವಿಮಾನ ಸೇವೆಯನ್ನು ಜೂನ್‌ನಲ್ಲಿ ರದ್ದುಪಡಿಸಲಾಗುತ್ತದೆ. ಈಗಾಗಲೇ ಈ ಕುರಿತು ಮಾಹಿತಿ ನೀಡಲಾಗಿದ್ದು, ಮುಂಗಡ ಟಿಕೆಟ್ ಬುಕ್ಕಿಂಗ್ ಸಹ ಬಂದ್ ಮಾಡಲಾಗಿದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಎದುರು ಶವವಿಟ್ಟು ವಿಧವೆ ಕುಟುಂಬ ಪ್ರತಿಭಟನೆ: ಕಾರಣ? - WIDOW FAMILY PROTEST