ETV Bharat / state

ಬೆಳಗಾವಿ: ಸ್ಥಳೀಯರಿಗೆ ಟಿಕೆಟ್​ ನೀಡುವಂತೆ ಬೆಂಗಳೂರಿಗೆ ಹೊರಟ ಜಿಲ್ಲಾ ಬಿಜೆಪಿ ನಾಯಕರು - Displeasure against Jagdish Shettar

ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್​ ಅನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತನಿಗೆ ನೀಡುವಂತೆ ಒತ್ತಾಯಿಸಿ ಜಿಲ್ಲೆಯ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ವರಿಷ್ಠರನ್ನು ಭೇಟಿ ಮಾಡಲು ಹೊರಟಿದ್ದಾರೆ.

ಬೆಂಗಳೂರಿಗೆ ಹೊರಟ ಬೆಳಗಾವಿ ಬಿಜೆಪಿ ನಾಯಕರು
ಬೆಂಗಳೂರಿಗೆ ಹೊರಟ ಬೆಳಗಾವಿ ಬಿಜೆಪಿ ನಾಯಕರು
author img

By ETV Bharat Karnataka Team

Published : Mar 19, 2024, 5:28 PM IST

Updated : Mar 19, 2024, 7:08 PM IST

ಬೆಳಗಾವಿ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್​ ತಪ್ಪಿದ್ದಕ್ಕೆ ಕಾಂಗ್ರೆಸ್​ಗೆ ಸೇರ್ಪಡೆಕೊಂಡು ಸ್ಪರ್ಧೆ ಮಾಡಿ ಸೋತ ಬಳಿಕ ಸ್ವಪಕ್ಷಕ್ಕೆ ಬಂದಿರುವ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್​ ನೀಡುತ್ತಿರುವುದಕ್ಕೆ ಜಿಲ್ಲೆಯ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗಿ ಸ್ಥಳೀಯರಿಗೇ ಟಿಕೆಟ್ ನೀಡುವಂತೆ ಒತ್ತಡ ಹೇರಲು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಈಗಾಗಲೇ ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ್ ಕೋರೆ ಅವರ ನಿವಾಸದಲ್ಲಿ ಸಭೆ ಸೇರಿದ್ದ ಜಿಲ್ಲೆಯ ಬಿಜೆಪಿ ಮುಖಂಡರು ಟಿಕೆಟ್ ವಿತರಣೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ತೀರ್ಮಾನ ಕೈಗೊಂಡಿದ್ದರು. ಅದರ ಭಾಗವಾಗಿ ಇಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ್​ ಪಾಟೀಲ, ಮಾಜಿ ಶಾಸಕರಾದ ಡಾ. ವಿಶ್ವನಾಥ್ ಪಾಟೀಲ್, ಸಂಜಯ್ ಪಾಟೀಲ್, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ ಸೇರಿ 8ಕ್ಕೂ ಹೆಚ್ಚು ಮುಖಂಡರು ಬೆಂಗಳೂರಿಗೆ ತೆರಳಿದ್ದಾರೆ.

ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ರಾಜ್ಯ ಚುನಾವಣೆ ಉಸ್ತುವಾರಿ ರಾಧಾ ಮೋಹನ್​ ದಾಸ್ ಅಗರವಾಲ್, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಸಂಘಟನಾ ಕಾರ್ಯದರ್ಶಿ ಜೆ.ವಿ ರಾಜೇಶ್ ಅವರನ್ನು ಭೇಟಿಯಾಗಿ ಸ್ಥಳೀಯರಿಗೆ ಟಿಕೆಟ್ ಕೊಡುವಂತೆ ಮನವರಿಕೆ ಮಾಡಿಕೊಡಲಿದ್ದಾರೆ. ತಮ್ಮ ಮನವಿಗೆ ರಾಜ್ಯ ನಾಯಕರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದರ ಮೇಲೆ ಮುಂದಿನ‌ ನಿರ್ಧಾರ ಕೈಗೊಳ್ಳಲಿರುವ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು, ದೆಹಲಿಗೂ ತೆರಳಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಶೆಟ್ಟರ್ ಪರ ಶಂಕರಗೌಡ ಪಾಟೀಲ ಬ್ಯಾಟಿಂಗ್ : ಮತ್ತೊಂದೆಡೆ ವಿಜಯಪುರದಲ್ಲಿ ಇತ್ತೀಚಿಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಬಿಎಸ್​ವೈ ಆಪ್ತ, ಬಿಜೆಪಿ ಟಿಕೆಟ್ ಆಕಾಂಕ್ಷಿ ಶಂಕರಗೌಡ ಪಾಟೀಲ ಅವರು ಜಗದೀಶ್ ಶೆಟ್ಟರ್​ಗೆ​ ಟಿಕೆಟ್​​ ಕೊಡುವ ವಿಚಾರದಲ್ಲಿ ಜಿಲ್ಲೆಯ ನಾಯಕರಲ್ಲಿ ವಿರೋಧವಿದ್ದಾಗಲೂ, ಶೆಟ್ಟರ್ ಪರ ಬ್ಯಾಟಿಂಗ್ ಮಾಡಿದ್ದರು.

ಜಗದೀಶ್ ಶೆಟ್ಟರ್​​ಗೆ ಟಿಕೆಟ್‌ ನೀಡುವುದನ್ನು ಪಕ್ಷ ತೀರ್ಮಾನ ಮಾಡಿದ್ರೆ ಅದನ್ನು ನಾಯಕರು ಸ್ವಾಗತಿಸಬೇಕು. ಪಕ್ಷವೇ ತೀರ್ಮಾನ ಮಾಡಿದಾಗ ವಿರೋಧ ಮಾಡೋದಕ್ಕೆ ಆಗಲ್ಲ. ಬೆಳಗಾವಿ ಲೋಕಸಭಾ ಚುನಾವಣೆಗೆ ನಾನು ಆಕಾಂಕ್ಷಿಯಾಗಿದ್ದೆನು. ನಾನು ಬಿಜೆಪಿ ಟಿಕೆಟ್​ಗಾಗಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರಿಗೆ ಮನವಿ ಮಾಡಿದ್ದೆನು. ಈಗ ಜಗದೀಶ್ ಶೆಟ್ಟರ್ ಬೆಳಗಾವಿಗೆ ಬಂದು ಸ್ಪರ್ಧಿಸ್ತಾರೆ ಎಂಬ ವದಂತಿ ಇದೆ. ಪಕ್ಷದ ತೀರ್ಮಾನವನ್ನು ನಾವು ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಪಾಲಿಸಬೇಕು. ಪಕ್ಷದ ಹಿರಿಯರು ಎಲ್ಲವೂ ವಿಚಾರ ಮಾಡಿಯೇ ತೀರ್ಮಾನ ತಗೊಂಡಿರಬೇಕು. ಈಗ ಇನ್ನೂ ಕಾಲ ಮಿಂಚಿಲ್ಲ. ಬೆಳಗಾವಿಗೆ ನನ್ನ ಅಭ್ಯರ್ಥಿಯನ್ನಾಗಿ ಪರಿಗಣಿಸಬೇಕು. ಜಗದೀಶ್ ಶೆಟ್ಟರ್ ಬೆಳಗಾವಿಗೆ ಬಂದು ಸ್ಪರ್ಧೆ ಮಾಡಿದರೆ ಪಕ್ಷದ ಆದೇಶ ಪಾಲಿಸುತ್ತೇವೆ. ಜಗದೀಶ್ ಶೆಟ್ಟರ್ ಗೆಲ್ಲಿಸುವ ಎಲ್ಲ ಪ್ರಯತ್ನ ಮಾಡುತ್ತೇವೆ ಶಂಕರಗೌಡ ಪಾಟೀಲ ಹೇಳಿದ್ದರು.

ಇದನ್ನೂ ಓದಿ : ಶೆಟ್ಟರ್​​ಗೆ ಬಿಜೆಪಿ ಟಿಕೆಟ್‌ ನೀಡಲು ಪಕ್ಷ ತೀರ್ಮಾನಿಸಿದ್ರೆ ಅದನ್ನು ಸ್ವಾಗತಿಸುವೆ: ಶಂಕರಗೌಡ ಪಾಟೀಲ

Last Updated : Mar 19, 2024, 7:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.