ಬೆಂಗಳೂರು : ರಾಜಧಾನಿಯಲ್ಲಿರುವ ಪ್ರತಿಷ್ಠಿತ ಮಂತ್ರಿ ಮಾಲ್ಗೆ ಮತ್ತೆ ಸಂಕಷ್ಟ ಎದುರಾಗಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆ ಮಾಲ್ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಮಾರ್ಷಲ್ಗಳು ಹಾಗೂ ಪೊಲೀಸರ ಬಿಗಿ ಭದ್ರತೆಯಲ್ಲಿ ಪಾಲಿಕೆ ಅಧಿಕಾರಿಗಳು ಮಾಲ್ ನ ಮುಖ್ಯ ಪ್ರವೇಶ ದ್ವಾರಕ್ಕೆ ಬೀಗ ಹಾಕಿದ್ದಾರೆ.
ಸುಮಾರು 51 ಕೋಟಿ ರೂ. ಗಳಿಗೂ ಹೆಚ್ಚು ತೆರಿಗೆ ಉಳಿಸಿಕೊಂಡಿರುವ ಮಾಲ್ಗೆ ಒಂದೇ ಬಾರಿಗೆ 32 ಕೋಟಿ ರೂ. ತೆರಿಗೆ ಪಾವತಿ ಮಾಡುವಂತೆ ಪಾಲಿಕೆ ಅವಕಾಶ ನೀಡಿತ್ತು. ಆದರೂ ತೆರಿಗೆ ಪಾವತಿಸಲು ಮಾಲ್ನಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಮತ್ತೆ ಮಾಲ್ಗೆ ಬೀಗ ಹಾಕಲಾಗಿದ್ದು, ತೆರಿಗೆ ಪೂರ್ತಿ ಪಾವತಿ ಮಾಡುವವರೆಗೂ ಓಪನ್ ಮಾಡದಿರುವ ಚಿಂತನೆ ನಡೆಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : 11.51 ಕೋಟಿ ರೂ. ಆಸ್ತಿ ತೆರಿಗೆ ಬಾಕಿ: ರಾಕ್ಲೈನ್ ಮಾಲ್ ಸೀಜ್ ಮಾಡಿದ ಬಿಬಿಎಂಪಿ ಅಧಿಕಾರಿಗಳು