ETV Bharat / state

ಪಂಚಮಸಾಲಿ ಹೋರಾಟ ಹತ್ತಿಕ್ಕಿದರೆ ಸರ್ಕಾರಕ್ಕೆ ಕೆಟ್ಟ ಹೆಸರು : ಸಿಎಂ ಸಿದ್ದರಾಮಯ್ಯಗೆ ಕೂಡಲಸಂಗಮ ಸ್ವಾಮೀಜಿ ಎಚ್ಚರಿಕೆ - BASAVA JAYA MRITYUNJAYA SWAMIJI

ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಪಂಚಮಸಾಲಿ ಹೋರಾಟ ಹತ್ತಿಕ್ಕಲು ಯತ್ನಿಸಬೇಡಿ ಎಂದು ಸಿಎಂ ಸಿದ್ದರಾಮಯ್ಯಗೆ ತಿಳಿಸಿದ್ದಾರೆ.

basava-jaya-mrityunjaya-swamiji
ಬಸವಜಯ ಮೃತ್ಯುಂಜಯ ಸ್ವಾಮೀಜಿ (ETV Bharat)
author img

By ETV Bharat Karnataka Team

Published : Dec 7, 2024, 10:51 PM IST

ಬೆಳಗಾವಿ: ಪಂಚಮಸಾಲಿ ಸಮಾಜ ಹಿಂಸಾತ್ಮಕ ಹೋರಾಟಕ್ಕೆ ಎಂದೂ ಪ್ರಚೋದನೆ ಕೊಟ್ಟಿಲ್ಲ. ಹಿಂದಿನ ಸರ್ಕಾರಗಳ‌ ರೀತಿಯಲ್ಲಿ ಬೆಂಬಲ ಕೊಡಬೇಕು. ಹೋರಾಟ ಹತ್ತಿಕ್ಕಲು ಯತ್ನಿಸಬೇಡಿ. ಸಮಾಜಕ್ಕೆ ನಿಮ್ಮ ಮೇಲೆ ಗೌರವವಿದೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ವಾಮೀಜಿ, 2012ರಿಂದ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗಾಗಿ ಹೋರಾಟ ನಡೆದಿದೆ. ಹಿಂದಿನ ಬಿಜೆಪಿ ಸರ್ಕಾರ 2ಡಿ ಮೀಸಲಾತಿ ಘೋಷಿಸಿತ್ತು. ಆದರೆ, ಅದು ಜಾರಿಯಾಗಿಲ್ಲ. ಹಾಗಾಗಿ, ಮತ್ತೆ ಹೋರಾಟ ಆರಂಭವಾಯಿತು. ಸಿದ್ದರಾಮಯ್ಯ ಸರ್ಕಾರ ಮೀಸಲಾತಿಗೆ ಸ್ಪಂದನೆ ನೀಡಿಲ್ಲ. ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಎಲ್ಲಾ ರೀತಿಯ ಸಿದ್ಧತೆ ಮಾಡಿದ್ದೇವೆ. ಹಿಂದಿನ ಸರ್ಕಾರಗಳು ನಮ್ಮ ಹೋರಾಟಕ್ಕೆ ಬೆಂಬಲ ಕೊಟ್ಟಿವೆ. ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕದಂತೆ ಒತ್ತಡ ಹೇರಲಾಗುತ್ತಿದೆ. ಪೊಲೀಸ್ ಇಲಾಖೆಯಿಂದ ಕಾರ್ಯಕರ್ತರಿಗೆ ಬೆದರಿಕೆ ಹಾಕಬಾರದು. ಹೋರಾಟ ಹತ್ತಿಕ್ಕಿದರೆ, ಸರ್ಕಾರಕ್ಕೆ ಕೆಟ್ಟು ಹೆಸರು ಬರುತ್ತದೆ ಎಂದು ಎಚ್ಚರಿಸಿದರು.

ಕೂಡಲಸಂಗಮ ಸ್ವಾಮೀಜಿ (ETV Bharat)

ಮೀಸಲಾತಿ ಪ್ರತಿ ಸಿಗುವವರೆಗೆ ಹೋರಾಟ ನಿಲ್ಲಲ್ಲ: ಟ್ರ್ಯಾಕ್ಟರ್ ರ‍್ಯಾಲಿ ಮೂಲಕ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ. ಡಿಸೆಂಬರ್ 10 ರಂದು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ರಾಜ್ಯಾದ್ಯಂತ ಜನರು ಸ್ವಯಂ ಪ್ರೇರಣೆಯಿಂದ ಬರುತ್ತಿದ್ದಾರೆ. ಕೊಂಡಸಕೊಪ್ಪ ಬಳಿ ಸಮಾವೇಶ ಮಾಡಿ ಬಳಿಕ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಮೀಸಲಾತಿ ಪ್ರತಿ ಸಿಗುವವರೆಗೆ ಹೋರಾಟ ನಿಲ್ಲಲ್ಲ. ಯಾವುದೇ ವದಂತಿಗೆ ಪಂಚಮಸಾಲಿಗಳು ಕಿವಿ ಕೊಡಬಾರದು‌. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯವೋ, ಹೋರಾಟ ನಡೆಯುವುದು ಅಷ್ಟೇ ಸತ್ಯ. ಹೋರಾಟಕ್ಕೆ ತಡೆ ಹಿಡಿಯುವ ಪ್ರಯತ್ನ ಸರ್ಕಾರ ಮಾಡಬಾರದು ಎಂದು ಒತ್ತಾಯಿಸಿದರು.

ಹೋರಾಟಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಗೈರಿನ ಬಗ್ಗೆ ಮಾತನಾಡಿದ ಸ್ವಾಮೀಜಿ, ಮೀಸಲಾತಿ ಹೋರಾಟ ನಿಂತ ನೀರಲ್ಲ. ಎಲ್ಲರೂ ಹೋರಾಟಕ್ಕೆ ಬರುತ್ತಾರೆ. ಆಡಳಿತ ಪಕ್ಷ ಇರೋದರಿಂದ ಕೆಲವರು ಬಂದಿಲ್ಲ. ಡಿಸೆಂಬರ್ 10ಕ್ಕೆ ಎಲ್ಲರೂ ಬರುತ್ತಾರೆ. ಕೆಲವರು ಮಾಜಿ ಇದ್ದಾಗ ಬರುತ್ತಾರೆ. ಹಾಲಿ ಇದ್ದಾಗ ಬರುತ್ತಾರೆ. ಹಿಂದೆಯೂ ಕಾಶಪ್ಪನವರ ಕೈಗೊಂಬೆ ಎಂದು ಅನೇಕರು ಆರೋಪಿಸಿದ್ದರು. ಈಗ ಯತ್ನಾಳ್ ಕೈಗೊಂಬೆ ಎಂದು ಕಾಶಪ್ಪನವರ ಆರೋಪಿಸಿದ್ದಾರೆ. ಇವೆಲ್ಲ ಆರೋಪಗಳು ಸಹಜ ಎಂದರು.

ನಮ್ಮ ಸಮಾಜದ ಮೇಲೆ ಗೌರವ ಇಡಿ : ನರಗುಂದ ಮಾದರಿಯಲ್ಲಿ ಹೋರಾಟ ಇರಲಿದೆ. ಎಲ್ಲಾ ಕಾಲದಲ್ಲಿಯೂ ಮಲ್ಲಪ್ಪ ಶೆಟ್ಟಿಯಂಥ ಕುತಂತ್ರಿಗಳು ಇರುತ್ತಾರೆ. ಸರ್ಕಾರಕ್ಕೆ ಭಯ ಇದ್ದ ಕಾರಣದಿಂದಲೇ ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರೆ. ಭಯ ಬೇಡ ನಮ್ಮ ಸಮಾಜದ ಮೇಲೆ ಗೌರವ ಇಡಿ. ಯತ್ನಾಳ್ ರೀತಿಯಲ್ಲಿ ಇತರೇ ಶಾಸಕರು ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಸ್ವಾಮೀಜಿ ಕೋರಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಪೊಲೀಸರ ಮೂಲಕ ಟ್ರ್ಯಾಕ್ಟರ್ ತಡೆಯುವ ಯತ್ನ ನಡೆದಿದೆ. ಯಾವುದೇ ಅನಾಹುತ ಆಗಬಾರದು ಎಂದರೆ, ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ಆಯೋಗದಿಂದ ವರದಿ ತರಿಸಬೇಕು. ಅದನ್ನು ಮೀಸಲಾತಿ ಗೆಜೆಟ್ ಹೊರಡಿಸಬೇಕು. ಸಮಾಜಕ್ಕೆ ನ್ಯಾಯ ಕೊಡಬಾರದು‌ ಅಂತಾ ಸರ್ಕಾರದ ಮನೋಭಾವನೆ ಆಗಿದ್ದರೆ, ಹೋರಾಟ ಅನಿವಾರ್ಯ. ಕಾಂಗ್ರೆಸ್ ಶಾಸಕರು ಮಾತನಾಡುವ ದಾಟಿ ಬದಲಾಗಿದೆ. ಈಗ ಅವರೇ ಪ್ರವಚನ ಹೇಳಲು ಆರಂಭ ಮಾಡಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ಪಂಚಮಸಾಲಿ ಶಾಸಕರಿಗೆ ಟಾಂಗ್ ಕೊಟ್ಟರು.

ಮೀಸಲಾತಿ ಕೊಡದೇ ಇದ್ದರೆ ಅಪಖ್ಯಾತಿ ಬರುತ್ತದೆ‌: ಕಾಂಗ್ರೆಸ್ ಶಾಸಕರನ್ನು ಸೇರಿಸಿಕೊಂಡು ಸಭೆ ಮಾಡಿ. ಇದರಲ್ಲಿ ನಮಗೆ ಯಾವುದೇ ಪ್ರತಿಷ್ಠೆ ಇಲ್ಲ. ಸಿದ್ದರಾಮಯ್ಯ ಅವರ ಹಾದಿ ತಪ್ಪಿಸುವ ಕೆಲಸವನ್ನು ಕೈ ಶಾಸಕರು ಮಾಡಬಾರದು‌. ಸಿಎಂಗೆ ಮೀಸಲಾತಿ ಕೊಡದೇ ಇದ್ದರೆ ಅಪಖ್ಯಾತಿ ಬರುತ್ತದೆ‌. ಪೊಲೀಸ್ ಇಲಾಖೆಯಿಂದ ನಮ್ಮ ಮುಖಂಡರಿಗೆ ಕರೆ ಮಾಡಿಸಬೇಡಿ. ನಾನು ಸದನದಲ್ಲಿ ಮೀಸಲಾತಿ ವಿಚಾರ ಪ್ರಸ್ತಾಪಿಸುತ್ತೇನೆ. ಆತ್ಮಸಾಕ್ಷಿ ಇರುವ ಕಾಂಗ್ರೆಸ್ ಶಾಸಕರು ಸದನದ ಬಾವಿಗಿಳಿದು ಧರಣಿ ಮಾಡುತ್ತಾರೆ ಎಂದು ಛೇಡಿಸಿದರು. ಈ ವೇಳೆ ಮಾಜಿ ಸಚಿವ‌ರಾದ ಸಿ.ಸಿ.ಪಾಟೀಲ, ಎ.ಬಿ.ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ : ಮೀಸಲಾತಿ ಕೊಟ್ಟರೆ ಮುತ್ತಿನ ಹಾರ, ಕೊಡದಿದ್ದರೆ ಸುವರ್ಣಸೌಧಕ್ಕೆ ಮುತ್ತಿಗೆ: ಕೂಡಲಸಂಗಮ ಸ್ವಾಮೀಜಿ ಸಂದರ್ಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.