ETV Bharat / state

ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟ ಬೆಂಗಳೂರು ಕೇಂದ್ರ: ಮೋದಿ ಫ್ಯಾಕ್ಟರ್ Vs ಪಂಚ ಗ್ಯಾರಂಟಿ ಫೈಟ್! - Lok Sabha election 2024

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವು ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟಿದೆ. ನರೇಂದ್ರ ಮೋದಿ ಫ್ಯಾಕ್ಟರ್ ಮತ್ತು ಪಂಚ ಗ್ಯಾರಂಟಿಗಳ ಮಧ್ಯೆ ನೇರ ಹಣಾಹಣಿ ಕಂಡು ಬಂದಿದೆ.

MODI FACTOR VS FIVE GUARANTEE FIGHT  BANGALURU CENTER  FIVE GUARANTEE  NARENDRA MODI  LOK SABHA ELECTION 2024
ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟ ಬೆಂಗಳೂರು ಕೇಂದ್ರ; ಮೋದಿ ಫ್ಯಾಕ್ಟರ್ Vs ಪಂಚ ಗ್ಯಾರಂಟಿ ಫೈಟ್!
author img

By ETV Bharat Karnataka Team

Published : Apr 24, 2024, 1:35 PM IST

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜನರ ಅಭಿಪ್ರಾಯ

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಸಂಸದ ಬಿಜೆಪಿ ಪಿ.ಸಿ. ಮೋಹನ್ ನಾಲ್ಕನೇ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಹೊಸ ಮುಖ ಮನ್ಸೂರ್ ಅಲಿ ಖಾನ್ ಬಿಜೆಪಿ ಭದ್ರಕೋಟೆ ಒಡೆಯಲು ಮುಂದಾಗಿದ್ದಾರೆ. ಎರಡೂ ಅಭ್ಯರ್ಥಿಗಳು ಸ್ಟಾರ್ ಪ್ರಚಾರಕರೊಂದಿಗೆ ಬಿರುಸಿನ ಪ್ರಚಾರದ ಮೂಲಕ ಮತಯಾಚಿಸಿದ್ದಾರೆ. ಇದರ ಪರಿಣಾಮ ಈ ಕ್ಷೇತ್ರ ಟಫ್ ಫೈಟ್ ಅಖಾಡವಾಗಿ ಪರಿವರ್ತನೆಗೊಂಡಿದೆ.

ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಲು ಕಾಂಗ್ರೆಸ್​ ಕಸರತ್ತು: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರವು ಬೆಂಗಳೂರು ನಗರದ ಪ್ರಮುಖ ಕ್ಷೇತ್ರವಾಗಿದ್ದು, ಮಿನಿ ಭಾರತ ಎಂಬ ಹೆಗ್ಗಳಿಕೆ ಪಡೆದಿದೆ. ವಿವಿಧ ಸಮುದಾಯ, ವಿವಿಧ ಭಾಷಿಕರು, ವಲಸಿಗ ಸಮುದಾಯ ಹೊಂದಿರುವ ಕ್ಷೇತ್ರ ಇದಾಗಿದೆ. 2008ರಲ್ಲಿ ರಚಿತವಾದ ಈ ಕ್ಷೇತ್ರ ಸದ್ಯ ಬಿಜೆಪಿಯ ಭದ್ರ ಕೋಟೆಯಾಗಿದೆ. ಪಿ.ಸಿ. ಮೋಹನ್ ಸತತ ಮೂರು ಬಾರಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಈ ಬಾರಿ ನಾಲ್ಕನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಹೊಸ ಮುಖವಾಗಿದ್ದು, ಶಿಕ್ಷಣ ತಜ್ಞರಾಗಿರುವ ಅವರು ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಲು ಕಸರತ್ತು ನಡೆಸುತ್ತಿದ್ದಾರೆ.

ಕ್ಷೇತ್ರದಲ್ಲಿನ ಮತದಾರರ ಪ್ರೊಫೈಲ್: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಒಟ್ಟು 23,89,761 ಮತದಾರರನ್ನು ಹೊಂದಿದೆ. ಅವುಗಳಲ್ಲಿ ಪುರುಷ ಮತದಾರರು 12,34,786, ಮಹಿಳಾ ಮತದಾರರು 11,54,511 ಮತ್ತು ಇತರರು 464 ಇದ್ದಾರೆ. ಈ ಕ್ಷೇತ್ರದಲ್ಲಿ ಸುಮಾರು 6 ಲಕ್ಷ ಅಲ್ಪಸಂಖ್ಯಾತರು ಇದ್ದಾರೆ. ಸುಮಾರು 4 ಲಕ್ಷ ಮುಸ್ಲಿಂ ಸಮುದಾಯ ಹಾಗೂ ಸರಿಸುಮಾರು 2 ಲಕ್ಷ ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ. ಇನ್ನು 6.5 ಲಕ್ಷಕ್ಕೂ ಹೆಚ್ಚು ಹಿಂದುಳಿದ ವರ್ಗಕ್ಕೆ ಸೇರಿದ ಮತದಾರರು ಇದ್ದಾರೆ. ಅದರ ಜೊತೆಗೆ ಮಾರವಾಡಿಗಳು ಹಾಗೂ ಗುಜರಾತಿ ಸಮುದಾಯದವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಸರ್ವಜ್ಞನಗರ, ಗಾಂಧಿನಗರ, ಚಾಮರಾಜಪೇಟೆ, ಶಿವಾಜಿನಗರ, ಶಾಂತಿನಗರ, ರಾಜಾಜಿನಗರ, ಸಿ.ವಿ. ರಾಮನ್ ನಗರ ಹಾಗೂ ಮಹದೇವಪುರ ವಿಧಾನಸಭೆ ಕ್ಷೇತ್ರಗಳು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಕ್ಷೇತ್ರಗಳಲ್ಲಿ ಕಾಂಗ್ರೆಸ್ 5 ಮತ್ತು ಬಿಜೆಪಿ 3 ರಲ್ಲಿ ಗೆಲುವು ಸಾಧಿಸಿದೆ. ಕ್ಷೇತ್ರದ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುತ್ತಿದ್ದರೂ, ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮತದಾರರು ಬಿಜೆಪಿಯತ್ತ ವಾಲುತ್ತಿರುವುದು ಕಂಡು ಬರುತ್ತಿದೆ.‌

ಇಬ್ಬರೂ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ?: ಬಿಜೆಪಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಮತ ಬ್ಯಾಂಕ್ ಹೊಂದಿರುವ ಪ್ರದೇಶಗಳನ್ನು ಗುರಿಯಾಗಿಸಿ ಇಬ್ಬರು ಅಭ್ಯರ್ಥಿಗಳು ಮತಬೇಟೆ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಪರವಾಗಿ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ತಮಿಳು ನಟ ಶರತ್ ಮೂಲಕ ಕ್ಷೇತ್ರದಲ್ಲಿ ಮತಬೇಟೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸ್ವತಃ ಪ್ರಧಾನಿ ಮೋದಿ ಬಹಿರಂಗ ಸಭೆ ನಡೆಸುವ ಮೂಲಕ ಪಿ.ಸಿ. ಮೋಹನ್ ತಮ್ಮ ಕ್ಷೇತ್ರದಲ್ಲಿ ಮೋದಿ ಅಲೆ ಸೃಷ್ಟಿಸಲು ಯತ್ನಿಸಿದ್ದಾರೆ.

ಇತ್ತ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ‌ ಖಾನ್ ಕೂಸ ಕ್ಷೇತ್ರಾದ್ಯಂದ ಬಿರುಸಿನ ಮತಪ್ರಚಾರ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಭರ್ಜರಿ ಮತಬೇಟೆಯಾಡಿದ್ದಾರೆ. ಅಲ್ಪಸಂಖ್ಯಾತರ ಮತ ಬ್ಯಾಂಕ್​ಗಳನ್ನು ಗುರಿಯಾಗಿಸಿ ಮನ್ಸೂರ್ ಅಲಿ ಖಾನ್ ಹೆಚ್ಚಿನ ಪ್ರಚಾರ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿ Vs ಮೋದಿ ಗ್ಯಾರಂಟಿ ಫೈಟ್: ಪಿ.ಸಿ.ಮೋಹನ್ ಪ್ರಮುಖವಾಗಿ ಮೋದಿ ಫ್ಯಾಕ್ಟರ್, ಮೋದಿ ಗ್ಯಾರಂಟಿ ಹಾಗೂ ತಮ್ಮ ಸಾಧನೆಗಳನ್ನೇ ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದಾರೆ. ಮೆಟ್ರೋ ರೈಲು ಮಾರ್ಗ ವಿಸ್ತರಣೆ, ಸಬ್ ಅರ್ಬನ್ ರೈಲು ಯೋಜನೆ, ರೈಲು ನಿಲ್ದಾಣಗಳ ನವೀಕರಣ ಸೇರಿ ತಮ್ಮ ಅವಧಿಯಲ್ಲಿನ ಪ್ರಮುಖ ಸಾಧನೆಗಳನ್ನು ನೆಚ್ಚಿಕೊಂಡಿದ್ದಾರೆ. ವಲಸಿಗರು, ಟೆಕ್ಕಿಗಳು, ಒಬಿಸಿ ಸಮುದಾಯದ ಮತವನ್ನೇ ಹೆಚ್ಚಿಗೆ ಅವಲಂಬಿಸಿಕೊಂಡಿದ್ದಾರೆ. ಮೋದಿ ಜನಪ್ರಿಯತೆ, ಮೋದಿ ಸರ್ಕಾರದ ಸಾಧನೆ, ಮೋದಿ ಗ್ಯಾರಂಟಿ ಮತ್ತು ತನ್ನ ಕೆಲಸಗಳ ಆಧಾರದಲ್ಲಿ ಮತಯಾಚನೆ ಮಾಡುತ್ತಿದ್ದೇನೆ. ಜೆಡಿಎಸ್ ಜೊತೆಗೆ ಮೈತ್ರಿಯಿಂದ ಇನ್ನಷ್ಟು ಬಲ ಬಂದಿದೆ.‌ ನನ್ನ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ ಎಂದು ಪಿ.ಸಿ. ಮೋಹನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಪಂಚ ಗ್ಯಾರಂಟಿಯನ್ನೇ ಪ್ರಮುಖ ಅಸ್ತ್ರವನ್ನಾಗಿಸಿ ಕ್ಷೇತ್ರದಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿನ ಅಲ್ಪಸಂಖ್ಯಾತರು, ಎಸ್ಸಿ, ಎಸ್ಟಿ ಸಮುದಾಯ, ಕೊಳಗೇರಿ ನಿವಾಸಿಗಳ ಮತಗಳನ್ನು ಹೆಚ್ಚಿಗೆ ನೆಚ್ಚಿಕೊಂಡಿದ್ದಾರೆ. ಇದರ ಜೊತೆಗೆ ತೆರಿಗೆ ಅನ್ಯಾಯ, ಕ್ಷೇತ್ರದಲ್ಲಿನ ಸಮಸ್ಯೆಗಳು, ಹೊಸ ಮುಖಕ್ಕೆ ಅವಕಾಶ ನೀಡುವಂತೆ ಕೋರಿ ಮತಬೇಟೆ ಮಾಡುತ್ತಿದ್ದಾರೆ. ಜೊತೆಗೆ ಕ್ಷೇತ್ರದ ಐದು ಕಾಂಗ್ರೆಸ್ ಶಾಸಕರ ಬಲದೊಂದಿಗೆ ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಪಂಚ ಗ್ಯಾರಂಟಿ ಬಲ, ಹಾಲಿ ಬಿಜೆಪಿ ಸಂಸದರ ವೈಫಲ್ಯ, ಐವರು ಕಾಂಗ್ರೆಸ್ ಶಾಸಕರ ಒಗ್ಗಟ್ಟಿನೊಂದಿಗೆ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸ ಹೊಂದಿದ್ದೇನೆ. ಕೆರೆ ಅಭಿವೃದ್ಧಿ, ಟ್ರಾಫಿಕ್ ಸಮಸ್ಯೆ ನಿವಾರಣೆ, ಉದ್ಯೋಗ ಕಲ್ಪಿಸುವ ಭರವಸೆಯೊಂದಿಗೆ ಜನರ ಮುಂದೆ ಹೋಗುತ್ತಿದ್ದೇನೆ ಎಂದು ಮನ್ಸೂರ್ ಅಲಿ ಖಾನ್ ತಿಳಿಸಿದ್ದಾರೆ.

ಕ್ಷೇತ್ರದ ಜನರ ಅಭಿಪ್ರಾಯವೇನು?: ಕ್ಷೇತ್ರದ ಬಹುತೇಕ ಕಡೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ಕೊರತೆ ಈ ಬಾರಿ ಕ್ಷೇತ್ರದ ಹಲವೆಡೆ ಜನರನ್ನು ಪರದಾಡುವಂತೆ ಮಾಡುತ್ತಿದೆ.‌ ಕ್ಷೇತ್ರದಲ್ಲಿ ಅನೇಕ ಬಡವರಿದ್ದು, ಅವರಿಗೆ ಹೆಚ್ಚಿನ ಅನುಕೂಲ ಕಲ್ಲಿಸಿಲ್ಲ. ಸ್ಲಂ ಭಾಗದ ಜನರಿಗೆ ಹಕ್ಕುಪತ್ರ ನೀಡಿಲ್ಲ ಎಂಬ ಅಸಮಾಧಾನವೂ ಹಲವರಲ್ಲಿದೆ. ಉಳಿದಂತೆ ಕ್ಷೇತ್ರದ ವ್ಯಾಪ್ತಿಯಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗದೇ ಇರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಮಹದೇವಪುರ, ಶಾಂತಿನಗರ, ಶಿವಾಜಿನಗರ, ಸಿ.ವಿ. ರಾಮನ್ ನಗರ ಕ್ಷೇತ್ರದ ಹಲವೆಡೆಯ ಮಳೆ ಅವಾಂತರಕ್ಕೆ ಶಾಶ್ವತ ಪರಿಹಾರ ಕಲ್ಪಿಸದೇ ಇರುವ ಬಗ್ಗೆ ಕ್ಷೇತ್ರದ ಜನರಲ್ಲಿ ಅಸಮಾಧಾನ ಇದೆ.

ಇದನ್ನೂ ಓದಿ: ದೇಶಭಕ್ತಿ ಗುತ್ತಿಗೆ ತೆಗೆದುಕೊಂಡ ಹಾಗೆ ಬಿಜೆಪಿಯವರು ಮಾತನಾಡುತ್ತಾರೆ: ಮಾಜಿ ಡಿಸಿಎಂ ಸವದಿ ಗುಡುಗು - Laxman Savadi slams bjp

ETV Bharat Logo

Copyright © 2024 Ushodaya Enterprises Pvt. Ltd., All Rights Reserved.