ರಾಮನಗರ: ವಿಧಾನ ಪರಿಷತ್ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಮತ ಎಣಿಕೆ ಇರುವುದರಿಂದ ಬೆಂಗಳೂರು ಜಿಲ್ಲಾಡಳಿತ ಜೂನ್ 1ರಿಂದ 6ರ ರವರೆಗೆ ಮದ್ಯ ಮಾರಾಟ ನಿಷೇಧಿಸಿದೆ.
ಜೂನ್ 3ರಂದು ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾನ ನಡೆಯಲಿದ್ದು, ಜೂನ್ 1ರ ಸಂಜೆ 4 ಗಂಟೆಯಿಂದಲೇ ಬಾರ್ ಬಂದ್ ಆಗಲಿದ್ದು, ಜೂನ್ 3ರವರೆಗೂ ನಿರ್ಬಂಧ ಮುಂದುವರೆಯಲಿದೆ. ಜೂನ್ 4ರಂದು ದೇಶಾದ್ಯಂತ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಹಾಗಾಗಿ ಅಂದೂ ಸಹ ಮದ್ಯ ಮಾರಾಟ ಇರುವುದಿಲ್ಲ. ಜೂನ್ 6ರಂದು ಎಂಎಲ್‌ಸಿ ಮತ ಎಣಿಕೆ ಇದ್ದು ಬಾರ್ ಬಂದ್ ಆಗಿರಲಿದೆ.
ರಾಮನಗರ ಜಿಲ್ಲಾಡಳಿತ ಲೋಕಸಭೆ ಮತ ಎಣಿಕೆಯ ದಿನ (ಜೂ.4ರಂದು) ಎಣಿಕಾ ಕೇಂದ್ರದ ಸುತ್ತಮುತ್ತ ಮದ್ಯದಂಗಡಿ ಬಂದ್ ಮಾಡಿದೆ.
ಇದನ್ನೂ ಓದಿ: ಪರಿಷತ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಿಎಂ-ಡಿಸಿಎಂ ಮಾತ್ರ ತೀರ್ಮಾನಿಸಿದರೆ ಸರಿಯಲ್ಲ: ಪರಮೇಶ್ವರ್ - G Parameshwar