ETV Bharat / state

ನಟ ದರ್ಶನ್ ಧರಿಸಿದ್ದು ಪವರ್ ಗ್ಲಾಸ್, ಇದಕ್ಕೆ ಅವಕಾಶ ಇದೆ: ಬಳ್ಳಾರಿ ಎಸ್​ಪಿ - Darshan in Ballari Jail - DARSHAN IN BALLARI JAIL

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣ ಎದುರಿಸುತ್ತಿರುವ ನಟ ದರ್ಶನ್ ಅವರು ಗುರುವಾರ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಈ ವೇಳೆ ಅವರು ಧರಿಸಿದ್ದ ಕನ್ನಡಕದ ಕುರಿತು ಭಾರಿ ಸುದ್ದಿಯಾಗಿತ್ತು. ಈ ಬಗ್ಗೆ ಎಸ್​ಪಿ ಶೋಭಾ ರಾಣಿ ಅವರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸ್ಪಷ್ಟನೆ ನೀಡಿದರು.

ದರ್ಶನ್ ಧರಿಸಿದ್ದು ಪವರ್ ಗ್ಲಾಸ್, ಇದಕ್ಕೆ ಅವಕಾಶ ಇದೆ: ಬಳ್ಳಾರಿ ಎಸ್​ಪಿ
ದರ್ಶನ್ ಧರಿಸಿದ್ದು ಪವರ್ ಗ್ಲಾಸ್, ಇದಕ್ಕೆ ಅವಕಾಶ ಇದೆ: ಬಳ್ಳಾರಿ ಎಸ್​ಪಿ (ETV Bharat)
author img

By ETV Bharat Karnataka Team

Published : Aug 29, 2024, 8:55 PM IST

Updated : Aug 29, 2024, 9:17 PM IST

ಬಳ್ಳಾರಿ ಎಸ್​ಪಿ ಶೋಭಾ ರಾಣಿ (ETV Bharat)

ಬಳ್ಳಾರಿ: ನಟ ದರ್ಶನ್ ಅವರು ಧರಿಸಿರುವುದು ಕೂಲಿಂಕ್ ಗ್ಲಾಸ್ ಅಲ್ಲ. ಅದು ಪವರ್ ಗ್ಲಾಸ್. ಕಣ್ಣಿನ ಸಮಸ್ಯೆ ಇದ್ರೆ ಇದನ್ನು ಧರಿಸುವುದಕ್ಕೆ ಅವಕಾಶವಿದೆ. ಆದರೂ ಕೂಡ ವೈದ್ಯರು ಗ್ಲಾಸ್​​ನ ಪವರ್ ಪರೀಕ್ಷೆ ಮಾಡಲಿದ್ದಾರೆ ಎಂದು ಬಳ್ಳಾರಿ ಎಸ್​ಪಿ ಶೋಭಾ ರಾಣಿ ತಿಳಿಸಿದರು.

ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಎಸ್​ಪಿ ಶೋಭಾ ರಾಣಿ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ರೂಟಿನ್​ನಂತೆ ಇಂದು ಕೂಡ ಜೈಲಿಗೆ ಭೇಟಿ ನೀಡಿದ್ದೇನೆ. ಕಾರಾಗೃಹದ ಅಧೀಕ್ಷಕರ ಕೊಠಡಿಗೆ ತೆರಳಿ ಮಾತನಾಡಿದ್ದೇನೆ. ದರ್ಶನ್ ಅವರನ್ನು ಭೇಟಿಯಾಗಿಲ್ಲ ಎಂದು ಎಸ್​ಪಿ ಮಾಹಿತಿ ನೀಡಿದರು.

ಇನ್ನು, ದರ್ಶನ್ ಕುರಿತ ವದಂತಿಗಳ ಬಗ್ಗೆ ಉತ್ತರಿಸಿ, ದರ್ಶನ್ ಅವರು ಆರೋಗ್ಯವಾಗಿದ್ದಾರೆ. ಅವರ ಆರೋಗ್ಯ ಕುರಿತ ವದಂತಿಗಳು ಸುಳ್ಳು. ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ದರ್ಶನ್ ಅವರ ಕೈಗೆ ಬೇಡಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಎಸ್​ಪಿ, ದರ್ಶನ್ ಅವರಿಗೆ ಬೇಡಿ ಹಾಕಿಲ್ಲ. ಕೈಗೆ ನೋವಾಗಿರೋದ್ರಿಂದ ಬಟ್ಟೆ ಕಟ್ಟಿಕೊಂಡಿದ್ದರು. ಅದು ಬೇಡಿ ಅಲ್ಲ. ಜೊತೆಗೆ ಕೈಗೆ ಹಾಕಿದ್ದ ಕಡಗ, ದಾರ ಮತ್ತು ಚೈನ್​ಗಳನ್ನು ಪರಿಶೀಲನೆ ವೇಳೆ ತೆಗೆಸಲಾಗಿದೆ ಎಂದು ತಿಳಿಸಿದರು.

ವಿಚಾರಾಧೀನ ಕೈದಿ ಯಾವುದೇ ರೀತಿಯ ಬಟ್ಟೆ ಹಾಕಿಕೊಳ್ಳಬಹುದು. ಆದರೆ ಶಿಕ್ಷೆಯಾಗಿರೋ ಕೈದಿಗೆ ಆ ರೀತಿಯಲ್ಲಿ ಅವಕಾಶ ಇರೋದಿಲ್ಲ. ಇನ್ನು ದರ್ಶನ್ ಅವರಿಗೆ ಊಟ ನೀಡಲಾಗಿದ್ದು, ಜೈಲಿನ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ ಎಂದು ಎಸ್​ಪಿ ಮಾಹಿತಿ ನೀಡಿದರು.

ದರ್ಶನ್ ಅವರ ಭೇಟಿಗೆ ಅವಕಾಶ ನೀಡುವ ಕುರಿತು ಮಾತನಾಡಿದ ಅವರು, ಸಾಮಾನ್ಯವಾಗಿ ವಾರದಲ್ಲಿ ಒಂದು ದಿನ ಕುಟುಂಬಸ್ಥರು ಅಥವಾ ಆಪ್ತರ ಭೇಟಿಗೆ ಅವಕಾಶ ಇರುತ್ತದೆ. ಭೇಟಿಯಾಗುವವರು ತಮ್ಮ ಮಾಹಿತಿಯನ್ನು ಜೈಲಿನ ಅಧಿಕಾರಿಗಳಿಗೆ ನೀಡಬೇಕು. ಆಗ ಅಧಿಕಾರಿಗಳು, ಕೈದಿಗಳಿಗೆ ತಿಳಿಸಿ ಅವರು ಇಚ್ಛಿಸಿದರೆ ಒಂದು ಬಾರಿ ಭೇಟಿಗೆ ಅವಕಾಶ ನೀಡಲಾಗುತ್ತದೆ. ಆದರೆ ದರ್ಶನ್ ಅವರ ವಿಚಾರದಲ್ಲಿ ಕೋರ್ಟ್ ಆದೇಶದಲ್ಲಿ ಏನಿದೆ ಎಂಬುದು ನನ್ನ ಗಮನಕ್ಕಿಲ್ಲ. ಕೋರ್ಟ್ ಆದೇಶದಂತೆ ಅವಕಾಶ ನೀಡಲಾಗುತ್ತದೆ ಎಂದರು.

ಇದನ್ನೂ ಓದಿ: ಬಳ್ಳಾರಿಗೆ ಸ್ಥಳಾಂತರ ವೇಳೆ ದರ್ಶನ್ ಕೂಲಿಂಗ್​ ಗ್ಲಾಸ್​ ಧರಿಸಿದ್ದ ವಿಚಾರ: ಕ್ರಮಕ್ಕೆ ಡಿಐಜಿ ಪತ್ರ - DIG Notice on Darshan Cooling glass

ಇದನ್ನೂ ಓದಿ: ಬಳ್ಳಾರಿ ಉಸ್ತುವಾರಿ ಜಮೀರ್ ಆಗಿರುವುದಕ್ಕೂ ನಟ ದರ್ಶನ್ ಸ್ಥಳಾಂತರಕ್ಕೂ ಸಂಬಂಧವಿಲ್ಲ: ಜಿ ಪರಮೇಶ್ವರ್ - Home Minister G Parameshwar

Last Updated : Aug 29, 2024, 9:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.