ಬಾಗಲಕೋಟೆ:
ಬಿಜೆಪಿಯ ಪಿ.ಸಿ. ಗದ್ದಿಗೌಡರ- ಗೆಲುವು (10.56 AM)
ಕಾಂಗ್ರೆಸ್ನ ಸಂಯುಕ್ತಾ ಪಾಟೀಲ - ಸೋಲು
ಬಾಗಲಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ 5ನೇ ಬಾರಿ ವಿಜಯ ಪತಾಕೆ ಹಾರಿಸಿದ್ದಾರೆ. ಅವರ ಪ್ರತಿಸ್ಪರ್ಧಿ, ಕಾಂಗ್ರೆಸ್ ಅಭ್ಯರ್ಥಿ ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ ಸೋಲು ಅನುಭವಿಸಿದ್ದಾರೆ. ಕಳೆದ ಚುನಾವಣೆಗಳಲ್ಲಿ ಅನಾಯಾಸದ ಜಯ ಸಾಧಿಸಿರುವ ಗದ್ದಿಗೌಡರ್ ಈ ಬಾರಿಯೂ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕೈ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರು ಸೋಲು ಕಂಡಿದ್ದಾರೆ.
ವಿಜೇತ ಪಿ.ಸಿ. ಗದ್ದಿಗೌಡರ ಪ್ರತಿಕ್ರಿಯೆ: ಲೋಕಸಭಾ ಚುನಾವಣೆ ಸತತ ಐದನೇಯ ಭಾರಿ ಗೆಲವು ಸಾಧಿಸಿದ ಪಿ.ಸಿ. ಗದ್ದಿಗೌಡರ ಅವರು ಈಟಿವಿ ಭಾರತ ಜೊತೆಗೆ ಮಾತನಾಡಿ, ''ನಿರೀಕ್ಷೆ ಮಾಡಿದಂತೆ ಸುಮಾರು 70 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದೇನೆ. ಪ್ರವಾಸೋದ್ಯಮ ಸೇರಿದಂತೆ ರಸ್ತೆ, ನೀರಾವರಿ ಹಾಗೂ ಇತರ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿರುವುದಕ್ಕೆ ಸಂದ ಜಯವಾಗಿದೆ. ಐದನೇಯ ಭಾರಿ ಗೆಲವು ಸಾಧಿಸಿದರು ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಎಲ್ಲ ಮುಖಂಡರು ತೆಗೆದುಕೊಂಡಿರುವ ನಿರ್ಧಾರದಿಂದ ಜಯ ಗಳಿಸಲು ಸಾಧ್ಯವಾಗಿದೆ. ಇನ್ನಷ್ಟು ಹೆಚ್ಚಿಗೆ ಕೆಲಸ ಕಾರ್ಯ ಮಾಡುತ್ತೇನೆ'' ಎಂದು ತಿಳಿಸಿದ್ದಾರೆ.
ಬಿಜೆಪಿ ಕೈ ಹಿಡಿದ ಲಿಂಗಾಯತ ಗಾಣಿಗ ಸಮಾಜ: ಲಿಂಗಾಯತ ಗಾಣಿಗ ಸಮಾಜದವರು ಈ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಅಲ್ಲವಾದರೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜಕೀಯವಾಗಿ ಪ್ರಭಾವ ಹೊಂದಿದ್ದಾರೆ. ಈ ಸಮುದಾಯದವರು ಯಾವುದೇ ಪಕ್ಷದಲ್ಲಿದ್ದರೂ ಗದ್ದಿಗೌಡರ ಪರ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬಾರಿ ಕ್ಷೇತ್ರದಲ್ಲಿ ಶೇ 70.1ರಷ್ಟು ಮತದಾನವಾಗಿತ್ತು. 2019ರಲ್ಲಿ ಇಲ್ಲಿ ಶೇ.70.69ರಷ್ಟು ವೋಟಿಂಗ್ ಆಗಿತ್ತು.
ಬಿಜೆಪಿ ಕೋಟೆ ಭದ್ರ: ಎಲ್ಲಾ ಪಕ್ಷಗಳ ನಾಯಕರ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದ ಗದ್ದಿಗೌಡರ ಐದನೇ ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದಾರೆ. ದ್ವೇಷ ರಾಜಕಾರಣ ಮಾಡದ ಹಾಗೂ ಯಾರ ವಿರುದ್ಧವೂ ಮಾತನಾಡದ ಇವರಿಗೆ ಬೇರೆ ಪಕ್ಷಗಳ ಕೆಲ ನಾಯಕರ ಬೆಂಬಲವೂ ಇರುವುದು ಸ್ಪಷ್ಟವಾಗಿದೆ.
ಓದಿ: ಮಾಜಿ ಅರಣ್ಯ ಸಚಿವ ಎಂ.ಪಿ.ಕೇಶವಮೂರ್ತಿ ವಿಧಿವಶ - M P Keshav Murthy