ಬೆಂಗಳೂರು: ಕೇಸರಿ ಟೀ ಶರ್ಟ್ ಧರಿಸಿ ಕುಟುಂಬಸ್ಥರೊಂದಿಗೆ ಮತ ಚಲಾಯಿಸಲು ಬಂದಿದ್ದ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಿ.ವಿ.ರಾಮನ್ ನಗರದ ಸುದ್ದಗುಂಟೆಪಾಳ್ಯ ಇಂದು ನಡೆಯಿತು.
ಮೋಹನ್ ಎಂಬ ಯುವಕ ಕೇಸರಿ ಶರ್ಟ್ ಧರಿಸಿ ಮತ ಚಲಾಯಿಸಲು ಕುಟುಂಬಸ್ಥರೊಂದಿಗೆ ಬಂದಿದ್ದರು. ಈ ವೇಳೆ ಕೆಲವರು ಕೇಸರಿ ಶರ್ಟ್ ಧರಿಸಿದ ಯುವಕ ಮತಗಟ್ಟೆ ಪ್ರವೇಶಿಸುವುದನ್ನು ಆಕ್ಷೇಪಿಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಂತರ ಈ ವಿಚಾರವಾಗಿ, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಧಾವಿಸಿದ ಬೈಯ್ಯಪ್ಪನಹಳ್ಳಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಇದನ್ನೂ ಓದಿ: ಸೆಂಚುರಿ ದಾಟಿದರೂ ಬತ್ತದ ಉತ್ಸಾಹ: ಮತಗಟ್ಟೆಗೆ ಬಂದು ಮತದಾನದ ಹಕ್ಕು ಚಲಾಯಿಸಿದ ಹಿರಿಯ ನಾಗರಿಕರು - Lok Sabha election 2024