ETV Bharat / state

ಶಿಗ್ಗಾಂವಿ ಉಪಚುನಾವಣೆ: ಯಾಸಿರ್​ ಪಠಾಣ್ ಗೆಲುವು​, ಕಾಂಗ್ರೆಸ್ ಹಣದ ಹೊಳೆ ಹರಿಸಿದೆ ಎಂದ ಭರತ್ ಬೊಮ್ಮಾಯಿ - ASSEMBLY ELECTION 2024

ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ 13,448 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

BJP candidate Bharath Bommai and Congress candidate Yasir Khan Pathan
ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ (ETV Bharat)
author img

By ETV Bharat Karnataka Team

Published : Nov 23, 2024, 12:48 PM IST

ಹಾವೇರಿ : ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ 13,448 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ವಿರುದ್ಧ ಜಯಿಸಿದ್ದಾರೆ.

ಯಾಸೀರ್ ಖಾನ್ ಪಠಾಣ್ 1,00,756 ಮತಗಳನ್ನ ಪಡೆದು ಮುನ್ನಡೆ ಸಾಧಿಸಿದ್ದರೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಗ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು 87,308 ಮತಗಳನ್ನ ಪಡೆದು ಸೋಲನುಭವಿಸಿದ್ದಾರೆ.

ಭರತ್ ಬೊಮ್ಮಾಯಿ (ETV Bharat)

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು, ಕಾಂಗ್ರೆಸ್ ಸರ್ಕಾರ ಹಣದ ಹೊಳೆಯನ್ನ ಹರಿಸಿ ಮುಂದೆ ಬಂದಿದೆ ಎಂದು ಆರೋಪಿಸಿದರು.

ಶಿಗ್ಗಾಂವಿ, ಸವಣೂರು ಕ್ಷೇತ್ರದ ಜನತೆಗೆ ಧನ್ಯವಾದವನ್ನು ಹೇಳಲು ಇಚ್ಛೆಪಡುತ್ತೇನೆ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ. ಶಿಗ್ಗಾಂವಿ, ಸವಣೂರು ಕ್ಷೇತ್ರದ ಜನತೆಗೆ ಒಳಿತಾಗಲಿ, ಅಭಿವೃದ್ಧಿ ಕೆಲಸಗಳು ಮುಂದುವರೆಯಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

ಸೋಲಿನ ಕಾರಣ ಕುರಿತು ಬೂತ್ ಮಟ್ಟದಲ್ಲಿ ಅವಲೋಕನ ಮಾಡುತ್ತೇವೆ, ನಾವು ನಮ್ಮ ಟೀಂ ಕುಳಿತುಕೊಂಡು, ಹಿರಿಯರು, ಯುವಕರನ್ನ ಕರೆದುಕೊಂಡು ವಿಶ್ಲೇಷಣೆ ಮಾಡುತ್ತೇವೆ ಎಂದು ಹೇಳಿದರು.

Election commission of india
ಶಿಗ್ಗಾಂವಿ ಉಪಚುನಾವಣೆಯಲ್ಲಿನ ಗೆಲುವಿನ ಪಟ್ಟಿ (Election commission of india)

ಯಾರಿಗೆ ಎಷ್ಟು ಮತ?

ಯಾಸೀರ್ ಖಾನ್ ಪಠಾಣ್ (ಕಾಂಗ್ರೆಸ್) - 100756 ಮತ

ಭರತ್ ಬೊಮ್ಮಾಯಿ (ಬಿಜೆಪಿ) – 87,308

ರವಿ ಕೃಷ್ಣಾ ರೆಡ್ಡಿ (ಕೆಆರ್​​ಎಸ್) – 1876

ಖಾಜಾಮೊನುದ್ದಿನ ಗುಡಿಗೇರಿ (ಸೋಶಿಲಿಸ್ಟ್ ಪಾರ್ಟಿ) – 664

ಸಾತಪ್ಪ ದೇಸಾಯಿ (ಪಕ್ಷೇತರ) - 463

ಎಸ್ ಎಸ್ ಪಾಟೀಲ್ (ಪಕ್ಷೇತರ) – 184

ಡಾ. ಜಿಎಚ್ ಇಬ್ರಾಪುರ್ (ಪಕ್ಷೇತರ) – 89

ಸಿದ್ದಪ್ಪ ಹೊಸಹಳ್ಳಿ (ಪಕ್ಷೇತರ) – 80

ನೋಟಾ ಮತಗಳು – 834

ಇದನ್ನೂ ಓದಿ: ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪಚುನಾವಣೆ: ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ, ಎನ್​ಡಿಎಗೆ ಮುಖಭಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.