ETV Bharat / state

ಮಂಗಳೂರಿನಲ್ಲಿ ಹುಲಿವೇಷ ಕುಣಿತದ ಅಬ್ಬರ; 'ಮಾರ್ನೆಮಿಯ ಪಿಲಿ'ಗೆ ಇದೀಗ ಸ್ಪರ್ಧೆಯ ಟಚ್

ದಕ್ಷಿಣ ಕನ್ನಡದಲ್ಲಿ ನವರಾತ್ರಿ ಎಂದರೆ ನಾನಾ ವೇಷಗಳ ಸೊಬಗನ್ನು ನೋಡಬಹುದು. ಇದರಲ್ಲಿ ಹುಲಿ ವೇಷ ಕುಣಿತ ಹೆಚ್ಚು ಪ್ರಸಿದ್ಧ.

tiger-dance
ಮಾರ್ನೆಮಿಯ ಪಿಲಿ ಡ್ಯಾನ್ಸ್‌ (ETV Bharat)
author img

By ETV Bharat Karnataka Team

Published : Oct 11, 2024, 4:07 PM IST

ಮಂಗಳೂರು(ದಕ್ಷಿಣ ಕನ್ನಡ): ನವರಾತ್ರಿ ಬಂತೆಂದರೆ ಸಾಕು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ವೇಷಗಳು ಗಮನ ಸೆಳೆಯುತ್ತವೆ. ಕರಾವಳಿಯಲ್ಲಿ ನವರಾತ್ರಿ ಉತ್ಸವವನ್ನು 'ಮಾರ್ನೆಮಿ' ಎಂದು ಕರೆಯುತ್ತಾರೆ. ಈ ಮಾರ್ನೆಮಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆಮೂಲೆಯಲ್ಲಿ ಹುಲಿ ವೇಷದ ನರ್ತನಗಳು ಹಬ್ಬಕ್ಕೆ ಮೆರುಗು ನೀಡುತ್ತವೆ. ಕಳೆದೊಂದು ದಶಕದಿಂದ ಹುಲಿವೇಷ ಕುಣಿತಕ್ಕೆ ಸ್ಪರ್ಧೆಯ ಸ್ಪರ್ಶವೂ ಸಿಕ್ಕಿದೆ.

ನವರಾತ್ರಿ ಆಚರಣೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವರಾತ್ರಿ ಎಂದರೆ ಹುಲಿ ವೇಷ ಸೇರಿದಂತೆ ನಾನಾ ವೇಷಗಳ ಹಬ್ಬವೇ ಕಾಣಿಸುತ್ತದೆ. ಇದರಲ್ಲಿ ಹುಲಿ ವೇಷ ಕುಣಿತ ಹೆಚ್ಚು ಪ್ರಸಿದ್ದಿಯಾಗಿದೆ.

ಮಾರ್ನೆಮಿಯಲ್ಲಿ ಜಿಲ್ಲೆಯ ಯಾವ ಬೀದಿ ನೋಡಿದರೂ ಅಲ್ಲೊಂದು ವೇಷಗಳು ಕಾಣಸಿಗುತ್ತದೆ. ಇವುಗಳಲ್ಲಿ ವಿಶೇಷ ಆಕರ್ಷಣೆ ಇರುವುದು ಹುಲಿ ವೇಷಕ್ಕೆ. ಹುಲಿ ವೇಷ ಕುಣಿತ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರನ್ನೂ ಆಕರ್ಷಿಸುತ್ತದೆ.

ಜಿಲ್ಲೆಯಲ್ಲಿ ನೂರಾರು ಹುಲಿ ವೇಷ ತಂಡಗಳಿವೆ. ಹುಲಿ ವೇಷದ ತಂಡದಲ್ಲಿ 15ಕ್ಕೂ ಅಧಿಕ ಹುಲಿವೇಷಧಾರಿಗಳು ಸೇರಿದಂತೆ 60 ಮಂದಿ ಸದಸ್ಯರಿರುತ್ತಾರೆ. ಈ ತಂಡಗಳನ್ನು ಪ್ರಭಾವಿ ವ್ಯಕ್ತಿಯೊಬ್ಬರು ನಡೆಸುತ್ತಾರೆ.

ಮಂಗಳೂರಿನಲ್ಲಿ 'ಮಾರ್ನೆಮಿಯ ಪಿಲಿ' (ETV Bharat)

ನವರಾತ್ರಿ ಮುಗಿಯುವವರೆಗೂ ಬಣ್ಣ ತೆಗೆಯುವುದಿಲ್ಲ: ತಂಡದಲ್ಲಿರುವ ಸದಸ್ಯರು ನವರಾತ್ರಿಗೆ ಹುಲಿ ವೇಷವನ್ನು ಹಾಕಿ 9 ದಿನಗಳ ಕಾಲ ಜಿಲ್ಲೆಯ ಜನರಿಗೆ ಮನರಂಜನೆ ನೀಡುತ್ತಾರೆ. ಮೊದಲ ದಿನ ಬಣ್ಣ ಹಚ್ಚುವ ವೇಷಧಾರಿಗಳು ನವರಾತ್ರಿ ಮುಗಿಯುವವರೆಗೂ ಬಣ್ಣ ಕಳಚುವುದಿಲ್ಲ. ಧಾರ್ಮಿಕ ನಂಬುಗೆಯೊಂದಿಗೆ ಹಾಕುವ ಈ ಬಣ್ಣವನ್ನು ನವರಾತ್ರಿ ಕೊನೆಯ ದಿನದ ಬಳಿಕ ತೆಗೆಯುವುದು ವಾಡಿಕೆ.

ಹುಲಿ ವೇಷದ ತಂಡಗಳು ಹುಲಿ ವೇಷವನ್ನು ಮೈಗೆ ಬಳಿದು ತಾಸೆ, ಡೋಲು, ವಾದ್ಯ ನಿನಾದಗಳೊಂದಿಗೆ ಮನೆ ಮನೆಗೆ ಹೋಗಿ ಕುಣಿಯುತ್ತಾರೆ. ನವರಾತ್ರಿ ಆರಂಭದಿಂದ ಕೊನೆಯ ದಿನದವರೆಗೆ ಬೆಳಿಗ್ಗೆಯಿಂದ ರಾತ್ರಿ 11- 12 ಗಂಟೆಯವರೆಗೆ ಮನೆ ಮನೆಗೆ ಹೋಗಿ ಕುಣಿಯುತ್ತಾರೆ. ಅಬ್ಬರದ ಕುಣಿತವನ್ನು ಪ್ರತಿ ಮನೆಯಲ್ಲಿ ಮಾಡಿ ಮನರಂಜಿಸುವ ತಂಡಗಳು ಆಯಾ ಮನೆಯವರು ನೀಡುವ ಸಂಭಾವನೆಯನ್ನು ಪಡೆದುಕೊಂಡು ಹೋಗುತ್ತಾರೆ.

ಹುಲಿ ವೇಷ ಕುಣಿತದ ಹಿಂದೆ ದೇವಿ ಆರಾಧನೆಯ ಪರಿಕಲ್ಪನೆಯಿದೆ. ಧಾರ್ಮಿಕ ನಂಬುಗೆ, ಹರಕೆ ಮೊದಲಾದ ಕಾರಣದಿಂದ ಕುಣಿತ ನಡೆಸುತ್ತಾರೆ. ಹುಲಿ ವೇಷ ಕುಣಿತ ತಂಡ ಮನೆ ಮನೆಗೆ ಬರುತ್ತಿದ್ದರೆ ಮನೆಯೊಳಗೆ ಅವಿತು ಕುಳಿತುಕೊಳ್ಳುವ ಮಕ್ಕಳು ಒಂದೆಡೆ ಇದ್ದರೆ, ಹುಲಿ ವೇಷದ ತಂಡದೊಂದಿಗೆ ಮನೆಮನೆಗೆ ಹೋಗುವ ಮಕ್ಕಳು ಇದ್ದಾರೆ.

ಇನ್ನೊಂದು ವಿಶೇಷತೆಯೆಂದರೆ, ಸಣ್ಣ ಮಕ್ಕಳು ಹುಲಿ ವೇಷ ಹಾಕಿ ಮನರಂಜಿಸುತ್ತಾರೆ. ಹುಲಿ ವೇಷಗಳೆಂದರೆ ಅದು ಪುರುಷರು ಹಾಕುವ ಕಲೆ ಎಂದೇ ಬಿಂಬಿತವಾಗಿತ್ತು. ಇತ್ತೀಚೆಗೆ ಹುಲಿ ವೇಷದಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಹಿಳೆಯರು ಹುಲಿ ವೇಷದ ನರ್ತನದಲ್ಲಿ ಹೆಜ್ಜೆ ಹಾಕಿ ಸೈ ಎನಿಸಿದ್ದಾರೆ.

ಹುಲಿ ವೇಷ ಕುಣಿತ ಕಾಟಾಚಾರದ ಕುಣಿತವಲ್ಲ. ಹುಲಿಗಳ ವೇಷಧಾರಿಗಳು ಕ್ರಮಬದ್ಧವಾಗಿ ಹೆಜ್ಜೆ ಹಾಕುವುದು, ಆ ಮೂಲಕ ಎಲ್ಲರ ಗಮನ ಸೆಳೆಯುತ್ತದೆ. ನರ್ತನದಲ್ಲಿ ಸೈ ಎನಿಸಿಕೊಂಡ ಹಿರಿಯರಿಗೆ ವಿಶೇಷ ಗೌರವ ಇದೆ. ಹೊಸತಾಗಿ ಹುಲಿವೇಷಧಾರಿಗಳಾಗಿ ಬರುವವರು ತರಬೇತಿ ಪಡೆದುಕೊಳ್ಳುತ್ತಾರೆ.

ಹುಲಿ ವೇಷಗಳ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಡಿ ವೇಷ, ವ್ಯಕ್ತಿತ್ವವನ್ನು ಬಿಂಬಿಸುವ ವೇಷಗಳು ಗಮನ ಸೆಳೆಯುತ್ತಿದೆ. ದಶಕಗಳ ಹಿಂದೆ ಕೊರಗ ಸಮುದಾಯವನ್ನು ಬಿಂಬಿಸುವ ಕೊರಗ ವೇಷ ( ಮೈಗೆ ಕರಿ‌ಬಣ್ಣ ಬಳಿದು), ದೈವಗಳ ವೇಷ ಇದ್ದು, ಅವುಗಳನ್ನು ನಿಷೇಧಿಸಲಾಗಿದೆ.

ನವರಾತ್ರಿ ಮೊದಲ ದಿನ ದೇವರ ಮುಂದೆ ಪ್ರಾರ್ಥಿಸಿ ಹಾಕಲಾಗುವ ವೇಷವನ್ನು ನವರಾತ್ರಿ ಕೊನೆಯ ದಿನದವರೆಗೆ ಉಳಿಸಿಕೊಳ್ಳಲಾಗುತ್ತದೆ. ಧಾರ್ಮಿಕ ನಂಬುಗೆಯೊಂದಿಗೆ ಹಾಕಲಾಗುವ ವೇಷಗಳನ್ನು ನವರಾತ್ರಿ ಕಳೆದು ದೇವಾಲಯಗಳಲ್ಲಿ ತೀರ್ಥ ಪಡೆದು, ಆ ಬಳಿಕ ಜಳಕ ಮಾಡಿ ತೆಗೆಯಲಾಗುತ್ತದೆ. ಇದು ಹಿಂದಿನಿಂದ ಬಂದ ಕ್ರಮವಾಗಿದೆ.

ಈ ಕುರಿತು ಹಿರಿಯ ತುಳು ವಿದ್ವಾಂಸ ಕೆ.ಕೆ.ಪೇಜಾವರ ಮಾತನಾಡಿ, "ಹುಲಿವೇಷ ಕುಣಿತಗಳು ಮೊದಲು ದೇವಸ್ಥಾನದಲ್ಲಿ ಆರಂಭವಾಯಿತು. ಆರೋಗ್ಯ ಸಮಸ್ಯೆ ಕಾಡಿದಾಗ ದೇವಿಗೆ ಹುಲಿವೇಷ ಕುಣಿತ ಮಾಡುವ ಹರಕೆ ಹೊತ್ತುಕೊಂಡು ಹಲವರು ಹುಲಿವೇಷ ಕುಣಿತ ಆರಂಭಿಸಿದರು. 1996ರಲ್ಲಿ ಹುಲಿವೇಷ ಕುಣಿತ ಸ್ಪರ್ಧೆ ಆರಂಭವಾಯಿತಾದರೂ ತಂಡಗಳ ನಡುವೆ ದ್ವೇಷಗಳು ಏರ್ಪಟ್ಟು ಮೂರು ವರ್ಷದ ಬಳಿಕ ನಿಂತು ಹೋಯಿತು. ಆ ಬಳಿಕ ಮನೆ ಮನೆಗಳಿಗೆ ಮಾತ್ರ ಹುಲಿ ವೇಷ ಕುಣಿತ ಹೋಗುತ್ತಿತ್ತು. 2019ರಲ್ಲಿ ಮಿಥುನ್ ರೈ ನೇತೃತ್ವದಲ್ಲಿ ಹುಲಿವೇಷ ಕುಣಿತ ಆರಂಭವಾದರೆ, ಮೂರು ವರ್ಷದಿಂದ ವೇದವ್ಯಾಸ ಕಾಮತ್, ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯುತ್ತಿದೆ. ಹಿಂದಿನ ಹುಲಿವೇಷ ಕುಣಿತಕ್ಕೂ, ಈಗಿನ ಹುಲಿವೇಷ ಕುಣಿತಕ್ಕೂ ಬಹಳಷ್ಟು ಅಂತರವಿದೆ" ಎಂದಿದ್ದಾರೆ.

ಹುಲಿ ವೇಷದ ಕುಣಿತ ಸ್ಪರ್ಧೆ: ಜಿಲ್ಲೆಯಲ್ಲಿ ಪ್ರಸಿದ್ಧವಾದ ಹುಲಿ ವೇಷವನ್ನು ಇತ್ತೀಚೆಗೆ ಸ್ಪರ್ಧೆಯ ಮೂಲಕ ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ಹುಲಿ ವೇಷ ಸ್ಪರ್ಧೆ 1996ರಲ್ಲಿ ಆರಂಭವಾಗಿತ್ತು. ಆದರೆ ಮೂರು ವರ್ಷದಲ್ಲಿ‌ ಅದು ನಿಂತು ಹೋಗಿತ್ತು. ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಪಿಲಿನಲಿಕೆ ಪಂಥ ಎಂದು ಹಲವು ವರ್ಷಗಳಿಂದ ನಡೆಯುತ್ತಿದ್ದರೆ, ಮೂರು ವರ್ಷದಿಂದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ 'ಕುಡ್ಲದ ಪಿಲಿ ಪರ್ಬ' ಎಂಬ ಸ್ಪರ್ಧೆ ನಡೆಯುತ್ತಿದೆ. ಪುತ್ತೂರು, ಉಡುಪಿ, ಕೇರಳದ ಮಂಜೇಶ್ವರ ಮೊದಲಾದ ಭಾಗಗಳಲ್ಲಿಯೂ ಹುಲಿ ವೇಷದ ಕುಣಿತ ಸ್ಪರ್ಧೆ ನಡೆಯುತ್ತಿದೆ.

ಈ ಸ್ಪರ್ಧೆಗಳಲ್ಲಿ ಹತ್ತಾರು ಹುಲಿವೇಷದ ತಂಡಗಳು ಭಾಗವಹಿಸಿ ಹುಲಿ ವೇಷದ ನರ್ತನ ಮಾಡುತ್ತವೆ. ತಾಸೆ, ಡೋಲು, ವಾದ್ಯ ನಿನಾದಗಳೊಂದಿಗೆ ಹುಲಿ ವೇಷದ ಕುಣಿತದ ಘರ್ಜನೆ ಎಲ್ಲರನ್ನು ಆಕರ್ಷಿಸುತ್ತಿದೆ. ಈ ಸ್ಪರ್ಧೆಗಳಲ್ಲಿ ವಿಶೇಷ ‌ಮರಿ ಹುಲಿ ಪ್ರಶಸ್ತಿ, ಕಪ್ಪು ಹುಲಿ, ತಾಸೆ ತಂಡ, ಮುಡಿ ಬಿಸಾಡುವುದು, ಬಣ್ಣಗಾರಿಕೆ ವಿಭಾಗದಲ್ಲಿ ಸ್ಪರ್ಧೆಗಳು ಜರುಗುತ್ತವೆ. ನಗರದಲ್ಲಿ ಹುಲಿವೇಷ ಕುಣಿತ ಪ್ರತಿಷ್ಠೆಯಾಗಿದೆ.

ಆಯ್ದ ಮನೆಗೆ ತೆರಳಿ ಹುಲಿ ವೇಷದ ನರ್ತನ: ಹಿಂದೆಲ್ಲ ಹುಲಿವೇಷ ತಂಡಗಳು ಎಲ್ಲಾ ಮನೆಗೆ ತೆರಳಿ ಕುಣಿದು ಅವರು ಪ್ರೀತ್ಯಾರ್ಥ ನೀಡುವ ಸಂಭಾವನೆಯನ್ನು ಪಡೆಯುತ್ತಿದ್ದರೆ, ಇತ್ತೀಚೆಗೆ ಈ ರೀತಿಯ ವ್ಯವಸ್ಥೆ ತೀರಾ ಕಡಿಮೆಯಾಗಿದೆ. ಈಚೆಗಿನ ವರ್ಷಗಳಲ್ಲಿ ಕೆಲವು ಹುಲಿ ವೇಷದ ತಂಡಗಳು ಆಯ್ದ ಮನೆಗೆ ಮಾತ್ರ ತೆರಳಿ ಹುಲಿ ವೇಷದ ನರ್ತನ ಮಾಡುತ್ತವೆ. ಈ ಮೂಲಕ ಪ್ರಭಾವಿ ತಂಡಗಳ ನರ್ತನ ನೋಡುವ ಭಾಗ್ಯ ಹೆಚ್ಚಿನವರಿಗೆ ದೊರೆಯುತ್ತಿಲ್ಲ ಎಂಬ ನಿರಾಶೆ ಕೂಡ ಹಲವರಲ್ಲಿ ಮನೆ ಮಾಡಿದೆ.

ಇದನ್ನೂ ಓದಿ: ನವರಾತ್ರಿ ವಿಶೇಷ: ಭಕ್ತರ ಸೆಳೆಯುತ್ತಿದೆ ಮಂಗಳೂರಿನ ಅಧಿದೇವತೆ ಮಂಗಳಾದೇವಿ ದೇವಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.