ETV Bharat / state

ಬೆಂಗಳೂರಲ್ಲಿ ಬಿಐಎಸ್ ಅಧಿಕಾರಿಗಳ ಸೋಗಿನಲ್ಲಿ ನಕಲಿ ದಾಳಿ: ಸಿನಿಮೀಯ ಮಾದರಿಯಲ್ಲಿ ಆರೋಪಿಗಳ ಬಂಧನ

ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದಂಗಡಿಯಿಂದ ಚಿನ್ನಾಭರಣ ದೋಚಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ಕೆ.ಆರ್. ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

arrested accused
ಬಂಧಿತ ಆರೋಪಿಗಳು
author img

By ETV Bharat Karnataka Team

Published : Jan 29, 2024, 2:39 PM IST

Updated : Jan 29, 2024, 2:53 PM IST

ಬೆಂಗಳೂರು : ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಅಧಿಕಾರಿಗಳ ಸೋಗಿನಲ್ಲಿ ಜ್ಯುವೆಲ್ಲರ್ಸ್ ಶಾಪ್​ ದೋಚಿ ಪರಾರಿಯಾಗಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಕೆ.ಆರ್.ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಂಪತ್ ಕುಮಾರ್, ಜೊಶಿ ಥಾಮಸ್, ಅವಿನಾಶ್ ಹಾಗೂ ಸಂದೀಪ್ ಬಂಧಿತ ಆರೋಪಿಗಳು.

ಜನವರಿ 27ರಂದು ಕಾರಿನಲ್ಲಿ ಕೆ.ಆರ್.ಪುರಂನ ಮಹಾಲಕ್ಷ್ಮಿ ಜ್ಯುವೆಲರ್ಸ್ ಶಾಪ್​ಗೆ ಬಂದಿದ್ದ ಆರೋಪಿಗಳು, ತಾವು 'ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಧಿಕಾರಿಗಳು, ಬೆಂಗಳೂರಿನ ಹಲವು ಚಿನ್ನದಂಗಡಿಗಳ ಮೇಲೆ ದಾಳಿ ಮಾಡಲಾಗಿದೆ ಅದರಲ್ಲಿ‌ ನಿಮ್ಮದೂ ಒಂದು. ಹಾಲ್ ಮಾರ್ಕ್ ಇಲ್ಲದೆ ಅಕ್ರಮವಾಗಿ ನೀವು ಚಿನ್ನ ಮಾರಾಟ ಮಾಡುತ್ತಿದ್ದೀರಿ ಎಂಬ ಮಾಹಿತಿ ನಮಗೆ ದೊರೆತಿದೆ. ಹೀಗಾಗಿ ದಾಳಿ ಮಾಡಿದ್ದೇವೆ' ಎಂದಿದ್ದರು.

bng
ಚಿನ್ನದ ಅಂಗಡಿ ಮತ್ತು ಆರೋಪಿಗಳು ಪರಾರಿಯಾಗಲು ಬಳಸಿದ್ದ ಕಾರು

ಸುಮಾರು 40 ನಿಮಿಷ ಅಂಗಡಿಯಲ್ಲಿ ಶೋಧ ನಡೆಸಿದಂತೆ ಮಾಡಿ ಬಳಿಕ 80 ಲಕ್ಷ ರೂ. ಮೌಲ್ಯದ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡು, ಬಳಿಕ ಅಂಗಡಿ ಮಾಲೀಕನ ಕೈಗೆ ನಕಲಿ ನೋಟಿಸ್ ನೀಡಿ, ಮುಂದಿನ ವಾರ ತಮಿಳುನಾಡಿನ ಬಿಐಎಸ್ ಕಚೇರಿಗೆ ಬರುವಂತೆ ಹೇಳಿ ತೆರಳಿದ್ದರು. ಆದರೆ ಹೊರಡುವ ಮುನ್ನ ಚಿನ್ನದ ಅಂಗಡಿಯ ಸಿಸಿಟಿವಿ ಡಿವಿಆರ್​ನ್ನು ಆರೋಪಿಗಳು ಪಡೆದುಕೊಂಡಿದ್ದರು.

ಇದರಿಂದ ಅನುಮಾನಗೊಂಡ ಚಿನ್ನದ ಅಂಗಡಿಯ ಕೆಲ ಸಿಬ್ಬಂದಿ ನಕಲಿ ಅಧಿಕಾರಿಗಳನ್ನು ಹಿಂಬಾಲಿಸಿದ್ದಾರೆ. ಇತ್ತ ಅಂಗಡಿ ಮಾಲೀಕ ಸಹ ಅನುಮಾನಗೊಂಡು ಕೆಆರ್​ಪುರಂ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹಿಂಬಾಲಿಸುತ್ತಿರುವುದನ್ನು ತಿಳಿದ ಆರೋಪಿಗಳು ತಪ್ಪಿಸಿಕೊಳ್ಳುವ ಭರದಲ್ಲಿ ಟಿ.ಸಿ ಪಾಳ್ಯ ಜಂಕ್ಷನ್ ಬಳಿ ಸರಣಿ ಅಪಘಾತವೆಸಗಿದ್ದಾರೆ. ಆದರೆ ಸಿನಿಮೀಯ ಮಾದರಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರ ಪೈಕಿ ಸಂಪತ್ ಈ ಹಿಂದೆ ಮಂಡ್ಯದಲ್ಲಿ ಕಳ್ಳತನ ಪ್ರಕರಣದ ಆರೋಪಿಯಾಗಿದ್ದು, ಸೆರೆವಾಸ ಅನುಭವಿಸಿ ಬಿಡುಗಡೆಯಾಗಿದ್ದ. ಬಳಿಕ ತಮಿಳುನಾಡು ಮೂಲದ ವ್ಯಕ್ತಿಯೊಬ್ಬನ ಸೂಚನೆಯಂತೆ ಈ ಕೃತ್ಯಕ್ಕೆ ಕೈ ಹಾಕಿದ್ದ ಎಂದು ತಿಳಿದು ಬಂದಿದೆ. ಆರೋಪಿಗಳ ಬಂಧನವಾಗುತ್ತಿದ್ದಂತೆ ತಮಿಳುನಾಡು ಮೂಲದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ರೈತರಿಗೆ ವಂಚನೆ ಆರೋಪ; ಬಿಗ್ ಬಾಸ್ ರನ್ನರ್​ ಅಪ್​​ ಡ್ರೋನ್​ ಪ್ರತಾಪ್ ವಿರುದ್ಧ ದೂರು

Last Updated : Jan 29, 2024, 2:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.