ETV Bharat / state

ಮುಂಗಾರಿಗೆ ಮೈದುಂಬಿದ ಅರ್ಬಿ ಜಲಪಾತ: ಹಾಲ್ನೊರೆಯ ಜಲಧಾರೆಗೆ ಮನಸೋತ ಪ್ರವಾಸಿಗರು - Arbi Falls - ARBI FALLS

ಮಳೆ ಬಂದಾಗ ಮಾತ್ರ ಮೂಡಿಕೊಳ್ಳುವ ಮಣಿಪಾಲದ ಅರ್ಬಿ ಜಲಪಾತ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ. ಪ್ರತಿದಿನವೂ ಸಾವಿರಾರು ಜನ ಪ್ರವಾಸಿಗರು ಈ ಜಲಪಾತ ನೋಡಲು ಭೇಟಿ ಕೊಡುತ್ತಿದ್ದಾರೆ.

Arbi Falls
ಅರ್ಬಿ ಜಲಪಾತ (ETV Bharat)
author img

By ETV Bharat Karnataka Team

Published : Jul 30, 2024, 7:49 PM IST

Updated : Jul 30, 2024, 8:13 PM IST

ಪ್ರವಾಸಿಗರಾದ ಅಶ್ವಿನಿ ಮಾತನಾಡಿದರು (ETV Bharat)

ಉಡುಪಿ : ಮಳೆಗಾಲ ಬಂತೆಂದರೆ ಸಾಮಾನ್ಯ ನೀರಿನ ಹರಿವಿಗೂ ಕೂಡ ಮೈದುಂಬಿ ಹರಿಯುವ ಜಲಪಾತಗಳು ಜಿಲ್ಲೆಯಲ್ಲಿವೆ. ಜಿಲ್ಲೆಯ ಮಣಿಪಾಲದಲ್ಲಿ ಇಂತಹ ಸಣ್ಣಪುಟ್ಟ ಕಿರು ಜಲಪಾತಗಳು ಸಾಕಷ್ಟಿವೆ. ಯಾವುದೇ ಅಪಾಯವಿಲ್ಲದೆ ಭೂಮಿಯ ಮೇಲೆ ಹರಿಯುವ ಈ ಜಲಪಾತಗಳಲ್ಲಿ ಮೋಜು ಮಸ್ತಿ ಮಾಡುವುದೇ ಒಂದು ಅದ್ಭುತ ಅನುಭವ.

ಮಳೆ ಬಂದಾಗ ಮಾತ್ರ ಮೂಡಿಕೊಳ್ಳುತ್ತದೆ ಈ ಜಲಪಾತ : ಮಳೆ ಬಂದಾಗ ಮಾತ್ರ ಮೂಡಿಕೊಳ್ಳುವ ಮಣಿಪಾಲದ ಅರ್ಬಿ ಜಲಪಾತ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಈ ಜಲಪಾತ ನೋಡಲು ಭೇಟಿ ಕೊಡುತ್ತಿದ್ದಾರೆ.

ದಟ್ಟ ಕಾನನದ ನಡುವೆ ಇಳಿಜಾರಿನಲ್ಲಿ ಮೈದುಂಬಿ ಹರಿಯುತ್ತಿರುವ ಅರ್ಬಿ ಜಲಪಾತವನ್ನು ನೋಡುವುದೇ ಕಣ್ಣುಗಳಿಗೆ ಸೊಗಸು. ಅದರಲ್ಲೂ ತಳುಕುತ್ತಾ ಬಳುಕುತ್ತಾ ಕಲ್ಲಿನಿಂದ ಕಲ್ಲಿಗೆ ಹಂತ ಹಂತವಾಗಿ ಹರಿಯುವಾಗ ಕ್ಷೀರಧಾರೆಯೇ ಹರಿದು ಬಂದಂತಹ ಅನುಭವ. ಹಲವಾರು ಕವಲುಗಳಾಗಿ ಶುಭ್ರ ನೀರಿನಿಂದ ಹರಿಯುವ ಅರ್ಬಿ ಜಲಪಾತವನ್ನು ನೋಡಲು ಪ್ರವಾಸಿಗರ ದಂಡೇ ಇಲ್ಲಿಗೆ ಬರುತ್ತಿದೆ.

ಮಣಿಪಾಲದ ಮಹಾನಗರದಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ : ಸತತ ಮಳೆಯ ಹಿನ್ನೆಲೆಯಲ್ಲಿ ಜಲಪಾತ ಮೈದುಂಬಿ ಹರಿಯುತ್ತಿದೆ. ಸಣ್ಣ ತೊರೆಗಳಿಂದ ಸೃಷ್ಠಿಯಾಗಿರುವ ಈ ಜಲಪಾತವು ಅಪಾಯಕಾರಿಯಲ್ಲದಿದ್ದರೂ ಜಾರುವ ಕಲ್ಲುಗಳ ಮೇಲೆ ನಡೆದಾಡುವಾಗ ಜಾಗ್ರತೆ ವಹಿಸುವುದು ಒಳಿತು.

ಅರ್ಬಿ ಜಲಪಾತ ಇರುವುದು ಉಡುಪಿ ಜಿಲ್ಲೆಯ 80ನೇ ಬಡಗಬೆಟ್ಟು ಗ್ರಾಮದ ಅರ್ಬಿ ಕೋಡಿ ಎಂಬಲ್ಲಿ. ಮಣಿಪಾಲದಿಂದ ಅಲೆವೂರು ಮಾರ್ಗವಾಗಿ 3 ಕಿಮೀ ಸಾಗಿದರೆ ದಶರಥ ಎಂಬ ಊರು ಸಿಗುತ್ತದೆ. ಅಲ್ಲಿಂದ ಪೂರ್ವಾಭಿಮುಖವಾಗಿ ವೈಷ್ಣವಿ ದುರ್ಗಾ ದೇವಸ್ಥಾನದ ಮಾರ್ಗವಾಗಿ ಒಂದು ಕಿಲೋ ಮೀಟರ್ ಸಾಗಿದರೆ, ದೇವಸ್ಥಾನದ ಪಕ್ಕದಲ್ಲೇ ಅರ್ಬಿ ಜಲಪಾತ ನಮ್ಮನ್ನು ಕೈಬೀಸಿ ಕರೆಯುತ್ತದೆ.

ಮಣಿಪಾಲ ಮಹಾನಗರದಲ್ಲಿ ಜನಸಂಚಾರದಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ಕೆಲಕಾಲ ಕಳೆಯುವುದಕ್ಕೆ ಈ ಜಲಪಾತ ಯೋಗ್ಯ ಸ್ಥಳ. ಸದಾ ಕೆಲಸದ ಜಂಜಾಟದಿಂದ ಕೂಡಿರುವ ಮನಸ್ಸುಗಳಿಗೆ ನಿಸರ್ಗದ ನಡುವಿರುವ ಜಲಧಾರೆ ಮನಸ್ಸಿಗೆ ಮುದ ನೀಡುವುದರಲ್ಲಿ ಎರಡು ಮಾತಿಲ್ಲ. ಮಳೆ ಬಂದಾಗ ಮಾತ್ರ ಮೂಡಿಕೊಳ್ಳುವ ಮಣಿಪಾಲದ ಅರ್ಬಿ ಜಲಪಾತ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.

'ಪ್ರತಿದಿನ ಅನೇಕ ಜನ ಪ್ರವಾಸಿಗರು ಈ ಜಲಪಾತ ನೋಡಲು ಭೇಟಿ ಕೊಡುತ್ತಿದ್ದಾರೆ. ಕಲ್ಲಿನಿಂದ ಕಲ್ಲಿಗೆ ಹಂತ ಹಂತವಾಗಿ ನೀರು ಹರಿಯುವಾಗ ಕ್ಷೀರಧಾರೆಯೇ ಹರಿದು ಬಂದಂತಹ ಅನುಭವವಾಗುತ್ತದೆ' ಎಂದು ಪ್ರವಾಸಿಗರಾದ ಕಾಪುವಿನ ಅಶ್ವಿನಿಯವರು ತಿಳಿಸಿದ್ದಾರೆ.

ಇದನ್ನೂ ಓದಿ : ಕಾನನದ ನಡುವೆ ಜುಳು ಜುಳು ಜಲಪಾತ; ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ 'ಮಿಂಚೋಳಿ ಫಾಲ್ಸ್' - Mincholi FALLS

Last Updated : Jul 30, 2024, 8:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.