ಬೆಂಗಳೂರು: ಕರ್ನಾಟಕ ಪ್ರದೇಶ ಜನತಾದಳಕ್ಕೆ (ಜಾತ್ಯತೀತ) ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಿವೃತ್ತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಜೆಡಿಎಸ್‌ಗೆ ಸೇರ್ಪಡೆಯಾದರು.
ಪಕ್ಷ ಸೇರಿದ ಜ್ಯೋತಿ ಪ್ರಕಾಶ್ ಮಿರ್ಜಿ ಅವರನ್ನು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಇತರ ನಾಯಕರು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಇದರ ಜೊತೆಗೆ ನೂತನ ಪದಾಧಿಕಾರಿಗಳನ್ನು ನೇಮಿಸಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಮಿರ್ಜಿ ಅವರಿಗೆ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಹಿರಿಯ ಉಪಾಧ್ಯಕ್ಷ ಹುದ್ದೆ ಕೊಡಲಾಗಿದೆ.
![ಜೆಡಿಎಸ್ ನೂತನ ಪದಾಧಿಕಾರಿಗಳ ನೇಮಕ ಸಭೆ](https://etvbharatimages.akamaized.net/etvbharat/prod-images/05-02-2024/kn-bng-08-appointment-new-office-bearers-of-jds-script-7208083_05022024204213_0502f_1707145933_339.jpg)
ಜೆಡಿಎಸ್ ನೂತನ ಪದಾಧಿಕಾರಿಗಳ ಪಟ್ಟಿ:
ಕಾರ್ಯಾಧ್ಯಕ್ಷರು: ಅಲ್ಕೋಡ್ ಹನುಮಂತಪ್ಪ, ಸಿ.ಬಿ.ಸುರೇಶ್ ಬಾಬು, ಭೀಮಗೌಡ ಬಸನಗೌಡ ಪಾಟೀಲ್ (ರಾಜೂಗೌಡ), ಸಾ.ರಾ.ಮಹೇಶ್, ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ ನರೆಬೋ.
ಹಿರಿಯ ಉಪಾಧ್ಯಕ್ಷರು: ಡಾ.ಶ್ರೀನಿವಾಸ ಮೂರ್ತಿ, ರವೀಂದ್ರ ಶ್ರೀಕಂಠಯ್ಯ, ಸೋಮಣ್ಣ ಗೌಡ ಪಾಟೀಲ್, ಜ್ಯೋತಿ ಪ್ರಕಾಶ್ ಮಿರ್ಜಿ
ಉಪಾಧ್ಯಕ್ಷರು: ಕೆ.ಎಂ.ತಿಮ್ಮರಾಯಪ್ಪ, ರಾಜಾ ವೆಂಕಟಪ್ಪ ನಾಯಕ ದೊರೆ, ಕರೆಮ್ಮ ಜಿ. ನಾಯಕ, ಚೌಡರೆಡ್ಡಿ ತೂಪಲ್ಲಿ, ಸುನೀತಾ ಚೌಹಾಣ್, ಕೆ.ಬಿ.ಪ್ರಸನ್ನ ಕುಮಾರ್, ಟಿ.ಎ.ಶರವಣ
ಮಹಾ ಪ್ರಧಾನ ಕಾರ್ಯದರ್ಶಿ: ವೆಂಕಟರಾವ್ ನಾಡಗೌಡ
ಖಜಾಂಚಿ: ಬಿ.ಎನ್.ರವಿಕುಮಾರ್
ಪ್ರಧಾನ ಕಾರ್ಯದರ್ಶಿಗಳು: ಎ.ಪಿ.ರಂಗನಾಥ್, ಆರ್.ಪ್ರಕಾಶ್, ಸಯ್ಯದ್ ರೋಷನ್ ಅಬ್ಬಾಸ್, ರೆಹಮತುಲ್ಲಾ ಖಾನ್, ಸುಧಾಕರ್ ಲಾಲ್, ಶಿವಕುಮಾರ ನಾಟೀಕಾರ್, ಶಾರದಾ ಅಪ್ಪಾಜಿಗೌಡ, ರೂತ್ ಮನೋರಮಾ, ಮಲ್ಲೇಶ್ ಬಾಬು, ವೀರಭದ್ರಪ್ಪ ಹಲರವಿ.
ಕಾರ್ಯದರ್ಶಿಗಳು: ಮಹಂತಯ್ಯಮಠ, ಶಂಸಿ ತಬ್ರಾಜ್, ಐಲಿನ್ ಜಾನ್ ಮಠಪತಿ, ಬಿ.ಕಾಂತರಾಜ್, ಡಾ.ವಿಜಯ ಕುಮಾರ್, ಡಾ.ಶೀಲಾ ನಾಯಕ್, ರೋಷನ್ ಬಾವಾಜಿ, ಚಂದ್ರಕಾಂತ್ ಶೇಕಾ, ಕನ್ಯಾಕುಮಾರಿ, ಸಿದ್ದಬಸಪ್ಪ ಯಾದವ್
ಜಿಲ್ಲಾಧ್ಯಕ್ಷರ ನೇಮಕ: ಐದು ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಮಟ್ಟದ ಮೂರು ವಿಭಾಗಗಳಿಗೆ ರಾಜ್ಯಾಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರನ್ನು ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರನ್ನಾಗಿ, ರಶ್ಮಿ ರಾಮೇಗೌಡ ಅವರನ್ನು ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರನ್ನಾಗಿ, ರಾಜು ನಾಯಕ ಅವರನ್ನು ಯುವ ಜನತಾದಳದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಶಿಕ್ಷಕರ ಕ್ಷೇತ್ರದ ಚುನಾವಣೆ ಉಸ್ತುವಾರಿ: ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಆಗಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಕಣದಲ್ಲಿರುವ ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅವರ ಗೆಲುವಿಗೆ ಶ್ರಮಿಸಲು ಮೂವರು ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕ ಇ.ಕೃಷ್ಣಪ್ಪ, ಬೆಂಗಳೂರು ನಗರದ ಮಾಜಿ ಅಧ್ಯಕ್ಷ ಆರ್ ಪ್ರಕಾಶ್ ಅವರಿಗೆ ಈ ಹೊಣೆ ವಹಿಸಲಾಗಿದೆ.
ಸರಣಿ ಸಭೆಗಳು, ಮುಖಂಡರಿಗೆ ಖಡಕ್ ಸೂಚನೆ: ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸರಣಿ ಸಭೆಗಳು ನಡೆದವು. ಮೊದಲು ರಾಜ್ಯ ಕೋರ್ ಕಮಿಟಿ ಸಭೆ ನಡೆದು, ಪಕ್ಷದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಶಿಕ್ಷಕರ ಕ್ಷೇತ್ರ ಹಾಗೂ ಲೋಕಸಭೆ ಚುನಾವಣೆಯ ಉಸ್ತುವಾರಿಗಳ ಹೆಸರುಗಳನ್ನು ಅಂತಿಮಗೊಳಿಸಲಾಯಿತು. ತದನಂತರ ಪದಾಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.
ಇದನ್ನೂ ಓದಿ: ತನ್ನ ತಪ್ಪು ಮುಚ್ಚಿಕೊಳ್ಳಲು ರಾಜ್ಯ ಸರ್ಕಾರದಿಂದ ಪ್ರತಿಭಟನೆಯ ರಾಜಕೀಯ ಸ್ಟಂಟ್: ಬೊಮ್ಮಾಯಿ