ETV Bharat / state

ಪಾವಗಡದಲ್ಲಿ ಮತ್ತೊಂದು ಬೃಹತ್ ಸೋಲಾರ್ ಪಾರ್ಕ್ ಸ್ಥಾಪನೆ: ರೈತರಿಗೂ ಸಿಗಲಿದೆ ಪಾಲುದಾರಿಕೆ - Solar Park

ತುಮಕೂರಿನ ಪಾವಗಡದಲ್ಲಿ ಮತ್ತೊಂದು ಬೃಹತ್ ಸೌರ ವಿದ್ಯುತ್​ ಪಾರ್ಕ್ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ.

another-huge-solar-park-to-build-at-pavagada
ಪಾವಗಡದಲ್ಲಿ ಮತ್ತೊಂದು ಬೃಹತ್ ಸೋಲಾರ್ ಪಾರ್ಕ್ ಸ್ಥಾಪನೆ: ರೈತರಿಗೂ ಸಿಗಲಿದೆ ಪಾಲುದಾರಿಕೆ
author img

By ETV Bharat Karnataka Team

Published : Mar 9, 2024, 9:11 AM IST

ಬೆಂಗಳೂರು: ರಾಜ್ಯದ ವಿದ್ಯುತ್ ಬೇಡಿಕೆ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಲು ನವೀಕರಿಸಬಹುದಾದ ಇಂಧನ ಮೂಲಗಳಿಗೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರ, ಮತ್ತೊಂದು ಬೃಹತ್ ಸೋಲಾರ್ ಪವರ್ ಪಾರ್ಕ್ ಸ್ಥಾಪನೆಗೆ ಮುಂದಾಗಿದೆ. ಪಾವಗಡದಲ್ಲಿಯೇ ರಾಜ್ಯದ ಎರಡನೇ ಸೋಲಾರ್ ಪವರ್ ಪಾರ್ಕ್ ಆರಂಭಕ್ಕೆ ಸಿದ್ಧತೆ ನಡೆದಿದೆ.

ದೇಶದ ಮೊದಲ ಸೋಲಾರ್ ಪವರ್ ಪಾರ್ಕ್ ತಲೆಎತ್ತಿರುವ ಪಾವಗಡದಲ್ಲಿ ಮತ್ತೊಂದು ಬೃಹತ್ ಸೋಲಾರ್ ಪವರ್ ಪಾರ್ಕ್ ಸ್ಥಾಪನೆ ಆಗಲಿದೆ. ಸದ್ಯ ಇರುವ ಸೋಲಾರ್ ಪವರ್ ಪಾರ್ಕ್ 13 ಸಾವಿರ ಎಕರೆ ವ್ಯಾಪ್ತಿಯಲ್ಲಿದ್ದು, 2,050 ಮೆಗಾ ವ್ಯಾಟ್​​ ಸಾಮರ್ಥ್ಯ ಹೊಂದಿದೆ. ಇದು ದೇಶ ಮಾತ್ರವಲ್ಲ, ಜಗತ್ತಿನ ಅತಿದೊಡ್ಡ ಸೋಲಾರ್ ಪವರ್ ಪಾರ್ಕ್ ಆಗಿತ್ತು. ಆದರೆ, ನಂತರ ರಾಜಸ್ಥಾನದ ಭಡ್ಲಾ ಸೋಲಾರ್ ಪಾರ್ಕ್ ಸ್ಥಾಪನೆಯಾಗಿ 2,245 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭಿಸಿದ ನಂತರ, ವಿಶ್ವದ ಎರಡನೇ ಅತಿದೊಡ್ಡ ದ್ಯುತಿವಿದ್ಯುಜ್ಜನಕ ಸೌರ ಪಾರ್ಕ್ ಆಗಿದೆ.

ಇದೇ ಪಾವಗಡದಲ್ಲಿ ಇದೀಗ ಮತ್ತೆ 10 ಸಾವಿರ ಎಕರೆ ಪ್ರದೇಶದಲ್ಲಿ ಮತ್ತೊಂದು ಸೋಲಾರ್ ಪವರ್ ಪಾರ್ಕ್ ಸ್ಥಾಪನೆಗೆ ನಿರ್ಧರಿಸಲಾಗಿದೆ. ಈ ಬಾರಿ ಪಿಪಿಪಿ ಮಾದರಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಭೂಮಿ ಖರೀದಿ ಕುರಿತ ಪ್ರಕ್ರಿಯೆ ನಡೆದಿದ್ದು, ಜಮೀನು ನೀಡಲು ರೈತರು ಒಪ್ಪಿಕೊಂಡಿದ್ದಾರೆ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.

ತಿರುಮಣಿ ಸೌರ ವಿದ್ಯುತ್‌ ಘಟಕದ ನಿರ್ಮಾಣದ ನಂತರ ರಾರ‍ಯಪ್ಟೆ ಭಾಗದಲ್ಲಿ ಸುಮಾರು 10 ಸಾವಿರ ಎಕರೆ ಜಾಗದಲ್ಲಿ ಸೌರ ಘಟಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ ಸ್ಥಳೀಯ ರೈತರಿಗೆ ವರದಾನವಾಗಲಿದ್ದು, ಉದ್ಯೋಗ ಸೃಷ್ಟಿಯೂ ಸಾಧ್ಯವಾಗಿದೆ. ಜೊತೆಗೆ ಕೈಗಾರಿಕೆಗಳೂ ಸ್ಥಾಪನೆಯಾಗಲಿದೆ. ಅಷ್ಟು ಮಾತ್ರವಲ್ಲದೆ ಪಾವಗಡವು ವಿಶ್ವದ ಬೃಹತ್‌ ಸೌರ ವಿದ್ಯುತ್‌ ಘಟಕ ಆಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ.

ಮೊದಲ ಸೋಲಾರ್‌ ಪಾರ್ಕ್​ಗೆ 13,000 ಎಕರೆ ಜಮೀನನ್ನು ರೈತರಿಂದ ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗಿದೆ. ಈ ರೀತಿ ಪಡೆದುಕೊಂಡಿರುವ ಪ್ರತಿ ಎಕರೆ ಜಮೀನಿಗೆ ವಾರ್ಷಿಕವಾಗಿ 25 ಸಾವಿರ ಹಣವನ್ನು ಪಾವತಿ ಮಾಡಲಾಗುತ್ತಿದೆ. ಆದರೆ, ಈ ಬಾರಿ ಪಾವಗಡದ ಸೋಲಾರ್‌ ಪಾರ್ಕ್‌ ನಿರ್ಮಾಣಕ್ಕೆ ಬೇಕಾದ ಜಮೀನನ್ನು ಮೊದಲ ಯೋಜನೆಯಂತೆ ಅಷ್ಟೇ ದರ ನೀಡಿ ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಜೊತೆಗೆ ಯೋಜನೆಯಲ್ಲಿ ರೈತರನ್ನೂ ಪಾಲುದಾರರನ್ನಾಗಿ ಸೇರಿಸಿಕೊಳ್ಳುವ ನಿರ್ಧಾರ ಮಾಡಲಾಗಿದೆ.

ಹಾಗಾಗಿ, ಈ ಬಾರಿ ಪಿಪಿಪಿ ಮಾದರಿಯಲ್ಲಿ ಪಾವಗಡದ ಎರಡನೇ ಸೋಲಾರ್ ಪಾರ್ಕ್ ಸ್ಥಾಪನೆಯಾಗಲಿದೆ.
ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಪ್ರತಿ ಯೂನಿಟ್‌ಗೆ 3.50ಕ್ಕೆ ಗ್ರಾಹಕರನ್ನು ತಲುಪುತ್ತಿದ್ದು, ಕಡಿಮೆ ದರಕ್ಕೆ ವಿದ್ಯುತ್ ಲಭಿಸುತ್ತಿದೆ. ಇಷ್ಟೇ ದರದಲ್ಲಿ ಹೊಸ ಘಟಕದಲ್ಲಿಯೂ ವಿದ್ಯುತ್ ಉತ್ಪಾದನೆಯಾಗಲಿದೆ. ಇದು ಇಂಧನ ಇಲಾಖೆಗೆ ಹೆಚ್ಚುವರಿ ಹಣ ನೀಡಿ ವಿದ್ಯುತ್ ಖರೀದಿಸಬೇಕಾದ ಹೊರೆಯನ್ನು ತಗ್ಗಿಸಲಿದೆ. ಹಾಗಾಗಿ, ಸರ್ಕಾರ ಎರಡನೇ ಸೋಲಾರ್ ಪಾರ್ಕ್ ಸ್ಥಾಪನೆಗೆ ಮುಂದಾಗಿದೆ.

ಪ್ರಸ್ತುತ ವರ್ಷ ಈ ಸೋಲಾರ್‌ ಪಾರ್ಕ್‌ನಲ್ಲಿ ಇದುವರೆಗೆ 375 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆಯಾಗಿದೆ. ಕಳೆದ ಮೂರು ವರ್ಷಗಳಿಂದಲೂ ಇದೇ ರೀತಿ 370 ದಶಲಕ್ಷಕ್ಕೂ ಹೆಚ್ಚು ವಿದ್ಯುತ್‌ ಉತ್ಪಾದಿಸುತ್ತ ಬರುತ್ತಿದ್ದು, ಹೊಸ ಸೋಲಾರ್ ಪಾರ್ಕ್​ನಿಂದ 350 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯ ಗುರಿ ಇರಿಸಿಕೊಳ್ಳಲಾಗಿದೆ. ಒಂದು ವೇಳೆ ಯೋಜನೆ ಆರಂಭಗೊಂಡರೆ ಜಗತ್ತಿನ ಅತಿದೊಡ್ಡ ಸೋಲಾರ್ ಪಾರ್ಕ್ ಎನ್ನುವ ಗರಿಮೆ ಮತ್ತೆ ರಾಜ್ಯ ಅದರಲ್ಲಿಯೂ ವಿಶೇಷವಾಗಿ ಪಾವಗಡದ ಪಾಲಾಗಲಿದೆ. ಮುಂಬರುವ ವರ್ಷಗಳ ವಿದ್ಯುತ್ ಬೇಡಿಕೆಯನ್ನು ನಿಭಾಯಿಸಲು ಸಹಕಾರಿಯಾಗಲಿದೆ.

ಸದ್ಯ ಸೋಲಾರ್ ಪಾರ್ಕ್ ಆರಂಭಕ್ಕೆ ಬೇಕಿರುವ ಜಮೀನು ಗುತ್ತಿಗೆ ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ರೈತರ ಜತೆ ಮಾತುಕತೆ ಆಗುತ್ತಿದೆ. ಒಡಂಬಡಿಕೆಯಾದ ನಂತರ ಜಮೀನನ್ನು ಇಂಧನ ಇಲಾಖೆ ಸ್ವಾಧೀನಕ್ಕೆ ಪಡೆದುಕೊಂಡು ಸೋಲಾರ್ ಪಾರ್ಕ್ ನಿರ್ಮಾಣ ಕಾರ್ಯ ಆರಂಭಿಸಲಿದೆ. ಇದಕ್ಕಾಗಿ ಕೆಲ ತಿಂಗಳುಗಳ ಸಮಯ ಬೇಕಾಗಬಹುದು ಎನ್ನಲಾಗಿದೆ.

ರೈತರ ಹೆಸರಿನಲ್ಲೇ ಇರಲಿದೆ ಜಮೀನು: ಯೋಜನೆ ಕುರಿತು ಮಾಹಿತಿ ನೀಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್, ''ಪಾವಗಡದಲ್ಲಿ ಎರಡನೇ ಸೋಲಾರ್ ಪಾರ್ಕ್ ಸ್ಥಾಪನೆ ಮಾಡಲಾಗುತ್ತಿದೆ. 10 ಸಾವಿರ ಎಕರೆ ನೀಡಲು ರೈತರು ಒಪ್ಪಿಕೊಂಡಿದ್ದಾರೆ. ಜಮೀನು ರೈತರ ಹೆಸರಿನಲ್ಲೇ ಇರುತ್ತದೆ, ನಾವು ಲೀಸ್ ಮಾತ್ರ ಪಡೆದುಕೊಳ್ಳುತ್ತೇವೆ. ಪ್ರತಿವರ್ಷ ಅವರಿಗೆ ಈಗ ಕೊಡುತ್ತಿರುವಂತೆ ವಾರ್ಷಿಕ ಬಾಡಿಗೆ ಕೊಡುತ್ತೇವೆ. ಅಷ್ಟು ಮಾತ್ರವಲ್ಲದೆ, ರೈತರನ್ನು ಯೋಜನೆಯ ಪಾಲುದಾರರನ್ನಾಗಿ ಮಾಡಿಕೊಳ್ಳಲಾಗುತ್ತದೆ'' ಎಂದು ತಿಳಿಸಿದರು.

''ಕಲಬುರಗಿ, ರಾಯಚೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಸೋಲಾರ್ ಪಾರ್ಕ್ ಸ್ಥಾಪನೆಯ ಬೇಡಿಕೆ ಬಂದಿದೆ. ಆದರೆ, ಇತರ ಜಿಲ್ಲೆಗಳಲ್ಲಿ ಯೋಜನೆ ಕೈಗೆತ್ತಿಕೊಳ್ಳುವ ಮೊದಲು ಪಾವಗಡದ ಎರಡನೇ ಪಾರ್ಕ್​​ಗೆ ನಮ್ಮ ಮೊದಲ ಆಧ್ಯತೆಯಾಗಿದೆ. ಎರಡನೇ ಪಾರ್ಕ್ ಬಳಿಕ ಇತರ ಜಿಲ್ಲೆಗಳಲ್ಲಿಯೂ ಸೌರ ವಿದ್ಯುತ್ ಉತ್ಪಾದನೆಗೆ ವಾರ್ಷಿಕ ಪೂರಕ ಅವಕಾಶ, ಉತ್ಪಾದನಾ ಹೆಚ್ಚಳ ಸಾಮರ್ಥ್ಯ ನೋಡಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ'' ಎಂದು ಸ್ಪಷ್ಟನೆ ನೀಡಿದ್ದಾರೆ.

ಗ್ರೀನ್ ಎನರ್ಜಿ ಭವಿಷ್ಯದ ಇಂಧನವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಸಿರು ಇಂಧನ ಉತ್ಪಾದನೆಗೆ ಇಂಧನ ಇಲಾಖೆ ಆಧ್ಯತೆ ನೀಡುತ್ತಿದೆ. ಹಾಗಾಗಿ, ಸೋಲಾರ್ ಪಾರ್ಕ್ ಆರಂಭಕ್ಕೆ ಮುಂದಾಗಿದ್ದು, ಪಾವಗಡದ ಎರಡನೇ ಪಾರ್ಕ್ ಸ್ಥಾಪನೆಯಾದಲ್ಲಿ ಜಗತ್ತಿನ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದನಾ ತಾಣವಾಗಿ ಪಾವಗಡ ವಿಶ್ವ ಭೂಪಟದಲ್ಲಿ ಹೊಸ ದಾಖಲೆ ನಿರ್ಮಿಸಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕ ಸೇರಿ 17,836 ಕೋಟಿ ರೂ ಹೂಡಿಕೆಗೆ ಅಸ್ತು: 27 ಸಾವಿರ ಉದ್ಯೋಗ ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.