ETV Bharat / state

ಡಾ. ಅಂಜಲಿ ನಿಂಬಾಳ್ಕರ್​ಗೆ ಸಿಂಗಾರ ಪ್ರಸಾದ ನೀಡಿದ ಸೋಡಿಗದ್ದೆ ಮಹಾಸತಿ - Anjali Nimbalkar - ANJALI NIMBALKAR

ಭಟ್ಕಳದ ಸೋಡಿಗದ್ದೆ ಮಹಾಸತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಡಾ.ಅಂಜಲಿ ನಿಂಬಾಳ್ಕರ್ ಅವರು ವಿಶೇಷ ಪೂಜೆ ಸಲ್ಲಿಸಿದರು.

SPECIAL WORSHIP  SODIGADDE MAHASATI TEMPLE  UTTARA KANNADA  LOK SABHA ELECTION 2024
ಡಾ.ಅಂಜಲಿ ನಿಂಬಾಳ್ಕರ್​ಗೆ ಸಿಂಗಾರ ಪ್ರಸಾದ ನೀಡಿದ ಸೋಡಿಗದ್ದೆ ಮಹಾಸತಿ
author img

By ETV Bharat Karnataka Team

Published : Apr 13, 2024, 1:41 PM IST

ಅಂಜಲಿ ನಿಂಬಾಳ್ಕರ್​ಗೆ ಸಿಂಗಾರ ಪ್ರಸಾದ ನೀಡಿದ ಸೋಡಿಗದ್ದೆ ಮಹಾಸತಿ

ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಭಟ್ಕಳದ ಸೋಡಿಗದ್ದೆ ಮಹಾಸತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ಶುಭ ಸಂಕೇತ ಎನ್ನುವಂತೆ ದೇವರಿಂದ ಸಿಂಗಾರ ಪ್ರಸಾದವಾಗಿದೆ.

ಬೆಳಕೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪ್ರಚಾರ ಸಭೆಗೆ ತೆರಳುವ ಪೂರ್ವ ಸೋಡಿಗದ್ದೆ ಮಹಾಸತಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ದೇವರ ದರ್ಶನ ಪಡೆದು ಪ್ರಾರ್ಥಿಸಿಕೊಂಡರು. ಈ ವೇಳೆ ದೇಗುಲದ ಅರ್ಚಕರು ಸಿಂಗಾರವನ್ನೇರಿಸಿ, 'ಡಾ.ಅಂಜಲಿಯವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಪ್ರಸಾದ ನೀಡಿ ಅವರನ್ನು ಆಶೀರ್ವದಿಸಬೇಕು' ಎಂದು ಪ್ರಾರ್ಥಿಸಿಕೊಂಡರು. ಈ ವೇಳೆ, ದೇವರ ಶಿರಭಾಗದಿಂದ ಸಿಂಗಾರದ ಪ್ರಸಾದವಾಗಿದ್ದು, ನೆರೆದಿದ್ದವರೆಲ್ಲ ಒಮ್ಮೆ ರೋಮಾಂಚನಗೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಅವರ ಪತ್ನಿ, ಮಗಳು ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು ಇದ್ದರು.

ಓದಿ: ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎಗೆ ಬಹುಮತ ಬರಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ - Siddaramaiah

ETV Bharat Logo

Copyright © 2025 Ushodaya Enterprises Pvt. Ltd., All Rights Reserved.