ETV Bharat / state

ಶಿರಸಿ: ಸಚಿವ ಮಂಕಾಳು ವೈದ್ಯ ಭೇಟಿ ಬೆನ್ನಲ್ಲೇ 'ಭಗೀರಥ ಗೌರಿ' ತೋಡುತ್ತಿದ್ದ ಅಂಗನವಾಡಿ ಬಾವಿ ಬಂದ್

ಶಿರಸಿಯ ಗಣೇಶ ನಗರದ ಅಂಗನವಾಡಿ ಮಕ್ಕಳ ಕುಡಿಯುವ ನೀರಿಗಾಗಿ ತೋಡುತ್ತಿದ್ದ ಬಾವಿಯನ್ನು ಅಧಿಕಾರಿಗಳು ಮುಚ್ಚಿದ್ದಾರೆ.

ಅಂಗನವಾಡಿ ಬಾವಿ ಬಂದ್
ಅಂಗನವಾಡಿ ಬಾವಿ ಬಂದ್
author img

By ETV Bharat Karnataka Team

Published : Feb 19, 2024, 9:57 PM IST

ಶಿರಸಿ (ಉತ್ತರ ಕನ್ನಡ) : ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದ ಅಂಗನವಾಡಿ ಬಳಿ ತೋಡಲಾಗುತ್ತಿದ್ದ 'ಬಾವಿ' ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಬಾವಿಯನ್ನು ಬಂದ್ ಮಾಡಲಾಗಿದೆ.

ಗಣೇಶ ನಗರದ ಅಂಗನವಾಡಿ ಕೇಂದ್ರ 6ರಲ್ಲಿ "ಭಗೀರಥೆ ಗೌರಿ ನಾಯ್ಕ" ಅವರು ಮಕ್ಕಳಿಗಾಗಿ ಬಾವಿ ತೋಡಿ, ಕುಡಿಯುವ ನೀರಿನ‌ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದರು. ಕಳೆದ 15 ದಿನಗಳಿಂದ ಅವರು ಬಾವಿ ತೋಡುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಂದಾಜು 30 ಅಡಿ ಬಾವಿ ನಿರ್ಮಾಣ ಮಾಡಲಾಗಿತ್ತು. ಆದರೆ ಇದಕ್ಕೆ‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುಮತಿ ಇಲ್ಲ ಎಂಬ ಕಾರಣಕ್ಕೆ ಸಾಕಷ್ಟು ಗೊಂದಲ ಉಂಟಾಗಿತ್ತು. ಕೊನೆಗೆ ಗೌರಿ ನಾಯ್ಕ ತನ್ನ ಕೆಲಸವನ್ನು ತಾನು ಮಾಡುತ್ತೇನೆ ಎಂದು ಬಾವಿಯನ್ನು ತೋಡುವ ಕಾರ್ಯವನ್ನು ಮುಂದುವರಿಸಿದ್ದರು.

ಇದರಿಂದ ಸ್ವತಃ ಸಚಿವ ಮಂಕಾಳು ವೈದ್ಯ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ, ಗೌರಿ ನಾಯ್ಕ ಅವರನ್ನು‌ ಸನ್ಮಾನಿಸಿದ್ದರು. ಬಳಿಕ ವಯಸ್ಸಿನ ಕಾರಣ ಇನ್ಮುಂದೆ ಬಾವಿ ತೋಡದಂತೆ ಹಾಗೂ ಅದನ್ನು ಸರ್ಕಾರದಿಂದ ತೋಡುವುದಾಗಿ ಸಚಿವರು ಭರವಸೆ ಸಹ ನೀಡಿದ್ದರು. ಆದರೆ ಬಾವಿ ತೋಡಿ, ಮಕ್ಕಳಿಗೆ ನೀರು ಕೊಡುವುದಾಗಿ ಗೌರಿ ನಾಯ್ಕ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಸೋಮವಾರವೂ ಬಾವಿ ತೋಡುವ ಕೆಲಸ ಮುಂದುವರೆಸಿದ್ದರು.‌

ಈ ಹಿನ್ನೆಲೆಯಲ್ಲಿ ಇಂದು ಸಂಜೆ ಕಂದಾಯ ಇಲಾಖೆ, ತಾಲೂಕು ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸ್ಥಳೀಯ ಹುತ್ಗಾರ ಗ್ರಾಮ ಪಂಚಾಯತಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಅಲ್ಲದೆ, ತೋಡಿರುವ ಬಾವಿಯನ್ನು ಹಲಗೆಗಳಿಂದ ಮುಚ್ಚಿದ್ದಾರೆ. ಜೊತೆಗೆ ಬಾವಿಯ ಸುತ್ತ ತಾತ್ಕಾಲಿಕ ಕಂಬಗಳನ್ನು ನಿಲ್ಲಿಸಿ, ಅದಕ್ಕೆ ಹಗ್ಗ ಕಟ್ಟಲಾಗಿದೆ. ಅಲ್ಲದೆ, ಬಾವಿಗೆ ಹೋಗುವ ದಾರಿಯಲ್ಲಿ ಗೇಟ್ ನಿರ್ಮಿಸಿ, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇನ್ನು, ಈ‌ ಕುರಿತು ಸ್ಥಳದಲ್ಲಿದ್ದ ತಹಶೀಲ್ದಾರ್​ ಶ್ರೀಧರ ಮುಂದಲಮನಿ ಅವರು ಮಾತನಾಡಿ, 'ಸಹಾಯಕ ಆಯುಕ್ತರ ನಿರ್ದೇಶನದಂತೆ ಇಲ್ಲಿ ತೋಡಿದ್ದ ಬಾವಿಯನ್ನು ಹಲಗೆ ಬಳಸಿ, ತಾತ್ಕಾಲಿಕವಾಗಿ ಮುಚ್ಚಲಾಗಿದೆ' ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಅಂಗನವಾಡಿ ಮಕ್ಕಳಿಗಾಗಿ ಬಾವಿ ತೋಡುತ್ತಿರುವ ಸ್ಥಳಕ್ಕೆ ಸಚಿವ ಮಂಕಾಳ ವೈದ್ಯ ಭೇಟಿ; ಭಗೀರಥ ಮಹಿಳೆಗೆ ಸನ್ಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.