ETV Bharat / state

ವಿಜಯಪುರ: ಶಾಲಾ ಬಸ್‌ ಹರಿದು ಅಂಗನವಾಡಿಗೆ ಹೊರಟ ಬಾಲಕ ಸಾವು - Anganwadi Student Died

ಖಾಸಗಿ ಶಾಲಾ ಬಸ್‌ ಹರಿದ ಪರಿಣಾಮ ಅಂಗನವಾಡಿಗೆ ತೆರಳುತ್ತಿದ್ದ ಬಾಲಕ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

bus accident
ಬಾಲಕನ ಮೇಲೆ ಹರಿದ ಬಸ್​ (ETV Bharat)
author img

By ETV Bharat Karnataka Team

Published : Aug 7, 2024, 8:29 AM IST

Updated : Aug 7, 2024, 9:02 AM IST

ವಿಜಯಪುರ: ಅಂಗನವಾಡಿಗೆ ತೆರಳಲು ರಸ್ತೆ ದಾಟುವ ವೇಳೆ ಖಾಸಗಿ ಶಾಲಾ ಬಸ್‌ ಹರಿದು 5 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಅರಳದಿನ್ನಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.

ಆಲಮಟ್ಟಿ ಜಲಾಶಯದ ಕೆಳಪಾತ್ರದ ಕೂಗಳತೆ ದೂರದಲ್ಲಿರುವ ಅರಳದಿನ್ನಿ ಗ್ರಾಮದ ಬಸವರಾಜ (5) ಮೃತ ಬಾಲಕ. ಅಂಗನವಾಡಿಗೆ ಹೊರಟಾಗ ಬಾಲಕನ ಮೇಲೆ ಖಾಸಗಿ ಶಾಲಾ ಬಸ್‌ ಹರಿದಿದ್ದು, ಸ್ಥಳದಲ್ಲೇ ಮೃತನಾಗಿದ್ದಾನೆ. ಘಟನೆಯಲ್ಲಿ ಪುಟ್ಟ ಮಗನ ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಘಟನೆಯಿಂದ ಗ್ರಾಮದಲ್ಲಿ ಶೋಕ ಆವರಿಸಿದೆ. ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಚಾಲಕ ಲೈಸೆನ್ಸ್‌ ಹೊಂದಿರುವ ಬಗ್ಗೆ ಪರಿಶೀಲಿಸಬೇಕು. ಇಂತಹ ಘಟನೆಗಳು ಮರುಕಳಿಸಬಾರದು. ನುರಿತ ವಾಹನ ಚಾಲಕರನ್ನು ಶಾಲೆಯವರು ನೇಮಿಸಿಕೊಳ್ಳಬೇಕು. ಬಾಲಕನ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಿ, ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ನಿಡಗುಂದಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾರವಾರದ ಕಾಳಿ ಸೇತುವೆ ಕುಸಿತ: ನದಿಗೆ ಬಿದ್ದ ಟ್ರಕ್, ಅದೃಷ್ಟವಶಾತ್ ಪಾರಾದ ಚಾಲಕ - Kali Bridge Collapse

ಪ್ರತ್ಯೇಕ ಘಟನೆ, ವ್ಯಕ್ತಿ ಆತ್ಮಹತ್ಯೆ: ರೈಲ್ವೆ ಹಳಿ ಮೇಲೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಇಂಡಿ ರೈಲು ನಿಲ್ದಾಣದಲ್ಲಿ ನಡೆದಿದೆ. ವಿಜಯಪುರದಿಂದ ಸೋಲಾಪುರಕ್ಕೆ ಹೋಗುವ ಡೆಮೋ ರೈಲ್ವೆ ಹಳಿಯಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತಪಟ್ಟಿರುವ ವ್ಯಕ್ತಿಯ ಹೆಸರು, ಗುರುತು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ವಿಜಯಪುರ ರೈಲ್ವೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Last Updated : Aug 7, 2024, 9:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.