ETV Bharat / state

ಕಾಡಾನೆ ಹಾವಳಿ ತಪ್ಪಿಸಲು ಕರ್ನಾಟಕ-ಆಂಧ್ರ ಮಾಡಿಕೊಂಡ ಒಪ್ಪಂದದಲ್ಲಿ ಏನಿದೆ? - Human Animal Conflict

author img

By ETV Bharat Karnataka Team

Published : Aug 8, 2024, 7:07 PM IST

ಆನೆ ಹಾಗೂ ಮಾನವ ಸಂಘರ್ಷ, ರಕ್ತಚಂದನ ಅಕ್ರಮ ಸಾಗಾಟ ನಿಯಂತ್ರಣ ಸೇರಿ ಹಲವು ಅಂಶಗಳ ಬಗ್ಗೆ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಅರಣ್ಯ ಇಲಾಖೆ ಸಚಿವ ಪವನ್ ಕಲ್ಯಾಣ್ ಅವರು ಬೆಂಗಳೂರಿನಲ್ಲಿಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆ ಚರ್ಚೆ ನಡೆಸಿದರು.

ಸಚಿವ ಈಶ್ವರ್ ಖಂಡ್ರೆ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್
ಸಚಿವ ಈಶ್ವರ್ ಖಂಡ್ರೆ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ (ETV Bharat)

ಬೆಂಗಳೂರು: ಆನೆ ಹಾಗೂ ಮಾನವ ಸಂಘರ್ಷ ತಡೆಯುವ ಸಲುವಾಗಿ ನೆರೆರಾಜ್ಯ ಅಂಧ್ರ ಪ್ರದೇಶಕ್ಕೆ ನುರಿತ ಕೌಶಲ್ಯ ತಂಡ ಕಳುಹಿಸಲಾಗುವುದು. ಪಳಗಿಸಿದ (ಕುಮ್ಕಿ) ಆನೆಯನ್ನು ನೀಡುವ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಈ ಕುರಿತು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಖಂಡ್ರೆ, ಆಂಧ್ರದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಆನೆಗಳ ಹಾವಳಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು, ರೈಲ್ವೆ ಬ್ಯಾರಿಕೇಡ್ ಅಳವಡಿಕೆಯ ಯಶಸ್ಸು, ಕಾಡಾನೆಗಳ ಸೆರೆ ಕಾರ್ಯಾಚರಣೆ, ಆನೆ ಪಳಗಿಸುವುದು ಮತ್ತು ಮಾವುತರ ತರಬೇತಿ ಕುರಿತಂತೆ ಚರ್ಚಿಸಲು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತಮ್ಮ ರಾಜ್ಯದ ಉನ್ನತ ಅರಣ್ಯಾಧಿಕಾರಿಗಳೊಂದಿಗೆ ರಾಜ್ಯಕ್ಕೆ ಆಗಮಿಸಿ ಚರ್ಚೆ ನಡೆಸಿದರು.

ದಸರಾ ಆನೆಗಳನ್ನು ಯಾವುದೇ ರಾಜ್ಯಕ್ಕೆ ನೀಡುವುದಿಲ್ಲ: ವನ್ಯಜೀವಿಗಳೊಂದಿಗೆ ಮಾನವ ಸಂಘರ್ಷ ತಡೆಯಲು ಕುಮ್ಕಿ ಆನೆಗಳನ್ನು ನೀಡುವಂತೆ ಆಂಧ್ರ ಮನವಿ ಮಾಡಿದೆ. ಆನೆ ನೀಡುವ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಆನೆ ಸೆರೆ ಹಿಡಿಯುವ ಕೌಶಲ್ಯ, ಪಳಗಿಸುವ ನೈಪುಣ್ಯತೆ ರಾಜ್ಯದ ಮಾವುತರಲ್ಲಿದೆ. ಹೀಗಾಗಿಯೇ ದೇಶದ ಇತರ ರಾಜ್ಯಗಳು ಪಳಗಿಸಿದ ಕುಮ್ಕಿ ಆನೆಗಳನ್ನು ನೀಡುವಂತೆ ಬೇಡಿಕೆ ಸಲ್ಲಿಸುತ್ತವೆ. ರಾಜ್ಯದಿಂದ ಈ ಹಿಂದೆ ಮಹಾರಾಷ್ಟ್ರ, ಛತೀಸ್​​ಗಡ ಸೇರಿದಂತೆ ಹಲವು ರಾಜ್ಯಗಳಿಗೆ ಕುಮ್ಕಿ ಆನೆಗಳನ್ನ ನೀಡಿದ್ದೇವೆ. ಆದರೆ ದಸರಾ ಆನೆಗಳನ್ನು ಯಾವುದೇ ರಾಜ್ಯಕ್ಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಆನೆಗಳಿರುವ ಕೀರ್ತಿ ನಮ್ಮ ರಾಜ್ಯಕ್ಕಿದೆ. ಹೆಚ್ಚು ಹುಲಿಗಳಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಅರಣ್ಯ, ವನಜೀವಿ ಸಂಪತ್ತಿನ ಜೊತೆಗೆ ಮಾನವ ಜೀವವೂ ಉಳಿಯಬೇಕು. ಈ ನಿಟ್ಟಿನಲ್ಲಿ ಎರಡು ರಾಜ್ಯಗಳ ನಡುವೆ ಚರ್ಚೆ ನಡೆಸಿ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಬರಲಾಗಿದ್ದು, ವಿಶ್ವ ಆನೆಗಳ ದಿನವಾದ ಆ.12ರಂದು ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದರು.

ತಿಳುವಳಿಕೆ ಒಪ್ಪಂದದಲ್ಲಿ ಏನಿದೆ?: ಆಂಧ್ರದಲ್ಲಿ ಪುಂಡಾನೆಗಳ ಹಾವಳಿ ತಪ್ಪಿಸಲು ರಾಜ್ಯದಿಂದ ಕಾವಾಡಿಗರು, ಮಾವುತರ, ಪಶು ವೈದ್ಯರು ಒಳಗೊಂಡ ನುರಿತ ಕೌಶಲ್ಯವಿರುವ ತಂಡ ಕಳುಹಿಸಲಾಗುವುದು. ಆನೆಗಳ ಹಾವಳಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು, ರೈಲ್ವೆ ಬ್ಯಾರಿಕೇಡ್ ಅಳವಡಿಕೆಯ ಯಶಸ್ಸು, ಕಾಡಾನೆಗಳ ಸೆರೆ ಕಾರ್ಯಾಚರಣೆ, ಆನೆ ಪಳಗಿಸುವುದು ಮತ್ತು ಮಾವುತರ ತರಬೇತಿ ನೀಡುವುದು, ಪರಿಸರ ಪ್ರವಾಸೋದ್ಯಮ, ರಕ್ತಚಂದನ ಅಕ್ರಮ ಸಾಗಾಟ ನಿಯಂತ್ರಣ, ಅರಣ್ಯ ಒತ್ತುವರಿ ನಿಯಂತ್ರಣಕ್ಕೆ ಉಪಗ್ರಹ ಆಧಾರಿತ ಜ್ಞಾನ ವಿನಿಮಯ ಸೇರಿ ಇನ್ನಿತರ ಅಂಶಗಳ ಬಗ್ಗೆ ತಿಳುವಳಿಕೆ ಒಪ್ಪಂದಲ್ಲಿರುವುದಾಗಿ ಸಚಿವರು ತಿಳಿಸಿದರು. ಇದೇ ವೇಳೆ ತಿರುಮಲ ಹಾಗೂ ಶ್ರೀಶೈಲದಲ್ಲಿ ದೇವಾಲಯಕ್ಕೆ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೋಗಲಿದ್ದು, ಸೂಕ್ತ ಮೂಲಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಮಾತನಾಡಿ, ವನ್ಯಜೀವಿಗಳೊಂದಿಗೆ ಮಾನವ ಸಂಘರ್ಷ ತಡೆಯುವುದು ಸೇರಿದಂತೆ ಏಳು ಅಂಶಗಳ ಬಗ್ಗೆ ಚರ್ಚೆ ಮಾಡಿ ಒಪ್ಪಂದ ಮಾಡಿಕೊಂಡಿದ್ದೇವೆ. ಇದೇ ತಿಂಗಳು 12ರಂದು ಈ ಒಪ್ಪಂದವಾಗಲಿದೆ. ಕರ್ನಾಟಕದಲ್ಲಿ ರಕ್ತ ಚಂದನ ಸಂರಕ್ಷಣೆಗೆ ಸಂಬಂಧಿಸಿ ನಾನು ಸುದ್ದಿ ನೋಡಿದೆ. 140 ಕೋಟಿ ರೂ ಮೌಲ್ಯದ ರಕ್ತಚಂದನ ಕರ್ನಾಟಕದಲ್ಲಿ ಸಂರಕ್ಷಣೆ ಮಾಡಿರುವುದನ್ನು ಕಂಡು ಖುಷಿಯಾಯಿತು. ರಾಜ್ಯದಲ್ಲಿ ಶ್ರೀಗಂಧ ಉಳಿಸಲು ಗಂಧದ ಗುಡಿ ಸಿನಿಮಾ ಮಾಡಿದರೆ ನಮ್ಮಲ್ಲಿ ರಕ್ತಚಂದನ ಬಗ್ಗೆ ಸಿನಿಮಾ ಮಾಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು. ಕರ್ನಾಟಕದಿಂದ ರಾಜ್ಯದ ಧಾರ್ಮಿಕ ಸ್ಥಳಗಳಾದ ಶ್ರೀಶೈಲಂ ಹಾಗೂ ತಿರುಮಲದಲ್ಲಿ ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದಂತೆ ಸಿಎಂ ಚಂದ್ರಬಾಬು ನಾಯ್ಡು ಜೊತೆಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಕನ್ನಡ ಕಲಿತು ಮಾತನಾಡುತ್ತೇನೆ: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ - DCM PAWAN KALYAN

ETV Bharat Logo

Copyright © 2024 Ushodaya Enterprises Pvt. Ltd., All Rights Reserved.