ಬೆಂಗಳೂರು: ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೂ ಶಿಕ್ಷೆ ಅನ್ನೋ ರೀತಿಯಲ್ಲಿ ಅನ್ಯ ಯುವಕರು ಮಾಡಿದ ಗಲಾಟೆಗೆ ಬೇರೆ ಯುವಕ ಬಲಿಪಶುವಾಗಿದ್ದಾನೆ. ಕುಡಿದ ಆಮಲಿನಲ್ಲಿ ಕಿಡಿಗೇಡಿಗಳ ಗುಂಪು ಹರಿತವಾದ ಆಯುಧದಿಂದ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮಿಥುನ್ ಹಲ್ಲೆಗೊಳಗಾದ ಯುವಕ. ಮಠದಹಳ್ಳಿಯಲ್ಲಿ ವಾಸವಾಗಿದ್ದ ಈತ ಪ್ಲಬಿಂಗ್ ಕೆಲಸ ಮಾಡುತ್ತಿದ್ದ. ಏಪ್ರಿಲ್ 13 ರಂದು ಸುಮಾರು 11.30 ವೇಳೆ ಮನೆಯಲ್ಲಿದ್ದ ಮಿಥುನ್ಗೆ ಜ್ಯೋತಿ ಬಾರ್ಗೆ ಬರುವಂತೆ ಸ್ನೇಹಿತನೊಬ್ಬ ಕರೆ ಮಾಡಿದ್ದ. ಇದರಂತೆ ಬಾರ್ಗೆ ಮಿಥುನ್ ಹೋಗಿದ್ದ. ಈ ಮಧ್ಯೆ ನಾಲ್ವರು ಅಪರಿಚಿತರು ಗಲಾಟೆ ಮಾಡಿಕೊಂಡಿದ್ದರು. ನಂತರ ಬಾರ್ ಮುಚ್ಚುತ್ತಿದ್ದಂತೆ ಇಬ್ಬರು ಮನೆಗೆ ಹೊರಡುವಾಗ ಗಲಾಟೆ ಮಾಡಿಕೊಂಡಿದ್ದ ನಾಲ್ವರು ಪೈಕಿ ಇಬ್ಬರು ಪುಂಡರು ಬಂದು ಗಲಾಟೆ ಮಾಡಿಕೊಂಡ ಎದುರಾಳಿ ಗುಂಪಿನವರ ಜೊತೆ ಇದ್ದೆ ಎಂದು ಹೇಳಿ ನನ್ನನ್ನು ಗುರಿಯಾಗಿಸಿಕೊಂಡು ಹರಿತವಾದ ಆಯುಧದಿಂದ ಕುತ್ತಿಗೆ ಎಡಭಾಗಕ್ಕೆ ಚುಚ್ಚಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಗಾಯಗೊಳಗಾದ ಮಿಥುನ್ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಆರ್.ಟಿ. ನಗರ ಪೊಲೀಸರು ಬಾರ್ನಲ್ಲಿ ಹಲ್ಲೆ ಮಾಡಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿತರ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಸಿಡಿಲು ಬಡಿದು ವ್ಯಕ್ತಿ ಸಾವು, ಮತ್ತೋರ್ವ ಗಂಭೀರ - Heavy Rain In Karnataka