ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ಸಂದರ್ಭ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆಗೈದು, ಪುಂಡಾಟಿಕೆ ಪ್ರದರ್ಶಿಸಿದ ವಿದೇಶಿ ಪ್ರಜೆಯನ್ನು ಬಿಐಎಎಲ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಜಿಂಬಾಬ್ವೆ ಮೂಲದ ರುಕುಡ್ಸೋ ಚಿರಿಕುಮಾರಾರ ಎಂದು ಗುರುತಿಸಲಾಗಿದೆ.
ಪ್ರವಾಸಿಗರ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಈತ ಬುಧವಾರ ಬೆಳಗ್ಗಿನ ಜಾವ 4:30ಕ್ಕೆ ದೆಹಲಿಗೆ ಪ್ರಯಾಣಿಸಲು ಏರ್ಪೋಟ್ಗೆ ಬಂದಿದ್ದಾನೆ. ಈ ವೇಳೆ ಎಲೆಕ್ಟ್ರಾನಿಕ್ ವಸ್ತುಗಳಿದ್ದ ಬ್ಯಾಗನ್ನು ತಪಾಸಣೆ ಮಾಡುವ ವೇಳೆ ಮಹಿಳಾ ಪ್ರಯಾಣಿಕರ ತಪಾಸಣೆಗಾಗಿ ಇರಿಸಲಾಗಿದ್ದ ಬೂತ್ ಪ್ರವೇಶಿಸಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಭದ್ರತಾ ಸಿಬ್ಬಂದಿಯ ನಿಯಂತ್ರಣದಲ್ಲಿರುವ ಪ್ರದೇಶ ಪ್ರವೇಶಿಸಲು ಯತ್ನಿಸಿದ್ದಾನೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದ ಸಿಐಎಸ್ಎಫ್ ಸಿಬ್ಬಂದಿ ಬಿಐಎಎಲ್ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಬಿಐಎಎಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಸಾಲ ತೀರಿಸಲು ಸರಗಳ್ಳತನ: ಸಾಲ ತೀರಿಸಲು ಹಣ ಹೊಂದಿಸಲೆಂದು ರೈಲಿನಲ್ಲಿ ಕಳ್ಳತನಕ್ಕಿಳಿದಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಕಂಟೋನ್ಮೆಂಟ್ ರೈಲ್ವೇ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೆ.ಬಾಲಾಜಿ (24) ಹಾಗೂ ಕಮಲನಾಥನ್.ಎಸ್.ಕೆ (42) ಬಂಧಿತರು.
ಇದನ್ನೂ ಓದಿ: ಚಾಮರಾಜನಗರ: ಪತ್ನಿ ಮಾಡಿದ ರೀಲ್ಸ್ನಿಂದ ಪತಿ ಆತ್ಮಹತ್ಯೆ