ETV Bharat / state

ಬೆಂಗಳೂರು: ಕ್ಯಾನ್ಸರ್‌ ಪತ್ತೆಗೂ ಬಂತು ಎಐ ಚಾಲಿತ ಸೈಬರ್‌ನೈಫ್‌-ಎಸ್ 7 ಸಿಸ್ಟಮ್; ದೇಶದಲ್ಲೇ ಮೊದಲು - AI DETECTS CANCER TUMOR

author img

By ETV Bharat Tech Team

Published : 2 hours ago

ವೈದ್ಯಕೀಯ ಲೋಕದಲ್ಲಿ ಎಐ ಕಾರ್ಯ ಬಹಳ ಮುಖ್ಯವಾಗಿದೆ. ಈಗ ಕ್ಯಾನ್ಸರ್‌ ಗಡ್ಡೆ ಪತ್ತೆಗೂ ಎಐ ಚಾಲಿತ ಸೈಬರ್‌ನೈಫ್‌-ಎಸ್ 7 ಸಿಸ್ಟಮ್ ಪ್ರಮುಖವಾಗಿ ಕಾರ್ಯ ನಿರ್ವಹಿಸಲಿದ್ದು, ಇದು ದೇಶದಲ್ಲೇ ಮೊದಲು ಎಂದು ತಿಳಿದುಬಂದಿದೆ.

CYBERKNIFE S7 SYSTEM  AI POWERED SYSTEM  CANCER TUMOR  BENGALURU
ಕ್ಯಾನ್ಸರ್‌ ಗಡ್ಡೆ ಪತ್ತೆಗೂ ಬಂದಿದೆ ಎಐ ಚಾಲಿತ ಸೈಬರ್‌ನೈಫ್‌-ಎಸ್ 7 ಸಿಸ್ಟಮ್ (ETV Bharat)

ಬೆಂಗಳೂರು: ವೈದ್ಯಕೀಯ ಲೋಕದಲ್ಲೂ ಎಐ ಪಾದಾರ್ಪಣೆ ಮಾಡಿದ್ದು, ಅದರ ಭಾಗವಾಗಿ ಇದೀಗ ಕ್ಯಾನ್ಸರ್‌ಕಾರ ಗಡ್ಡೆಯನ್ನು ನಿಖರವಾಗಿ ಪತ್ತೆ ಹಚ್ಚಲು ಸೈಬರ್‌ನೈಫ್‌-ಎಸ್7 ಎಂಬ ಎಐ ಚಾಲಿತ ಸಿಸ್ಟಮ್‌ಅನ್ನು ಹೆಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ದೇಶದಲ್ಲೇ ಮೊದಲ ಬಾರಿಗೆ ಅನಾವರಣಗೊಳಿಸಿದೆ.

ಈ ಕುರಿತು ಮಾತನಾಡಿದ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಬಿ. ಎಸ್‌. ಅಜಯ್‌ ಕುಮಾರ್, ವೈದ್ಯಕೀಯ ಲೋಕದಲ್ಲಿ ಎಐ ಅವಶ್ಯಕತೆ ಇದೆ. ಹೀಗಾಗಿ ನಮ್ಮ ಸಂಸ್ಥೆ ಕ್ಯಾನ್ಸರ್‌ ಗಡ್ಡೆಯನ್ನು ಯಾವುದೇ ಅಂಗದಲ್ಲಿದ್ದರೂ ಅದನ್ನು ನಿಖರವಾಗಿ ಕಂಡು ಹಿಡಿಯಲು ಎಐಅನ್ನು ಅಳವಡಿಸಿಕೊಂಡಿದೆ. ಕ್ಯಾನ್ಸರ್‌ ಗಡ್ಡೆಯನ್ನು ಪತ್ತೆಹಚ್ಚಲು ಸೈಬರ್‌ನೈಫ್‌ ಎಂಬ ತಂತ್ರಜ್ಞಾನ ಪ್ರಸ್ತುತ ಚಾಲ್ತಿಯಲ್ಲಿದೆ. ಇದರ ನವೀಕೃತ ಆವೃತ್ತಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಈ ನೂತನ ಎಐ ಚಾಲಿತ ಸೈಬರ್‌ನೈಫ್‌ -ಎಸ್ 7 ಕ್ಯಾನ್ಸರ್‌ ಗಡ್ಡೆ ಹಾಗೂ ಕ್ಯಾನ್ಸರ್‌ ಅಲ್ಲದ ಗಡ್ಡೆಗಳನ್ನು ಸಹ ನಿಖರವಾಗಿ ಗುರುತಿಸಿ ಅದನ್ನು ತೆಗೆದುಹಾಕುವಲ್ಲಿ ಹೆಚ್ಚು ಅತ್ಯಾಧುನಿಕವಾಗಿ ಸಹಕರಿಸಲಿದೆ. ಪ್ರಮುಖವಾಗಿ ಮೆದುಳು, ಶ್ವಾಸಕೋಶ, ಬೆನ್ನುಮೂಳೆ, ಪ್ರಾಸ್ಟೇಟ್ ಮತ್ತು ಹೊಟ್ಟೆ ಸೇರಿದಂತೆ ದೇಹದ ಯಾವುದೇ ಅಂಗದಲ್ಲಿ ಗಡ್ಡೆ ಬೆಳೆದಿದ್ದರೂ ಸುಲಭವಾಗಿ ಪತ್ತೆಹಚ್ಚಿ, ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದು ಎಂದು ಮಾಹಿತಿ ನೀಡಿದರು.

ಅಷ್ಟೇ ಅಲ್ಲದೆ, ಇದು ಮೊದಲ ಪ್ರಯತ್ನದಲ್ಲಿಯೇ ಫಲಿತಾಂಶ ಸಿಗಲಿದ್ದು, ಹೆಚ್ಚು ಸಮಯ ತೆಗೆದುಕೊಳ್ಳದೇ ಶಸ್ತ್ರಚಿಕಿತ್ಸೆ ನಡೆಸಬಹುದು. ಈ ಹಿಂದೆ ಚಾಲ್ತಿಯಲ್ಲಿದ್ದ ಸೈಬರ್‌ ನೈಫ್‌ನ ಮೂಲಕ 7,500ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.

ಓದಿ: 'ಸುಸೈಡ್​ ಕ್ಯಾಪ್ಸುಲ್‌'ನಲ್ಲಿ ವ್ಯಕ್ತಿ ಆತ್ಮಹತ್ಯೆ; ಸ್ವಿಟ್ಜರ್ಲೆಂಡ್​ನಲ್ಲಿ ನಡೆದ ಘಟನೆಯಿಂದ ಜಗತ್ತಿನಲ್ಲಿ ಸಂಚಲನ! - Suicide Capsule

ETV Bharat Logo

Copyright © 2024 Ushodaya Enterprises Pvt. Ltd., All Rights Reserved.