ಹೈದರಾಬಾದ್: ''ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ'' ಧಾರಾವಾಹಿ ಮೂಲಕ ವ್ಯಾಪಕವಾಗಿ ಹೆಸರುವಾಸಿಯಾಗಿರುವ ಕಿರುತೆರೆ ತಾರೆ ಹೀನಾ ಖಾನ್ ಅವರು ತಮ್ಮ ಬಹುಕಾಲದ ಗೆಳೆಯ ರಾಕಿ ಜೈಸ್ವಾಲ್ ಅವರೊಂದಿಗೆ ಗೋವಾದಲ್ಲಿ ಉತ್ತಮ ಕ್ಷಣಗಳನ್ನು ಕಳೆಯುತ್ತಿದ್ದಾರೆ. ನಟಿ ಈಗಾಗಲೇ ತಮ್ಮ ಪ್ರೀ ಬರ್ತ್ಡೇ ಸೆಲೆಬ್ರೇಶನ್ ಶುರು ಮಾಡಿದ್ದಾರೆ.
ಅಕ್ಟೋಬರ್ 2 ರಂದು ಹೀನಾ ಖಾನ್ ಜನ್ಮದಿನ ಆಚರಿಸಿಕೊಳ್ಳಲಿದ್ದು, ಅದಕ್ಕೂ ಮೊದಲು ನಟಿ ಇಂದು ತಮ್ಮ ಸ್ಪೆಷಲ್ ಫೋಟೋ ಶೇರ್ ಮಾಡಿದ್ದಾರೆ. ಬುಧವಾರ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ನಲ್ಲಿ ರಿಲ್ಯಾಕ್ಸಿಂಗ್ ಫೋಟೋ ಹಂಚಿಕೊಂಡಿದ್ದಾರೆ.
ಹೀನಾ ಅವರು ತಮ್ಮ ಗೋವಾ ಪ್ರವಾಸದ ಹಲವು ಫೋಟೋಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಂದರ ಹೋಟೆಲ್, ಕ್ಯಾಂಡಲ್ ಲೈಟ್ ಡಿನ್ನರ್ ಕ್ಷಣಗಳನ್ನು ಈ ಫೋಟೋಗಳಲ್ಲಿ ಕಾಣಬಹುದು. ಗ್ರೀನ್ ಫುಲ್ ಸ್ಲೀವ್ಸ್ ಡ್ರೆಸ್ ತೊಟ್ಟು ಕ್ಲಿಕ್ಕಿಸಿಕೊಂಡಿರುವ ಸ್ಪೆಲ್ಫಿ ಬಹಳ ಸುಂದರವಾಗಿದೆ. ಒಂದು ಚಿತ್ರದಲ್ಲಿ, ನಟಿ ಗೆಳೆಯ ರಾಕಿ ಜೊತೆ ಎಂಜಾಯ್ ಮಾಡುತ್ತಿರೋದನ್ನು ಕಾಣಬಹುದು. ಪ್ರತೀಕ್ ಕುಹಾದ್ ಅವರ ಕದಮ್ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದ್ದು, ನಟಿಯ ಧೈರ್ಯ ಮತ್ತು ಕಾಯಿಲೆ ವಿರುದ್ಧ ಹೋರಾಡುವ ಮನಸ್ಥಿತಿಯ ಸಾರವನ್ನು ಸೆರೆಹಿಡಿದಿದೆ.
ನಟಿ ಯಾವಾಗಲೂ ತಮ್ಮ ಆನ್-ಸ್ಕ್ರೀನ್ ಪ್ರತಿಭೆ ಮತ್ತು ಸ್ಥಿತಿಸ್ಥಾಪಕತ್ವ ಗುಣದಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಮೆಚ್ಚಿಸುತ್ತಿದ್ದರೂ ಕೂಡಾ ಅವರ ಆಫ್-ಸ್ಕ್ರೀನ್ ಪ್ರಯಾಣ ಬಹಳ ಸವಾಲುಗಳಿಂದ ಕೂಡಿದೆ. ಕೆಲ ದಿನಗಳ ಹಿಂದೆ, ಹೀನಾ ಖಾನ್ ಮೂರನೇ ಹಂತದ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವುದಾಗಿ ಬಹಿರಂಗಪಡಿಸಿದ್ದರು. ಈ ಸುದ್ದಿ ಅವರ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿತ್ತು. ಆದ್ರೆ ಬಹಳ ಧೈರ್ಯದಿಂದ ನಟಿ ಕಾಯಿಲೆ ವಿರುದ್ಧ ಹೋರಾಡುತ್ತಿದ್ದು, ಬಹಿರಂಗವಾಗಿ ತಮ್ಮ ಕಥೆಯನ್ನು ಹಂಚಿಕೊಳ್ಳುತ್ತಿದ್ದಾರೆ. ತಾರೆಯ ಸಕಾರಾತ್ಮಕ ದೃಷ್ಟಿಕೋನ ಅನೇಕರನ್ನು ಪ್ರೇರೇಪಿಸಿದೆ.
ಇದನ್ನೂ ಓದಿ: ಬಿಗ್ ಬಾಸ್ ಹೊಸ ಅಧ್ಯಾಯ: ಸುದೀಪ್ ಸೂತ್ರಧಾರಿ, ವೀಕ್ಷಣೆಗೆ ನೀವ್ ರೆಡಿನಾ? - Bigg Boss Kannada
ಚಿಕಿತ್ಸೆಗೆ ಒಳಗಾಗಿದ್ದರೂ, ಹೀನಾ ಜೀವನವನ್ನು ಬಹಳ ಪಾಸಿಟಿವ್ ಆಗಿ ಮುಂದುವರಿಸಿದ್ದಾರೆ. ಆಗಾಗ್ಗೆ ತಮ್ಮ ಪ್ರಯಾಣದ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ನಟಿಯ ಈ ಗುಣ ಪ್ರಪಂಚದಾದ್ಯಂತದ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಸಂಪಾದಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಪ್ರೀತಿ ಮತ್ತು ಬೆಂಬಲ ಸ್ವೀಕರಿಸುತ್ತಾರೆ. ಜೊತೆಗೆ ಫ್ಯಾನ್ಸ್ಗೆ ಧನ್ಯವಾದ ಅರ್ಪಿಸುತ್ತಾರೆ.
ನಟಿಯ ಹುಟ್ಟುಹಬ್ಬ ಸಮೀಪಿಸುತ್ತಿದೆ. ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಹೇಗೆ ಆಚರಿಸುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಅದರಲ್ಲೂ ಪ್ರೀ ಬರ್ತ್ಡೇ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆ, ಈ ಬಾರಿಯ ಜನ್ಮದಿನಾಚರಣೆ ಹೇಗಿರಬಹುದೆಂದು ಅಭಿಮಾನಿಗಳು ಉತ್ಸಾಹ ತೋರುತ್ತಿದ್ದಾರೆ. ನಟಿಯಾಗಿ ಮತ್ತು ಗಂಭೀರ ಆರೋಗ್ಯ ಸಮಸ್ಯೆ ವಿರುದ್ಧ ಹೋರಾಡುತ್ತಿರುವ ಹೀನಾ ಖಾನ್ ಅವರ ಧೈರ್ಯವು ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿದೆ.