ETV Bharat / state

ಕುಮಾರ ಬಂಗಾರಪ್ಪ‌ ಮನೆಗೆ ಫ್ಯಾನ್ಸ್​ ಮುತ್ತಿಗೆ ಪ್ರಕರಣ; ನಟ ಶಿವರಾಜ್ ಕುಮಾರ್ ಹೀಗಂದ್ರು - SHIVARAJ KUMAR REACTION

ಕುಮಾರ ಬಂಗಾರಪ್ಪ ಅವರ ಮನೆಯ ಮೇಲೆ ಅಭಿಮಾನಿಗಳ ಮುತ್ತಿಗೆ ಬಗ್ಗೆ ನಟ ಶಿವರಾಜಕುಮಾರ್ ನೋ ಕಮೆಂಟ್ಸ್​ ಎಂದಿದ್ದಾರೆ.

actor-shiva-rajkumar
ನಟ ಶಿವರಾಜ್ ಕುಮಾರ್ (ETV Bharat)
author img

By ETV Bharat Karnataka Team

Published : Jun 10, 2024, 3:24 PM IST

ನಟ ಶಿವರಾಜ್ ಕುಮಾರ್ (ETV Bharat)

ಶಿವಮೊಗ್ಗ: ಭಾನುವಾರ ಬೆಂಗಳೂರಿನಲ್ಲಿ ಸದಾಶಿವನಗರದ ಕುಮಾರ ಬಂಗಾರಪ್ಪನವರ ಮನೆ ಮುಂದೆ ಅಭಿಮಾನಿಗಳು ನಡೆಸಿದ ಧರಣಿ ಬಗ್ಗೆ ನಟ ಶಿವರಾಜ್ ಕುಮಾರ್ ನೋ ಕಮೆಂಟ್ಸ್​ ಎಂದಿದ್ದಾರೆ.

ಶಿವಮೊಗ್ಗದ ಆರ್ಯ ಈಡಿಗ ಸಮುದಾಯ ಭವನದಲ್ಲಿ ನಡೆದ ಚುನಾವಣಾ ಕೃತಜ್ಞತಾ ಸಭೆಯಲ್ಲಿ ಭಾಗಿಯಾಗುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿನ್ನೆ ನಡೆದ ಘಟನೆಯ ಬಗ್ಗೆ ನೋ ಕಮೆಂಟ್ಸ್. ದೇವರು ಇದ್ದಾನೆ, ನೋಡಿಕೊಳ್ಳುತ್ತಾನೆ ಎಂದರು.

ದೇವರಿಗಿಂತ ಹೆಚ್ಚಿನ ಶಕ್ತಿ ಯಾರಿಗೂ ಇಲ್ಲ, ಅಭಿಮಾನಿ ದೇವರು ಹಾಗೂ ದೇವರಿದ್ದಾನೆ ಎಂದರು. ಇಂತಹ ಘಟನೆ ನಡೆಯಬಾರದಿತ್ತು ಎಂಬ ಪ್ರಶ್ನೆಗೆ, ನಟರೆಂದ ಮೇಲೆ ಅಭಿಮಾನಿಗಳು ಇರುತ್ತಾರೆ. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ. ನಾನು ಆ ಬಗ್ಗೆ ಮಾತನಾಡುತ್ತಾ ಹೋದ್ರೆ ಮತ್ತೆ ಕಮೆಂಟ್ಸ್ ಬರುತ್ತದೆ. ಆದ್ರೆ ಅದು ಆಗುವುದು ಬೇಡ ಎಂದು ಹೇಳಿದರು.

ರಾಘವೇಂದ್ರ ನಮಗೆ ಶತ್ರುವಲ್ಲ: ನಾನು ಇಂದು ಚುನಾವಣಾ ಸೋಲಿ‌ನ ಬಗ್ಗೆ ಏನೂ ಮಾತಾಡಲ್ಲ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಚುನಾವಣೆಯಲ್ಲಿ ಗೆಲ್ಲುತ್ತೇವೆ ಅಂದುಕೊಂಡಿದ್ದೆವು. ಯಾರಾದರೂ ಒಬ್ಬರು ಗೆಲ್ಲಬೇಕಿತ್ತು. ರಾಘವೇಂದ್ರ ಅವರು ಗೆದ್ದಿದ್ದಾರೆ. ರಾಘವೇಂದ್ರ ನಮಗೆ ಶತ್ರುವಲ್ಲ, ಅವರೇನು ಬೇರೆ ಅಲ್ಲ. ಅವರು ಕೂಡ ನಮ್ಮವರೇ ಎಂದು ನಟ ಶಿವಣ್ಣ ತಿಳಿಸಿದರು.

ಇದನ್ನೂ ಓದಿ : ಶಿವಮೊಗ್ಗ : ಕುಮಾರ ಬಂಗಾರಪ್ಪ ಮನೆ ಮೇಲೆ ಮುತ್ತಿಗೆ ಖಂಡಿಸಿ ಬಿಜೆಪಿ ಪ್ರತಿಭಟನೆ - BJP PROTEST IN SORABA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.