ಬೆಂಗಳೂರು: ಅಂತರ್ಜಾಲದಲ್ಲಿ ಮಕ್ಕಳ ಆಶ್ಲೀಲ ವಿಡಿಯೋ ಹಾಗೂ ಭಾವಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ಸ್ನೇಹಿತರಿಗೆ ಹಾಗೂ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಶೇರ್ ಮಾಡುತ್ತಿದ್ದ ಆರೋಪಿಯನ್ನು ನಗರ ಪೂರ್ವ ವಿಭಾಗದ ಸೆನ್ ಠಾಣೆ ಪೊಲೀಸರು ಸೆರೆಹಿಡಿದಿದ್ದಾರೆ. ಅಸ್ಸಾಂ ಮೂಲದ ನೂರ್ ಇಸ್ಲಾಂ ಚೌದ್ರಿ ಬಂಧಿತ ಆರೋಪಿಯಾಗಿದ್ದಾನೆ.
ಮಕ್ಕಳ ಆಶ್ಲೀಲ ವಿಡಿಯೋಗಳು ಹಾಗೂ ಭಾವಚಿತ್ರಗಳನ್ನು ವೀಕ್ಷಿಸಿ, ಬಳಿಕ ಡೌನ್‌ಲೋಡ್ ಮಾಡಿಕೊಂಡು ಇತರರಿಗೆ ಶೇರ್ ಮಾಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ನೂರ್ ಇಸ್ಲಾಂ ಚೌದ್ರಿ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ.
ಪೋರ್ನೋಗ್ರಪಿಗೆ ಸಂಬಂಧಿಸಿದ ವೆಬ್ಸೈಟ್ನಿಂದ ಮಕ್ಕಳ ಆಶ್ಲೀಲ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಂಡು ತನ್ನ ಸ್ನೇಹಿತರು ಹಾಗೂ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಶೇರ್ ಮಾಡಿ ವಿಕೃತ ಆನಂದ ಪಡುತ್ತಿದ್ದ. ಈ ಬಗ್ಗೆ ಕೇಂದ್ರದಿಂದ ಬಂದ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೆಂಪೇಗೌಡ ಏರ್ಪೋರ್ಟ್ನ ನಿರ್ಬಂಧಿತ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣ: ಯೂಟ್ಯೂಬರ್ ಅರೆಸ್ಟ್ - youtuber arrested